
ತುಮಕೂರು: ಭಾರತ ಸರ್ಕಾರದಲ್ಲಿ ಮಕ್ಕಳ ರಕ್ಷಣೆಗೆ ಪ್ರತ್ಯೇಕವಾದ ಕಾಯ್ದೆ ಜಾರಿಯಾಗಿದ್ದು ಅದರ ಕುರಿತಾದ ಜಾಗೃತಿ ಮತ್ತು ಅರಿವು ಅವಶ್ಯಕ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆ ಟಿ ತಿಪ್ಪೇಸ್ವಾಮಿ ತಿಳಿಸಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜು ರಾಷ್ಟಿçà ಯ ಸೇವಾ ಯೋಜನಾ ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು ಮಕ್ಕಳ ಹಕ್ಕುಗಳ ಕುರಿತಾಗಿ ಮೊದಲು ಮಕ್ಕಳಿಗೆ ಅರಿವು ಮೂಡಿಸಬೇಕು. ಹಕ್ಕುಗಳ ಉಲ್ಲಂಘನೆಯಾಗದ0ತೆ ಪೋಷಕರಿಗೆ ಮತ್ತು ಸಮಾಜದ ನಾಗರಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.
ತಕ್ಷಣದ ತಪ್ಪಿನಿಂದ ಮಕ್ಕಳು ಶಾಶ್ವತ ದೂಷ ಣೆಗೆ ಒಳಗಾಗುತ್ತಾರೆ. ಅದರಿಂದ ಸಮಾಜದಲ್ಲಿ ಮಕ್ಕಳ ಏಳ್ಗೆ ಸಾಧ್ಯವಾಗುತ್ತಿಲ್ಲ. ನಮ್ಮ ದೇಶದ ಶೇಕಡಾ ನೂರರಷ್ಟು ಜನರಲ್ಲಿ ೪೦ ರಷ್ಟು ಮಕ್ಕಳೇ ಇದ್ದಾರೆ. ಪ್ರತಿ ವರ್ಷ ರಾಜ್ಯದಲ್ಲಿ ೫೦ ಸಾವಿರ ಕುಟುಂಬಗಳು ಪೋಕ್ಸೋ ಪ್ರಕರಣದಿಂದ ನಲುಗುತ್ತಿವೆ. ದಿನದಿಂದ ದಿನಕ್ಕೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ ಎಂದರು.
ಬಾಲನ್ಯಾಯ ಮಂಡಳಿ, ಮಕ್ಕಳ ರಕ್ಷಣಾ ಘಟಕ ಜುವನೈಲ್ ಜಸ್ಟೀಸ್ ಕಾಯ್ದೆಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕಾಗಿದೆ. ಈ ಕಾನೂನುಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಆಯೋಜಿಸಬೇಕೆಂದು ಈಗಾಗಲೇ ಆ ದೇಶ ಬಂದಿರುವುದರಿAದ ನವಂಬರ್ ತಿಂಗಳಲ್ಲಿ ಕಡ್ಡಾಯವಾಗಿ ಮಕ್ಕಳ ಗ್ರಾಮ ಸಭೆಯನ್ನು ನಡೆಸಲು ಆದೇಶಿಸಿದೆ. ಹೀಗಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಬಾಲಕಾರ್ಮಿಕ ಪದ್ಧತಿ, ಮಕ್ಕಳ ಕಳ್ಳ ಸಾಗಾಣಿಕೆ, ಭ್ರೂಣ ಹತ್ಯೆ , ಬಾಲ್ಯ ವಿವಾಹ, ಬಾಲಗರ್ಭಿಣಿಯರಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಬೇಕಿದೆ. ಅದಕ್ಕಾಗಿ ಪೋಷಕರು ಮತ್ತು ಸಮಾಜ ಕೈ ಜೋಡಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ದಾಕ್ಷಾಯಣಿ ಮಾತನಾಡಿ, ಮಕ್ಕಳ ದಿನಾಚರ ಣೆಯ ಸಂದರ್ಭದಲ್ಲಿ ಮಕ್ಕಳು ಎಷ್ಟರ ಮಟ್ಟಿಗೆ ಸುರಕ್ಷಿತರಾಗಿದ್ದಾರೆ ಎಂಬುದನ್ನು ಅವಲೋಕಿ ಸಬೇಕಿದೆ. ನಾಳಿನ ಭವಿಷ್ಯ ವಾದ ಮಕ್ಕಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಮೂಲಕ ಅವರನ್ನು ರಕ್ಷಿಸುವ ಪೋಷಿಸುವ ಜವಾಬ್ದಾರಿ ಸಮಾಜಕ್ಕಿದೆ. ಅದನ್ನು ಚಾಚೂ ತಪ್ಪದೆ ನಾವೆಲ್ಲರೂ ಪಾಲಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಪಲ್ಲವಿ ಎಸ್. ಕುಸುಗಲ್, ಡಾ. ಮೋಹನ್ ಪ್ರಕಾಶ್, ಡಾ. ಎಚ್.ಆರ್. ರೇಣುಕಾ, ಡಾ.ಜಿ. ಗಿರಿಜಮ್ಮ, ಮತ್ತಿತರರು ಭಾಗವಹಿಸಿದ್ದರು.



