
ಶಿರಾ: ತಾಲೂಕು ಬುಕ್ಕಾಪಟ್ಟಣ ಹೋಬಳಿ ಮಂಗನಹಳ್ಳಿ ಗ್ರಾಮದಲ್ಲಿ ೨೦ನೇ ವರ್ಷದ ಅಯ್ಯಪ್ಪ ಸ್ವಾಮಿಯವರ ಪಡಿಪೂಜೆ ಹಾಗೂ ಇರುಮುಡಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಗ್ರಾಮದ ೩೫ಕ್ಕೂ ಹೆಚ್ಚು ಜನ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ಸಂಜೆ ಅಯ್ಯಪ್ಪ ಸ್ವಾಮಿಯವರ ದೇಗುಲದ ಪ್ರತಿಕೃತಿ ತಯಾರಿಸಿ ೧೮ ಮೆಟ್ಟಿಲುಗಳನ್ನು ಪೂಜಿಸಿ ಪಡಿಪೂಜೆಯನ್ನು ನೆರವೇರಿಸಿದರು. ಸೋಮವಾರ ೩೫ ಜನ ಮಾಲಾಧಾರಿಗಳಿಗೆ ಇರುಮುಡಿ ಶಬರಿಮಲೆಗೆ ಬಿಳ್ಕೊಡಲಾಯಿತು. ಗ್ರಾಮದ ಹಾಗೂ ಸುತ್ತಮು ತ್ತಲಿನ ಗ್ರಾಮಗಳ ಸಾವಿರಾರು ಜನ ಭಕ್ತಾದಿಗಳು ಆಗಮಿಸಿ ಭಕ್ತಿ ಭಾವಗಳಿಂದ ದೇವರಿಗೆ ನಮಿಸಿ ಕೃತಾರ್ಥರಾದರು, ಕಾರ್ಯಕ್ರಮದಲ್ಲಿ ಜಗದೀಶ್, ರಾಘವೇಂದ್ರ, ಕಾಂತರಾಜು, ರವಿಕುಮಾರ್, ಅರುಣ್ ಕುಮಾರ್, ಮಹಾಲಿಂಗಪ್ಪ, ರೇವಣ್ಣ, ವರುಣ್ ಎಂ ಸಿ, ಅರುಣ್, ವೇಣು ಗೋಪಾಲ್, ಪಾಯಿಂಟ್ ಗಂಗಾಧರ್, ರಂಗನಾಥ್ ಜೆ, ಕಾಮರಾಜು, ಜಯರಂಗಪ್ಪ, ಸೇರಿದಂತೆ ಗ್ರಾಮದ ಮುಖಂಡರು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿ ಗಳು ಸಾರ್ವ ಜನಿಕರು ಅಕ್ಕಪಕ್ಕದ ಅಯ್ಯಪ್ಪ ಸ್ವಾಮಿ ಮಂಡ ಳಿಗಳ ಸದಸ್ಯರು ಹಾಜರಿದ್ದರು.



