
ಚಿಕ್ಕನಾಯಕನಹಳ್ಳಿ: ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಜೈನರು ಸೇರಿದಂತೆ ಸಮಾಜದಲ್ಲಿ ಜಾತಿ ಹೆಸರಿನ ಮನಸ್ಥಿತಿಯಲ್ಲಿ ಜನರಿದ್ದಾರೆ. ಊರಿನಲ್ಲಿ ಜಾತ್ರೆಗಳು, ಹಬ್ಬ-ಹರಿದಿನವೆಂದಾಗ ನಾವೆಲ್ಲರೂ ಒಂದಾಗಿ ಹೋಗುತ್ತೇವೆ. ಪ್ರತಿ ಮನೆಗಳಲ್ಲಿ ಹಬ್ಬವಾದರೆ ಅಕ್ಕಪಕ್ಕದಲ್ಲಿ, ಪರಿಚಯಸ್ಥರಲ್ಲಿ ಯಾವದೇ ಜಾತಿಯಾದರೂ ಹೋಗುತ್ತೇವೆ, ಕರೆದು ಉಪಚರಿಸುತ್ತೇವೆ. ಅಂತಹ ಸಂಪ್ರದಾಯವನ್ನು ಎಲ್ಲರಿಗೂ ತಿಳಿದಿದೆ ಆದರೆ ಆ ಸಂಪ್ರದಾಯಕ್ಕೆ ತಾಲ್ಲೂಕಿನ ಮೂಲಕ ಮುನ್ನುಡಿ ಬರೆಯಲು ಈಗ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹೊರಟಿದೆ. ಇಡೀ ರಾಜ್ಯದ ಎಲ್ಲಾ ಸಮುದಾಯದ ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ನವಂಬರ್ ೨೬ ರಂದು ಭಾಗಿಯಾಗಿ ಸಾಕ್ಷಿಯಾಗಲಿದ್ದಾರೆ.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸರ್ವಧರ್ಮ ದಾರ್ಶನಿಕರ ಜಯಂತ್ಯೋತ್ಸವ ಕಾರ್ಯಕ್ರಮದ ಹೆಸರಿನಲ್ಲಿ ರಾಜ್ಯದಲ್ಲಿರುವ ಇಡೀ ಎಲ್ಲಾ ಸಮುದಾಯದ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಸಿಗಲಿದ್ದಾರೆ. ಈ ಸಮಾರಂಭದ ಮೂಲಕ ಇಡೀ ರಾಜ್ಯಕ್ಕೆ ನಾವೆಲ್ಲರೂ ಒಂದೇ, ನಾಮ ಹಲವು ದೇವರೊಬ್ಬನೆ ಎಂಬ0ತೆ, ನೂರಾರು ಜಾತಿಗಳಿದ್ದರೂ ನಾವೆಲ್ಲರೂ ಒಂದೇ ಜಾತಿ ಮನುಷ್ಯ ಜಾತಿ ಎಂಬ ಸಂದೇಶ ರವಾನೆಯಾಗಲಿದೆ ಎನ್ನುತ್ತಾರೆ ಕಾರ್ಯಕ್ರಮದ ಆಯೋಜಕರಾದ ಶಾಸಕ ಸಿ.ಬಿ.ಸುರೇಶ್ ಬಾಬು.
ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಜೈನರು ಸೇರಿದಂತೆ ಸಮಾಜದಲ್ಲಿ ಜಾತಿ ಹೆಸರಿನ ಮನಸ್ಥಿತಿಯಲ್ಲಿ ಜನರಿದ್ದಾರೆ. ಊರಿನಲ್ಲಿ ಜಾತ್ರೆಗಳು, ಹಬ್ಬ-ಹರಿದಿನವೆಂದಾಗ ನಾವೆಲ್ಲರೂ ಒಂದಾಗಿ ಹೋಗುತ್ತೇವೆ. ಪ್ರತಿ ಮನೆಗಳಲ್ಲಿ ಹಬ್ಬವಾದರೆ ಅಕ್ಕಪಕ್ಕದಲ್ಲಿ, ಪರಿಚಯಸ್ಥರಲ್ಲಿ ಯಾವದೇ ಜಾತಿಯಾದರೂ ಹೋಗುತ್ತೇವೆ, ಕರೆದು ಉಪಚರಿಸುತ್ತೇವೆ. ಅಂತಹ ಸಂಪ್ರದಾಯ ಎಲ್ಲರಿಗೂ ತಿಳಿದಿದೆ. ಆದರೆ ಆ ಸಂಪ್ರದಾಯ ಮನೆಗಳಲ್ಲಿ ಮಾತ್ರ ಸೀಮಿತವಾಗಬಾರದೆಂದು ಇಡೀ ತಾಲ್ಲೂಕಿನ ಮೂಲಕ ಮುನ್ನುಡಿ ಬರೆಯಲು ಹೊರಡಲಾಗಿದೆ. ಇಡೀ ರಾಜ್ಯದ ಎಲ್ಲಾ ಸಮುದಾಯದ ಸ್ವಾಮೀಜಿಗಳು ನವಂಬರ್ ೨೬ ರಂದು ನಡೆಯುವ ಸಮಾರಂಭದಲ್ಲಿ ಭಾಗಿಯಾಗಿ ಕಾರ್ಯಕ್ರಮ್ಕಕೆ ಸಾಕ್ಷಿಯಾಗಲಿದ್ದಾರೆ.
ಕುಲಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರು ನಮಗೆಲ್ಲ ಸಂದೇಶ ಸಾರಿ ಹೋಗಿದ್ದಾರೆ. ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಈ ಹಿಂದೆಯೇ ನಮಗೆ ದಾರಿದೀಪವಾಗಿದ್ದಾರೆ ಎಂಬ ಮಾತುಗಳು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದಲೇ ಮತ್ತೊಮ್ಮೆ ಎಲ್ಲೆಡೆ ಪಸರಿಸಲಿ ಎಂದು ಅದ್ದೂರಿ ಕಾರ್ಯಕ್ರಮವನ್ನು ಶಾಸಕರು ಮುಂದೆ ನಿಂತು ನಡೆಸುತ್ತಿದ್ದಾರೆ. ಇಂತಹ ಕಾರ್ಯಕ್ರಮ ರೂಪುಗೊಂಡಾಗ ಎಲ್ಲಾ ಸಮುದಾಯದ ಜನರು ಒಂದೇ ಕಡೆ ಸೇರುವುದರಿಂದ ಪರಸ್ಪರ ಜನರು ಪರಿಚಯವಾಗುತ್ತ ನಮ್ಮವರು, ತಮ್ಮವರು ಎಂಬ ಭಾವನೆ ಮೂಡುತ್ತದೆ, ಜನರಲ್ಲಿ ಜಾತಿ ತಾರತಮ್ಯ ಹೋಗುತ್ತದೆ.
೧೫ ಸಾವಿರ ಜನ ಭಾಗವಹಿಸುವ ನಿರೀಕ್ಷೆ : ಸರ್ವ ದಾರ್ಶನಿಕರ ಜಯಂತ್ಯೋತ್ಸವದ ಬಗ್ಗೆ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲೂ ಪ್ರಚಾರ ನಡೆದಿದೆ. ಅಲ್ಲಲ್ಲೇ ಪ್ಲೆಕ್ಸ್, ಹಂಚಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ಈಗಾಗಲೇ ಕಳೆದ ಒಂದು ತಿಂಗಳಿನಿ0ದಲೂ ಎಲ್ಲಾ ಸಮುದಾಯದ ಮುಖಂಡರ ಸಭೆಗಳನ್ನು ನಡೆಸಿ ಜನರನ್ನು ಸೇರಿಸಿ ಜನರಲ್ಲೂ ದಾರ್ಶನಿಕರ ಜಯಂತ್ಯೋತ್ಸವದ ಬಗ್ಗೆ ತಿಳಿಸಲು ಅರಿವು ಮೂಡಿಸಲಾಗಿದೆ.
ಕಾರ್ಯಕ್ರಮದ ನೆನಪಿಗೆ ತಾಲ್ಲೂಕು ಕಛೇರಿ ಮುಂದೆ ಕಂಚಿನ ಪುತ್ಥಳಿ : ೨೦೨೫ ನವಂಬರ್ ೨೬ ರಂದು ನಡೆಯುವ ಸರ್ವ ದಾರ್ಶನಿಕರ ಜಯಂತ್ಯೋತ್ಸವ ಅಂಗವಾಗಿ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಕಂಚಿನ ಪುತ್ಥಳಿ ಅನಾವರಣಗೊಳ್ಳಲಿದೆ.
೩೦ಕ್ಕೂ ಹೆಚ್ಚು ಸ್ವಾಮೀಜಿಗಳು, ಚರ್ಚ್ ಫಾದರ್, ಮುಸ್ಲಿಂ ಗುರುಗಳು: ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ತುಮಕೂರು ಸಿದ್ದಗಂಗಾ ಮಠದ ಪಟ್ಟಾಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮೀಜಿ ವಹಿಸಲಿದ್ದು ಇವರ ಜೊತೆ ರಾಜ್ಯದ ವಿವಿಧ ಮಠಗಳ ಸುಮಾರು ೩೦ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂದೇಶ ಸಾರಲಿದ್ದಾರೆ.
ಸ್ಥಬ್ದಚಿತ್ರಗಳ ಮೆರವಣಿಗೆ : ತಾಲ್ಲೂಕು ಆಡಳಿತ ಸೌಧದ ಮುಂಭಾಗದಿ0ದ ದಾರ್ಶನಿಕರ ಭಾವಚಿತ್ರವನ್ನೊಳಗೊಂಡ ಎಲ್ಲಾ ಸ್ತಬ್ಧಚಿತ್ರಗಳಿಗೆ ತಾಲ್ಲೂಕಿನ ಗೋಡೆಕೆರೆಯ ಮೃತ್ಯುಂಜಯದೇಶಿಕೇ0ದ್ರಸ್ವಾಮಿ, ತಮ್ಮಡಿಹಳ್ಳಿಯ ಶ್ರೀಅಭಿನವಮಲ್ಲಿಕಾರ್ಜುನಸ್ವಾಮಿಜಿ, ಕುಪ್ಪೂರು ಮಠದ ಶ್ರೀತೇಜೇಶ್ವೆರಶಿವಾಚಾರ್ಯಸ್ವಾಮಿ, ಮಾದಿಹಳ್ಳಿ ಹಿರೇಮಠದ ಶ್ರೀಚೆನ್ನಮಲ್ಲಿಕಾರ್ಜುನಶಿವಾಚಾರ್ಯಸ್ವಾಮಿ, ಯಳನಡುವಿನ ಶ್ರೀಜಗದ್ಗುರು ಜ್ಞಾನಪ್ರಭು ಸಿದ್ದರಾಮೇಶ್ವರದೇಶೀಕೇಂದ್ರಸ್ವಾಮಿ, ಶಿರಾ ಶಿಡ್ಲಕೊಣದ ಸಂಜಯಕುಮಾರಸ್ವಾಮಿಗಳಿ0ದ ಎಲ್ಲಾ ಸ್ತಬ್ಧಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಉದ್ಘಾಟಿಸಲಿದ್ದಾರೆ. ಮೆರವಣಿಗೆಯು ಪಟ್ಟಣದ ಬಿ.ಹೆಚ್.ರಸ್ತೆಯ ಮೂಲಕ ಖಾಸಗಿ ಬಸ್ನಿಲ್ದಾಣದ ಮೂಲಕ ನೆಹರು ವೃತ್ತದಿಂದ ಪಟ್ಟಣದ ಹೈಸ್ಕೂಲ್ ಮೈದಾನವನ್ನು ತಲುಪಲಿದೆ.



