ಚಿಕ್ಕನಾಯಕನಹಳ್ಳಿ:  ತಾಲ್ಲೂಕಿನಲ್ಲಿ ಆಯೋಜಿಸಲಾಗಿರುವ ಸರ್ವ ದಾರ್ಶನಿಕರ ಜಯಂತ್ಯುತ್ಸವವು ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ ಮತ್ತು ಪುರಸಭೆ ಚುನಾವಣೆಗಳ ಪೂರ್ವಸಿದ್ಧತಾ ಕಾರ್ಯಕ್ರಮವಾಗಿದೆ. ಅಲ್ಲದೆ, ಸಂವಿಧಾನ ಸಮರ್ಪಣಾ ದಿನದಂದು ಜಾತಿ ವ್ಯವಸ್ಥೆಯನ್ನು ಮಾಡಿ, ದಾರ್ಶನಿಕರ ಬಗ್ಗೆ ನುಡಿಯಲು ಆಯಾ ಜಾತಿಯ ಸ್ವಾಮೀಜಿಗಳನ್ನು ಆಹ್ವಾನಿಸಿರುವುದು ಸಂವಿಧಾನಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಆರೋಪಿಸಿದ್ದಾರೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾರ್ಶನಿಕರ ಬಗ್ಗೆ ತಮಗೂ ಗೌರವವಿದೆ.ಈ ಹಿಂದೆ, ೨೦೧೬ ಲ್ಲಿ ತಾಲ್ಲೂಕಿನಲ್ಲಿ ಶಾಸಕರ ವಿರುದ್ಧ ‘ಅಭಿವೃದ್ಧಿಯಲ್ಲಿ ಶೂನ್ಯ’ ಎಂಬ ವಿರೋಧಿ ಅಲೆಗಳು ಕೇಳಿ ಬಂದಾಗ ಖಾಸಗಿಯಾಗಿ ಸರ್ವಧ ರ್ಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ತಮ್ಮ ಮೇಲಿನ ಆರೋಪಗಳಿಗೆ ಧನಾತ್ಮಕ ಪರಿಣಾಮ ಬೀರಲು ಯತ್ನಿಸಿದ್ದರು. ಪ್ರಸ್ತುತ, ಶಾಸಕರಿಗೆ ತಾಲ್ಲೂಕಿಗೆ ಅನುದಾನ  ತರಲು ಅರ್ಹತೆ ಇಲ್ಲದ ಕಾರಣ, ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಕಾರ್ಯಕ್ರಮದ ಕರಪತ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಗಾಂಧೀಜಿ ಚಿತ್ರಗಳು ಬಿಟ್ಟರೆ, ಸರ್ವದಾರ್ಶನಿಕರ ಯಾವುದೇ ಚಿತ್ರಗಳಿಲ್ಲಾ. ಇದುವೆ ಕಾರ್ಯಕ್ರಮದ ವಿಫಲತೆಗೆ ಕಾರಣವಾಗಬಹುದು ಎಂಬ ಭಯದಿಂದ ಪುತ್ತಳಿಗಳನ್ನು ಅವಸರವಾಗಿ ನಿರ್ಮಾಣ ಮಾಡಿದ್ದಾರೆ. ಅಲ್ಲದೆ, ಎಲ್ಲಾ ಜನಾಂಗದ ಮತಗಳನ್ನು ಪಡೆಯುವ ಉದ್ದೇಶದಿಂದ ಸ್ವಾಮೀಜಿಗಳ ಚಿತ್ರವನ್ನು ಹಾಕಿಸಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನಿಸಲು ತುಮಕೂರು ಮತ್ತು ಬೆಂಗಳೂರಿಗೆ ಎಲ್ಲಾ ಜನಾಂಗದ ಮುಖಂಡರನ್ನು ಬಸ್ಗಳಲ್ಲಿ ಕರೆದುಕೊಂಡು ಹೋಗಲು ಬೇಕಾಗುವ ಹಣ ಎಲ್ಲಿಂದ ಬರುತ್ತಿದೆ ಎಂಬುದಕ್ಕೆ ಶಾಸಕರು ಉತ್ತರ ನೀಡಲಿ ಎಂದರು.

ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ. ಚಿಕ್ಕಣ್ಣ ಮಾತನಾಡಿ, ಈ ಕಾರ್ಯಕ್ರಮವು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆಯುತ್ತಿದ್ದರೂ, ಇದು ಜನತಾದಳದ ಕಾರ್ಯಕ್ರಮವೇ ಅ ಥವಾ ಸರ್ವ ಜನಾಂಗದ ಕಾರ್ಯಕ್ರಮವೇ ಎಂಬ ಸಂಶಯ ಮೂಡು ತ್ತಿದೆ. ಸರ್ಕಾರದಿಂದ ಯಾವುದೇ ಆದೇಶವಿಲ್ಲದಿದ್ದರೂ, ಸರ್ಕಾರಿ ಲೋಗೋ ಮತ್ತು ಸರ್ಕಾರಿ ಅಧಿಕಾರಿಗಳನ್ನು ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳ ಲಾಗುತ್ತಿದೆ. ದಾರ್ಶನಿಕರ ಜಯಂತಿಯನ್ನು ಆ ಮಹನೀಯರು ಹುಟ್ಟಿದ ದಿನವೇ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸೇವಾದಳ ಕಾರ್ಯದರ್ಶಿ ಕೃಷ್ಣೇಗೌಡ, ಬೇವನ ಹಳ್ಳಿ ಚನ್ನಬಸವಯ್ಯ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

(Visited 1 times, 1 visits today)