ತುಮಕೂರು: ವಿದ್ಯಾರ್ಥಿ ಜೀವನದಲ್ಲೇ ಸಂಶೋಧನಾ ಹವ್ಯಾಸ ರೂಢಿಸಿಕೊಂಡರೆ ಮುಂದಿನ ದಿನಗಳಲ್ಲಿ ನಮಗೆ ಅನೇಕ ಹೊಸ ಹೊಸ ವಿಚಾರಧಾರೆಗಳಿಗೆ ಆಧಾರವಾಗುವ ಪಾರಂಪರಿಕ ಸಂಗತಿಗಳನ್ನು ತಿಳಿಯಲು ಸಹಾಯವಾಗುತ್ತದೆ. ಕಾಲಗರ್ಭದಲ್ಲಿ ಹುದುಗಿ ಹೋಗಿರುವ ಅನೇಕ ಸಂಗತಿಗಳು ಬೆಳಕಿಗೆ ಬರುವುದರ ಜೊತೆಗೆ ಸಮಾಜಕ್ಕೆ ಉಪಯುಕ್ತ ಸಂಗತಿಗಳನ್ನು ಒದಗಿಸಿದ ಸಂತೃಪ್ತಿ ಸಂಶೋಧಕನಿಗೆ ನೀಡುತ್ತದೆ ಎಂದು ಇತಿಹಾಸ ಸಂಶೋಧಕ ಡಾ ಡಿ ಎನ್ ಯೋಗೀಶ್ವರಪ್ಪ ನುಡಿದರು.
ಅವರು ನಗರದ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಹೆರಿಟೇಜ್ ಕ್ಲಬ್ ಮತ್ತು ಐತಿಹಾಸಿಕ ದಾಖಲೆಗಳ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಮೊದಲಿಗೆ ಕಬ್ಬಿಣದ ಮಹತ್ವ ಕಂಡುಹಿಡಿದವರು ಭಾರತೀಯರು ಎರಡನೇ ಚಂದ್ರಗುಪ್ತ ಮರ‍್ಯ ದೆಹಲಿಯಲ್ಲಿ ಸ್ಥಾಪಿಸಿರುವ ಕಬ್ಬಿಣದ ಸ್ತಂಭಕ್ಕೆ ೨೩೦೦ ವರ್ಷಗಳ ಇತಿಹಾಸವಿದೆ ಇಂದಿಗೂ ಅದು ತುಕ್ಕು ಹಿಡಿದಿಲ್ಲ ಈ ಕುರಿತು ದೇಶವಿದೇಶಗಳಲ್ಲಿ ಅನೇಕ ಸಂಶೊಧನೆಗಳು ನಡೆದಿವೆ ಆದರೂ ಇದರ ಕುರಿತು ಭಾರತದಲ್ಲಿ ಹೆಚ್ಚು ಸಂಶೋಧನೆಗಳಾಗಿಲ್ಲ ಈ ಸ್ತಂಭ ಭಾರತೀಯರ ತಂತ್ರಜ್ಞಾನದ ನಿಪುಣತೆಗೆ ಸಾಕ್ಷಿಯಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಸಂಶೋಧನೆಗೆ ವಿಪುಲವಾದ ಅವಕಾಶಗಳಿವೆ ಇವುಗಳನ್ನು ಯಾರೂ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಕೋಟಿ ಕೊತ್ತಲಗಳು ಕೆರೆಗಳಲ್ಲಿನ ನೀರಿನ ಹಂಚಿಕೆ ದೇವಾಲಯ ವಾಸ್ತುಶಿಲ್ಪ ಶಾಸನ ವೀರಗಲ್ಲುಗಳಂತಹ ಐತಿಹಾಸಿಕ ಆಕರಗಳ ಭಂಡಾರವೇ ಈ ಜಿಲ್ಲೆಯಲ್ಲಿದೆ ಪ್ರಾಗಿತಿಹಾಸದ ನೆಲೆಗಳು ಇಲ್ಲಿ ಹೇರಳವಾಗಿವೆ. ಇದುವರೆಗೂ ವಿಜಯನಗರದ ಚಕ್ರವರ್ತಿ ಕೃಷ್ಣದೇವರಾಯನ ಮರಣದ ನಿಖರವಾದ ದಾಖಲೆ ದೊರೆತಿರಲಿಲ್ಲ ಅದು ಈಗ ತುಮಕೂರು ನಗರದ ಸಮೀಪ ಇರುವ ಹೊನ್ನೇನಹಳ್ಳಿಯಲ್ಲಿ ದೊರೆತಿದ್ದು ನಾಡಿನ ಇತಿಹಾಸಕಾರರ ಗಮನವನ್ನು ಸೆಳೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಕೆ ದಕ್ಷಿಣಮೂರ್ತಿಯವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಊರಿನ ಬಗ್ಗೆ ಅಲ್ಲಿನ ಹಿರಿಯರು ಹೇಳುವ ವಿಚಾರಗಳನ್ನು ಸಂಗ್ರಹಿಸಿ ಪ್ರಬಂಧ ರಚನೆ ಮಾಡಿದರೆ ಅದು ನಿಮಗೆ ಸಂಶೋಧನೆಯಲ್ಲಿ ಆಸಕ್ತಿ ಮೂಡಿಸುತ್ತದಲ್ಲಿದೆ ಭವಿಷ್ಯಕ್ಕೆ ಅದು ಆಧಾರವಾಗಿ ಪರಿಗಣಿತವಾಗುತ್ತದೆ ಎಂದರು.
ವೇದಿಕೆಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾದ ಪ್ರೊ. ಕೆ ಪಿ ಶೀಲಾ ಹಾಜರಿದ್ದರು ಇತಿಹಾಸ ವಿಭಾಗದ ಮುಖ್ಯಸ್ಥ ಬಿ ರಮೇಶ್ ಸ್ವಾಗತಿಸಿ ದರು ಪ್ರೊ. ಲತಾ ಎಸ್ ವಂದಿಸಿದರು ಚಂದ್ರಿಕಾ ಹೆಚ್ ಎನ್ ನಿರೂಪಿಸಿದರು.

(Visited 1 times, 1 visits today)