
ಕೊರಟಗೆರೆ: ಪಟ್ಟಣ ಪಂಚಾಯಿತಿಯನ್ನ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಸಂಬ0ಧ ಗುರುವಾರ ನೆಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿ ಮಹತ್ವದ ಆದೇಶವನ್ನ ರಾಜ್ಯ ಸರ್ಕಾರ ಹೊರಡಿಸಿದೆ.
ಸಾಕಷ್ಟು ವರ್ಷಗಳಿಂದ ನೆನಗುದಿಗೆ ಬಿದಿದ್ದ ಕೊರಟಗೆರೆ ಪಪಂ ಯನ್ನ ಪುರಸಭೆಗೆ ಮೇಲ್ದರ್ಜೆಗೇರಿಸುವ ಕನಸನ್ನ ಗೃಹ ಸಚಿವ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಅವರ ಈಡೇರಿಸಿ ಕೊರಟಗೆರೆ ಜನತೆಗೆ ಸಿಹಿ ಸುದ್ದಿ ನೀಡಿ, ಕೊಟ್ಟ ಮಾತನ್ನ ಉಳಿಸಿಕೊಂಡಿದ್ದು, ಇದರಿಂದ ಕೊರಟಗೆರೆ ಪಟ್ಟಣ ಇನ್ನಷ್ಟು ಅಭಿವೃದ್ಧಿ ಮಾಡಲು ಗೃಹ ಸಚಿವರು ಪಣ ತೊಟ್ಟಿದ್ದಾರೆ ಎಂದು ಪಪಂ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆ ಪಟ್ಟಣ ಪಂಚಾಯಿತಿಯ ಈಗಿನ ಸರ್ವ ಸದಸ್ಯರು ಸಾಕಷ್ಟು ವರ್ಷಗಳಿಂದ ಪುರಸಭೆಯನ್ನ ಮೇಲ್ದರ್ಜೆಗೆ ಏರಿಸುವಂತೆ ಬೇಡಿಕೆಯನ್ನ ಗೃಹ ಸಚಿವ ಮುಂದೆ ಇಡಲಾಗಿತ್ತು. ಪುರಸಭೆಯನ್ನಾಗಿ ಮಾಡಲು ಸಾಕಷ್ಟು ಮಾನದಂಡಗಳಿದ್ದು, ಅದಕ್ಕೆ ಪೂರಕವಾಗಿ ದಾಖಲೆಗಳನ್ನ ನೀಡುವಂತೆ ಕೊರಟಗೆರೆ ಪಪಂ ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆಯನ್ನ ನೀಡಿದ್ದರು. ಅದರಂತೆ ಗುರುವಾರ ನಡೆದ ಸಚಿವ ಸಂಪುಟದಲ್ಲಿ ಕೊರಟಗೆರೆ ಪಪಂ ಯನ್ನ ಪುರಸಭೆಯನ್ನಾಗಿ ಅಂಗೀಕಾರವಾಗಿದೆ.
ಪುರಸಭೆಯಾದರೆ ಏನು ಲಾಭ..?
ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನ ಪುರಸಭೆ ಆದ ನಂತರ ವಿಸ್ತೀರ್ಣ ಜಾಸ್ತಿಯಾಗುತ್ತದೆ. ಪಟ್ಟಣದಿಂದ ೩.ಕಿಲೋ ಒಳಗೆ ಬರುವ ೧೩ ಗ್ರಾಮಗಳನ್ನ ಪುರಸಭೆಗೆ ಒಳಪಡುತ್ತವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಹರಿದು ಬರಲಿದೆ. ೧೩ ಗ್ರಾಮಗಳಲ್ಲಿ ನೀರು, ರಸ್ತೆ. ಚರಂಡಿ, ಸ್ವಚ್ಛತೆ ಸೇರಿದಂತೆ ಭೂಮಿಯ ಬೆಲೆಗಳು ಗಗನಕ್ಕೆ ಹೋಗುತ್ತವೆ. ಇದರಿಂದ ಪುರಸಭೆಗೆ ಅನೇಕ ಸೌಲಭ್ಯಗಳ ಹಾಗೂ ಪುರಸಭೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬರಲಿದೆ.
ಪುರುಸಭೆಗೆ ಯಾವ ಗ್ರಾಮಗಳು ಸೇರುತ್ತವೆ..
ಸಚಿವ ಸಂಪುಟ ಸಭೆಯಲ್ಲಿ ಕೊರಟಗೆರೆ ಪಪಂ ಯನ್ನ ಪುರಸಭೆಗೆ ಮೇಲ್ದರ್ಜೆಗೇರಿಸಿದ್ದು, ಪಟ್ಟಣದಿಂದ ಮೂರು ಕಿಲೋ. ಒಳಗೆ ಬರುವ ಹೂಲೀಕುಂಟೆ ಗ್ರಾಪಂ ವ್ಯಾಪ್ತಿಯ ದೇವರಹಳ್ಳಿ, ಹೊಸಹಳ್ಳಿ, ಕಾಮೇನಹಳ್ಳಿ, ಓಬಳದೇವರಹಳ್ಳಿ, ಗುಂಡಿನಪಾಳ್ಯ, ಚಿಕ್ಕೇಗೌಡನಹಳ್ಳಿ, ಕಾಮರಾಜನಹಳ್ಳಿ ತುಂಬಾಡಿ ಗ್ರಾಪಂಯ ಕಂಬದಹಳ್ಳಿ, ಹಂಚಿಹಳ್ಳಿ ಗ್ರಾಪಂಯ ಬೋಡಬಂಡೇನಹಳ್ಳಿ, ಮಲ್ಲೇಪುರ ಜಟ್ಟಿ ಅಗ್ರಹಾರ ಗ್ರಾಪಂ ವ್ಯಾಪ್ತಿಯ ಜಂಪೇನಹಳ್ಳಿ, ಕಲ್ಲಗುಟ್ಟರಹಳ್ಳಿ, ಹಾಗೂ ಅಗ್ರಹಾರ ಗ್ರಾಮಗಳು ಹಾಗೂ ಮಜರೆ ಗ್ರಾಮಗಳು ಕೊರಟಗೆರೆ ಪುರಸಭೆಗೆ ಬಳಪಡುತ್ತವೆ ಎಂದು ಆದೇಶವನ್ನ ರಾಜ್ಯ ಸರ್ಕಾರ ಹೊರಡಿಸಿದ್ದಾರೆ.
ಪುರಸಭೆಗೆ ಸದಸ್ಯರ ಸಂಖ್ಯೆ ಏರಿಕೆ: ೨೦೧೧ರ ಜನಗಣತಿ ಪ್ರಕಾರ ೨೪.೨೬೨ ಜನಸಂಖ್ಯೆ ಇದ್ದು, ೧೭.೫೩ ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, ಜನಸಾಂದ್ರತೆ ಪ್ರತಿ ಚ.ಕಿ.ಮೀಗೆ ೧೩೮೪ ಇದ್ದು, ಒಟ್ಟಾರೆ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗಳು ಶೇ.೬೯ ರಷ್ಟು ಇದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಾಗಲೇ ಪಪಂ ಯಲ್ಲಿ ೧೫ ವಾರ್ಡ್ಗಳು ಹೊಂದಿದ್ದು, ಪುರಸಭೆಯಾದ ನಂತರ ಜನರ ಸದಸ್ಯರು ೨೧ ರಿಂದ ೨೩ ಜನ ಸದಸ್ಯರು ತಂಡ ಆಯ್ಕೆಯಾಗಬೇಕಾಗುತ್ತದೆ. ೭೦೦ ರಿಂದ ೧೨೦೦ ಜನ ಸಂಖ್ಯೆಗೆ ಒಬ್ಬ ಸದಸ್ಯರು ಆಯ್ಕೆಯಾಗುತ್ತಾರೆ ಎನ್ನಲಾಗಿದೆ.



