
ಪಾವಗಡ: ಇತ್ತೀಚೆಗೆ ಏಕೋ ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕಳ್ಳತನಗಳು ಹೆಚ್ಚಾಗುತ್ತಿದೆ ಗುರುವಾರ ಮಧ್ಯರಾತ್ರಿ ಒಂದು ಗಂಟೆಯಿ0ದ ೩ ಗಂಟೆ ಸಮಯದೊಳಗೆ ಮೂರು ಅಂಗಡಿಗಳ ಮೇಲ್ಚಾವಣಿಯನ್ನು ಕತ್ತರಿಸಿ ಕೆಳಗಿಳಿದ ಕಳ್ಳರು ಸುಮಾರು ೨.೬ ಲಕ್ಷ ನಗದು ದೋಚಿರುತ್ತಾರೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಅಶ್ವಿನಿ ಮಾರ್ಕೆಟಿಂಗ್. ಆರ್ ಎಸ್ ಮೆಗಾ ಹೋಲ್ಸೇಲ್. ಲಕ್ಷ್ಮಿ ಮಾರ್ಕೆಟಿಂಗ್ ಸರ್ವಿಸ್. ಮೂರು ಸಗಟು ವ್ಯಾಪಾರಿಗಳ ಅಂಗಡಿಗಳಲ್ಲಿ ರಾತ್ರಿ ಕಳ್ಳತನವಾಗಿರುವುದು ಬೆಳಗಿನ ಜಾವ ಬೆಳಕಿಗೆ ಬಂದಿದೆ ವಿಷಯ ತಿಳಿದು ಮಾಲೀಕರು ಅಂಗಡಿಗಳಿಗೆ ಬಂದ ನೋಡಿದಾಗ ಮೇಲ್ಚಾವಣಿಯನ್ನು ಕತ್ತರಿಸಿ ಒಳಗಿಳಿದಿರುವುದು ಸಿಸಿ ಕ್ಯಾಮೆರಾ ಗಳಲ್ಲಿ ರೆಕಾರ್ಡ್ ರೆಕಾರ್ಡ್ ಆಗಿರುವುದು ತಿಳಿದು ಬಂದಿದೆ ಸ್ಥಳಕ್ಕೆ ಪೊಲೀಸರು ಭೇಟಿ ಮುಂದಿನ ಕ್ರಮಕ್ಕೆ ಪರಿಶೀಲನೆ
ಸೋಲಾರ್ ಖ್ಯಾತಿಯಾದ ಪಾವಗಡ ಇತ್ತೀಚಿನ ದಿನಗಳಲ್ಲಿ ಕಳ್ಳತನಕ್ಕೆ ರಾಕೆಟ್ ವೇಗದಲ್ಲಿ ಖ್ಯಾತಿ ಹೊಂದಲು ಮುಂದುವರಿಯುತ್ತಿದೆ ಸಾರ್ವಜನಿಕ ವಲಯದಲ್ಲಿ ಅತಿ ಹೆಚ್ಚು ಆತಂಕಗಳು ಉಂಟಾಗುತ್ತಿದ್ದು ಸಾರ್ವಜನಿಕರು ತಾಲೂಕು ಆಡಳಿತ ಮತ್ತು ಜಿಲ್ಲಾ ಆಡಳಿತಕ್ಕೆ ಇಡಿ ಶಾಪ ಹಾಕುತ್ತಿದ್ದಾರೆ ಈ ರೀತಿ ಘಟನೆಗಳಿಗೆ ಪರಿಹಾರ ಯಾವಾಗ ಎಂಬುದೇ ಯಕ್ಷ ಪ್ರಶ್ನೆ ಆಗಿದೆ ಸಾರ್ವಜನಿಕರಲ್ಲಿ.
ಸರಣಿಗಳತನದಿಂದ ಬೇರೊಂದು ತಾಲೂಕಿನ ಪೊಲೀಸ್ ಇಲಾಖೆ ಅಧಿಕಾರಿಗಳು ಈ ಭಾಗಕ್ಕೆ ಬಂದು ಗಸ್ತು ನಡೆಸುತ್ತಿದ್ದಾರೆ ಎಂಬುದು ಸಹ ಮಾಹಿತಿ ಇದ್ದು.



