ಚಿಕ್ಕನಾಯಕನಹಳ್ಳಿ: ಮಕ್ಕಳು ಉತ್ತಮ ಅಂಕಗಳನ್ನುಗಳಿಸಿದರೇ ಸಾಲದು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಅವರಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುವಲ್ಲಿ ಪೋಷಕರ ಪಾತ್ರ ಮುಖ್ಯವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ತೀ.ನಂ.ಶ್ರೀ ಭವನದಲ್ಲಿ ಸರ್ಕಾರಿ ಪ್ರೌಢಶಾಲೆಯ ಪೋಷಕರು ಹಾಗೂ ಶಿಕ್ಷಕರ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಯಬೇಕು ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವಂತೆ ಪರೀಕ್ಷೆಯ ಕಾಲದಲ್ಲಿ ಓದುವುದನ್ನು ಬಿಟ್ಟು ಈಗಿನಿಂದಲೇ ಅದ್ಯಯನದ ಕಡೆ ಗಮನ ಹರಿಸಬೇಕು ಇದರಿಂದ ಪರೀಕ್ಷೆ ಎಂಬ ಜ್ವರ ಬರುವುದಿಲ್ಲ ಎಂದ ಅವರು ಪೋಷಕರು ಮಕ್ಕಳ ಮೇಲೆ ಒತ್ತಡವನ್ನು ಹಾಕದೇ ಅವರಿಗೆ ಉತ್ತಮ ರೀತಿಯಲ್ಲಿ ಮನವರಿಕೆ ಮಾಡುವ ಮೂಲಕ ಮಕ್ಕಳ ಮನಸ್ಸಲ್ಲಿ ಅವರಿಗೆ ಅರಿವು ಮೂಡುವಂತೆ ಮಾಡಬೇಕಿದೆ ಎಂದ ಅವರು ವಿದ್ಯಾಬ್ಯಾಸದೊಂದಿಗೆ ಕ್ರೀಡೆ, ಸಂಸ್ಕೃತಿಕ ಚಟುವಟಿಕೆಗಳತ್ತ ಗಮನ ಹರಿಸಬೇಕು. ಕಳೆದೆರಡು ವರ್ಷದಿಂದ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು ಇದು ಜಿಲ್ಲಾ ಕೆಡಿಪಿ ಸಭೆಯಲ್ಲಿ ಜಿಲ್ಲಾ ಮಂತ್ರಿಗಳು ಚರ್ಚೆ ಮಾಡುವಂತಾಗಿದ್ದು ಈ ವರ್ಷ ನಮ್ಮ ಸ್ಪರ್ಧೆಯು ರಾಜ್ಯ ಮಟ್ಟಕ್ಕೆ ಹೋಗುವಂತಹ ಕನಸು ಇದೆ ಈ ನಿಟ್ಟಿನಲ್ಲಿ ಎಲ್ಲಾ ಮಕ್ಕಳು ಓದಬೇಕು ಕೇವಲ ಎಸ್.ಎಸ್.ಎಲ್.ಸಿ ಗೆ ಬಂದಾಗ ಮಾತ್ರ ಓದದೆ ಪ್ರಾಥಮಿಕ ಶಾಲೆಯ ಹಂತದಲ್ಲೆ ಹೆಚ್ಚು ಅದ್ಯಯನ ಮಾಡಿದಾಗ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಓದಿನಗೊಂದಿಗೆ ಕೆಟ್ಟದ್ದರ ಕಡೆ ಗಮನ ಹರಿಸದೇ ಒಳ್ಳೆಯ ಪ್ರಜೆಗಳಾಗಬೇಕು ಪೋಷಕರು ಮಕ್ಕಳೊಂದಿಗೆ ಉತ್ತಮ ಬಾಂದವ್ಯ ಹೊಂದಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ವಿದ್ಯಾರ್ಥಿನಿ ವಚನ ಮಾತನಾಡಿ, ನೆಹರುರವರಿಗೆ ಮಕ್ಕಳ ಮೇಲಿದ್ದ ಪ್ರೀತಿಯನ್ನು ಅವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತಿದ್ದು ಸ್ವತಂತ್ರ‍್ಯ ಹೋರಾಟಕ್ಕೆ ಅವರ ಕೊಡುಗೆ ಹಾಗೂ ಅವರು ನಮ್ಮ ದೇಶದ ಪ್ರಧಾನಮಂತ್ರಿಯಾಗಿ ನಡೆಸಿದ ಆಡಳಿತವನ್ನು ನಾವು ಸ್ಮರಿಸಬೇಕಾಗಿದೆ ಎಂದ ಅವರು ಪೋಷಕರು ಮಕ್ಕಳ ಮೇಲೆ ಒತ್ತಡವನ್ನು ಹಾಕದೇ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇರುತ್ತದೆ ಎಂಬುದನ್ನು ಅರಿತುಕೊಂಡು ಆ ಮೂಲಕ ಮಕ್ಕಳಿಗೆ ಅವರು ಇಷ್ಟಪಟ್ಟ ವಿಷಯದ ಬಗ್ಗೆ ಅದ್ಯಯನ ಮಾಡಲು ಅವಕಾಶ ಮಾಡಿಕೊಡಬೇಕು ಮಕ್ಕಳ ಮೇಲೆ ತಮ್ಮ ಆಸೆ ಆಕಾಂಕ್ಷೆಗಳನ್ನು ಅವರ ಮೇಲೆ ಹಾಕಬಾರದು ಮಕ್ಕಳಿಗೆ ಸ್ವತಂತ್ರವಾಗಿ ಆಲೋಚನೆ ಮಾಡಿ ತೀರ್ಮನಿಸುವಂತಹ ಅವಕಾಶ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಬಿ.ಇ.ಒ ಕಾಂತರಜು ಮಾತನಾಡಿ, ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ನಡುವೆ ಉತ್ತಮವಾದ ಸಂಬAಧ ಇದ್ದಾಗ ಮಾತ್ರ ಮಕ್ಕಳು ಉತ್ತಮ ಸಾಧನೆ ಮಾಡುತ್ತಾರೆ ಹಾಗು ಭಯ ಭಕ್ತಿಯಿಂದ ಉತ್ತಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ ಸರ್ಕಾರಿ ಶಾಲೆಗಳಲ್ಲಿ ಇಂದು ಎಲ್ಲಾ ಸೌಲಭ್ಯಗಳೊಂದಿಗೆ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯುತ್ತಿದ್ದು ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್, ವಿದ್ಯಾರ್ಥಿ ಸುಹಾಸ್ ಸೇರಿದಂತೆ ಸುರೇಶ್, ಬಿ.ಸಿ.ಎಂ ಇಲಾಖೆಯ ಅಧಿಕಾರಿ ಜ್ಯೋತಿ ಹಾಗೂ ಪೋಷಕರು ಇದ್ದರು.

(Visited 1 times, 1 visits today)