ತುಮಕೂರು: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯ ದರ್ಶಿಗಳಿಗಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್-೨೦೨೫ರಡಿಯಲ್ಲಿ ಬರುವ ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗ ಳಿಗೆ ಸಂಬ0ಧಿಸಿದ ನಿಯಮಗಳ ಕುರಿತು ತರಬೇತಿ ಏರ್ಪಡಿಸಲಾಗಿತ್ತು.
ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಕೆ.ಪಿ. ಸಂಜೀವಪ್ಪ ೨೦೨೫-೨೬ನೇ ಸಾಲಿನ ಬಜೆಟ್ ಕಂಡಿಕೆಗಳು (ಕಂಡಿಕೆ-೨೭೨) ಆಯವ್ಯಯ ಘೋಷಣೆಯಂತೆ ಪಂಚಾ ಯತ್ ರಾಜ್ ವ್ಯವಸ್ಥೆಯ ಬಲವರ್ಧನೆಗಾಗಿ ಮತ್ತು ಗ್ರಾಮೀಣ ಜನರಿಗೆ ವ್ಯವಸ್ಥಿತ ರೀತಿಯಲ್ಲಿ ಸೇವೆಗಳನ್ನು ಒದಗಿಸುವ ಹಿತದೃಷ್ಟಿಯಿಂದ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿ ರುವ ಆಸ್ತಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲು ಇ-ಸ್ವತ್ತು ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದರು.
ತರಬೇತಿಯಲ್ಲಿ ತೆರಿಗೆ ದರಕ್ಕೆ ಒಳಪಡುವ ಆಸ್ತಿಗಳು, ತೆರಿಗೆ, ದರ ಮತ್ತು ಶುಲ್ಕವನ್ನು ವಿಧಿಸುವುದಕ್ಕಾಗಿ ಪ್ರಕ್ರಿಯೆ, ಹೊಸ ಆಸ್ತಿಗಳ ಸೇರ್ಪಡೆ, ಹೊಸ ಆಸ್ತಿಗಳ ಸೇರ್ಪಡೆ ಮೇಲ್ಮನವಿ, ತೆರಿಗೆ ನಿರ್ಧರಣಾ ವಿಧಾನ, ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆ ವಹಿಗಳು ೧೧ಎ ಆಸ್ತಿಗಳ ವರ್ಗೀಕರಣ, ೧೧ಬಿ ಆಸ್ತಿಗಳ ವರ್ಗೀಕರಣ, ಕಟ್ಟಡದ ವಿಧ ಮತ್ತು ದರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ರಾಜ್ಯ ಮಟ್ಟದಲ್ಲಿ ಹಮ್ಮಿಕೊಂಡಿದ್ದ ಇ-ಸ್ವತ್ತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸುಬ್ಬರಾಜು ಅರಸ್, ಗಂಗಾಧರ್, ಚಂದ್ರಹಾಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಬೇತಿ ನೀಡಿದರು.

(Visited 1 times, 1 visits today)