
ಕುಣಿಗಲ್: ತಾಲ್ಲೂಕಿನ ಸಂತೆಪೇಟೆ ಗ್ರಾಮದ ಬಳಿ ಇರುವ ಜೆ.ಕೆ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಭಾನುವಾರ ತಡರಾತ್ರಿ ಬಿಯರ್ ಖರೀದಿಸಲು ಬಂದಿದ್ದ ಇಬ್ಬರು ಆಸಾಮಿಗಳು ಬಿಯರ್ ಪಡೆದು ನಂತರ ಹಣ ಕೇಳಿದ ಬಾರ್ ಕ್ಯಾಶಿಯರ್ ಗುರುಮೂರ್ತಿ ಎಂಬುವವರಿಗೆ ಕಾರಿನಲ್ಲಿದ್ದ ಮುಚ್ಚು ಲಾಂಗ್ ತಂದು ಬೇದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಭಯದ ವಾತವರಣ ನಿರ್ಮಿಸೆಕ ಸ್ಥಳದಿಂದ ಕಾಲ್ಕಿತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಕುಣಿಗಲ್ ಪೊಲೀಸರು ಕೆಲವೆ ಗಂಟೆಗಳಲ್ಲಿ ಬಂಧಿಸಿದ್ದಾರೆ ಕೆಂಪನಹಳ್ಳಿ ಗ್ರಾಮದ ಮಂಜುನಾಥ್ (೨೮) ಹಾಗೂ ನಿಟ್ಟೂರು ಗ್ರಾಮದ ಮನೋಜ್ ಅಲಿಯಾಸ್ ಸಣ್ಣ (೨೪) ಬಂಧಿತ ಆರೋಪಿಗಳು ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆಯ ಸಿಪಿಐ ಮಾಧ್ಯನಾಯಕ್ ಪಿಎಸ್‌ಐ ಅಮೂಲ್ ಅಭಯ್ ಹಾಗೂ ವಿಧಿವಿಜ್ಙಾನ ಪಯೋಗಲಾಯ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೃತ್ಯಕ್ಕೆ ಬಳಸಿರುವ ವಸ್ತುಗಳನ್ನು ವಶಕ್ಕೆ ಪಡೆದಿದ್ದು ಘಟನೆ ಸಂಬ0ಧ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ
(Visited 1 times, 1 visits today)



