ತುಮಕೂರು: ನಗರದ ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜಿನಲ್ಲಿ ೭೦ನೇ ಕನ್ನಡ ರಾಜೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ವಹಿಸಿದ್ದ ವಿ-ಟೆಕ್ ಸಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಜೆ ನಾಗಪ್ರಿಯರವರು ಕಾರ್ಯಕ್ರಮ ಕುರಿತು ಮಾತನಾಡಿ, ಕನ್ನಡ ಭಾಷಾಪ್ರೇಮ, ನಾಡಪ್ರೇಮ ಮಾತಿನಲ್ಲಿ ತಿಳಿಸುವಂತದಲ್ಲ. ಅದು ನಮ್ಮ ಮನದಿಂದ ಮೂಡಿಬರುವಂತದಾಗಬೇಕು. ಕನ್ನಡ ನಾಡು, ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಸದಾಕಾಲ ನಮ್ಮ ಮನದಲ್ಲಿ ಉಳಿಸಿಕೊಂಡಿರಬೇಕು. ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ರಂಗು ಎಲ್ಲೆಡೆ ತುಂಬಿರುವುದನ್ನು ನಾವು ಕಾಣುತ್ತೇವೆ. ಇಂದು ಇಲ್ಲಿ ಆ ರಂಗಿನೊ0ದಿಗೆ ವಿದ್ಯಾರ್ಥಿಗಳ ಶಿಸ್ತು ಒಟ್ಟುಗೂಡಿ ಮತ್ತಷ್ಟು ಸೊಗಸು ತುಂಬಿದೆ. ವಿದ್ಯಾವಾಹಿನಿ ಸಂಸ್ಥೆಯ ವಿದ್ಯಾರ್ಥಿಗಳು ಶಿಸ್ತಿಗೆ ಹೆಸರುವಾಸಿ ಎಂಬ ಮಾತನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದೀರಿ, ನಿಮ್ಮ ಬದುಕಿನುದ್ದಕ್ಕು ಶಿಸ್ತು ಬೆಳೆಸಿಕೊಂಡು ನಡೆಯಿರಿ. ಕನ್ನಡ ಭಾಷೆ ಉಳಿಸಿ, ಬೆಳೆಸುವ ಕಾರ್ಯಗಳು ನಿಮ್ಮಿಂದ ಸಾಗಲಿ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಾಲೇಜಿನ ಕನ್ನಡ ವಿಭಾಗದ ಕನ್ನಡ ಕೌಸ್ತುಭ ಬಳಗದ ಅಂಗವಾಗಿ ಹಲವು ಸ್ಪರ್ಧೆಗಳನ್ನು ನೆರವೇರಿಸಿದ್ದು,ಆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಹಲವು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತುಂಬಿದರು.ಈ ಸಂದರ್ಭದಲ್ಲಿ ವಿದ್ಯಾವಾಹಿನಿ ಪ್ರಥಮದರ್ಜೆಕಾಲೇಜಿನ ಉಪಪ್ರಾಂಶುಪಾಲರದ ಶಿಬಿನ್ ಹಾಗೂ ಎಲ್ಲಾ ಬೋಧಕ, ಭೋದಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡಿದ್ದರು.

(Visited 1 times, 1 visits today)