
ತುಮಕೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಕುರಿತು ಚರ್ಚೆಗಳು ನಡೆಯುತ್ತಿದ್ದು, ಇದುವರೆಗೂ ಮುಖ್ಯಮಂತ್ರಿ ಗಾಧಿಯಿಂದ ವಂಚಿತವಾಗಿರುವ ದಲಿತ ಸಮುದಾಯಕ್ಕೆ ಈ ಬಾರಿದಲಿತ ಸಮುದಾಯಕ್ಕೆ ಸೇರಿದ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಮುಖಂಡರುಗಳು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿದ್ದಾರೆ.
ನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್‌ಅವರ ಪ್ರತಿಮೆಗೆ ಪಾಲಾರ್ಪಣೆ ಮಾಡಿದ ನಂತರದಲಿತ ಮುಖ್ಯಮಂತ್ರಿಯಾಗಿ ೮ ವರ್ಷಗಳ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆತಂದ, ಗೃಹ ಮಂತ್ರಿಯಾಗಿ, ಹಲವಾರು ಮಂತ್ರಿ ಪದವಿಗಳ ಜವಾಬ್ದಾರಿ ನಿರ್ವಹಿಸಿರುವ ಡಾ.ಜಿ.ಪರಮೇಶ್ವರ್‌ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಮುಖಂಡರುಗಳು ಆಗ್ರಹಿಸಿದರು.
ದಲಿತ ಮುಖಂಡರಾದ ಟಿ.ಸಿ.ರಾಮಯ್ಯ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದ ೭೮ ವರ್ಷ ಕಳೆದರೂ ದಲಿತರಿಗೆ ಮುಖ್ಯಮಂತ್ರಿಗಾಧಿ ಸಿಕ್ಕಿಲ್ಲ. ಸಣ್ಣ ಸಣ್ಣ ಸಮುದಾಯಗಳ ಮುಖಂಡರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಆದರೆರಾ ಜ್ಯದಲ್ಲಿ ೧.೧೦ ಕೋಟಿ ಜನಸಂಖ್ಯೆ ಹೊಂದಿರುವ, ಸದಾಕಾಂಗ್ರೆಸ್ ಪಕ್ಷಕ್ಕಾಗಿಯೇ ದುಡಿಯವ ದಲಿತ ಸಮುದಾಯದ ವ್ಯಕ್ತಿಗಳನ್ನು ಮುಖ್ಯಮಂತ್ರಿಯಾಗಿಆಯ್ಕೆ ಮಾಡಿಲ್ಲ. ಪ್ರತಿ ಬಾರಿಅಧಿಕಾರ ಹಂಚಿಕೆ ವಿಚಾರ ಬಂದಾಗಲೂ ದಲಿತ ಮುಖ್ಯಮಂತ್ರಿ ವಿಚಾರವನ್ನು ಮುನ್ನೆಲೆಗೆ ತರುವಕಾಂಗ್ರೆಸ್ ಮುಖಂಡರು, ತಂದ ನಂತರ ಈ ವಿಚಾರವನ್ನು ನೈಪಥ್ಯಕ್ಕೆ ಸರಿಯುವಂತೆ ನೋಡಿಕೊಳ್ಳುತ್ತಾರೆ. ಇದೊಂದುರೀತಿ ಆಕಾಶದಲ್ಲಿ ಚಂದಮಾಮ ತೋರಿಸುವ ಪ್ರಕ್ರಿಯೆಯಾಗಿದೆ. ದಲಿತ ಮುಖ್ಯಮಂತ್ರಿ ನೇಮಕಕ್ಕೆ ಇದು ಸೂಕ್ತ ಕಾಲವಾಗಿದ್ದು, ಕಾಂಗ್ರೆಸ್ ಪಕ್ಷದ ಇನ್ನುಳಿದ ಎರಡವರೆ ವರ್ಷದ ಅವಧಿಗೆ ಗೃಹ ಸಚಿವರು,ಎಲ್ಲಾ ಸಮುದಾಯಗಳನ್ನು ಒಟ್ಟಿಗೆತೆಗೆದುಕೊಂಡು ಹೋಗುವ ಗುಣವುಳ್ಳ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬುದು ಸಮಸ್ತ ದಲಿತ ಜನಾಂಗದ ಒತ್ತಾಯವಾಗಿದೆ. ಕಾಂಗ್ರೆಸ್ ಈಗಲೂ ಮೀನಾಮೇಷ ಎಣಿಸಿದರೆ, ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ದಲಿತರು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಲಿತ ಮುಖಂಡರಾದ ಸಿ.ಭಾನುಪ್ರಕಾಶ್ ಮಾತನಾಡಿ, ಒಂದು ದೇವಾಲಯ ಕಟ್ಟಲು ದಲಿತರು ಬೇಕು. ಆದರೆ ದೇವಾಲಯದ ಒಳಗೆ ಮಾತ್ರದಲಿತರಿಗೆ ಪ್ರವೇಶವಿಲ್ಲ. ಇದೇ ಪರಿಸ್ಥಿತಿ ರಾಜಕೀಯ ವಲಯದಲ್ಲಿಯೂ ನಡೆಯುತ್ತಿದೆ. ಅಧಿಕಾರ ಹಂಚಿಕೆ ಬಂದ0ತಹ ಸಂದರ್ಭದಲ್ಲಿ ವ್ಯವಸ್ಥಿತವಾಗಿ ದಲಿತರನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿಕೊಂಡು ಬಂದಿದೆ. ಬಸವಲಿಂಗಪ್ಪ,ಕೆ.ಹೆಚ್.ರ0ಗನಾಥ್, ಮಲ್ಲಿಕಾರ್ಜುನಖರ್ಗೆ, ಮುನಿಯಪ್ಪ ಸೇರಿದಂತೆ ಹಲವರಿಗೆ ಆರ್ಹತೆ ಇದ್ದರೂ ಮುಖ್ಯಮಂತ್ರಿ ಮಾಡದೆ ವಂಚನೆ ಮಾಡಲಾಗಿದೆ. ಈ ಬಾರಿಯಾದರೂ ಎಲ್ಲಾ ವಿಧದಿಂದಲೂ ಆರ್ಹರಿರುವ ಡಾ.ಜಿ.ಪರಮೇಶ್ವರ್‌ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ದಲಿತರು ಕಾಂಗ್ರೆಸ್ ಪಕ್ಷದ ವಿರುದ್ದವಾಗಿ ಕೆಲಸ ಮಾಡಬೇಕಾಗುತ್ತದೆಎಂದರು.
ದಲಿತ ಮುಖಂಡರಾದ ಬಂಡೆ ಕುಮಾರ್ ಮಾತನಾಡಿ, ರಾಜ್ಯದ ಜನಸಂಖ್ಯೆಯಲ್ಲಿ ದಲಿತರು ಸಿಂಹಪಾಲು ಇದ್ದೇವೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಪ್ರತಿ ಬಾರಿ ಮುಖ್ಯಮಂತ್ರಿ ವಿಚಾರ ಬಂದಾಗದಲಿತರನ್ನು ವಂಚಿಸುವುದು ಸರ್ವೆ ಸಾಮಾನ್ಯವಾಗಿದೆ.ದಲಿತ ಸಮುದಾಯದ ಮುಖಂಡರಲ್ಲಿ ಡಾ.ಜಿ.ಪರಮೇಶ್ವರ್ ಮತ್ತುಕೆ.ಹೆಚ್.ಮುನಿಯಪ್ಪ ಇಬ್ಬರು ಜನಾಂಗದ ಕಣ್ಣುಗಳಿದ್ದಂತೆ.೭ ಬಾರಿ ಸಂಸದರಾಗಿದ್‌ಕೆ.ಹೆಚ್.ಮುನಿಯಪ್ಪ ಮತ್ತು ೮ ವರ್ಷ ಕೆ.ಪಿ.ಸಿಸಿ. ಅಧ್ಯಕ್ಷರಾಗಿ, ಪಕ್ಷವನ್ನುಅಧಿಕಾರಕ್ಕೆ ತಂದು, ಗೃಹ, ಉನ್ನತ ಶಿಕ್ಷಣ ಸೇರಿದಂತೆ ಮಹತ್ವದ ಹುದ್ದೆಗಳನ್ನು ನಿಭಾಯಿಸಿರುವ ಡಾ.ಜಿ.ಪರಮೇಶ್ವರ ಹೆಚ್ಚು ಸಮರ್ಥರಿದ್ದು, ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬುದು ಸಮಸ್ತ ದಲಿತರ ಒತ್ತಾಯವಾಗಿದೆ. ಕಾಂಗ್ರೆಸ್ ಈ ಹಿಂದಿನ0ತೆ ಏನಾದರೂ ನಿರ್ಲಕ್ಷ ಮಾಡಿದರೆ, ಇಡೀ ರಾಜ್ಯದಲ್ಲಿ ದಲಿತರು ಕಾಂಗ್ರೆಸ್ ಪಕ್ಷದ ವಿರುದ್ದವಾಗಿ ಕೆಲಸ ಮಾಡಬೇಕಾಗುತ್ತದೆ ಎಂದರು.
ಹಕ್ಕೋತ್ತಾಯ ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಟಿ.ಸಿ.ರಾಮಯ್ಯ, ಸಿ.ಭಾನುಪ್ರಕಾಶ್, ಬಂಡೆಕುಮಾರ್, ಹೆಗ್ಗೆರೆ ಕೃಷ್ಣಮೂರ್ತಿ,ಗೂಳರಿವೆ ನಾಗರಾಜು,ಮಾರುತಿ,ಛಲವಾದಿ ಶೇಖರ್, ಶಿವರಾಜು ಕೌತುಮಾರನಹಳ್ಳಿ,ರಂಗಸ್ವಾಮಿ ಬೆಳ್ಳಾವಿ, ಗೂಳೂರು ರಾಜಣ್ಣ, ರಾಮಮೂರ್ತಿ,ಮೋಹನ್‌ಕುಮಾರ್,ರಂಗನಾ ಥ್,ಹುಚ್ಚನರಯ್ಯ ಕೌತುಮಾರನಹಳ್ಳಿ, ಮಂಜುನಾಥ್‌ಜಯಪುರ, ದಯಾನಂದ್,ಕಿಸಾನ್ ಮೋರ್ಚಾಅಧ್ಯಕ್ಷಜಿ.ಎಲ್.ಗೌಡ, ರಂಗನಾಥ್ ಮತ್ತಿತರರು ಪಾಲ್ಗೊಂಡಿದ್ದರು.



