ಶಿರಾ: ತಾಲ್ಲೂಕಿನ ಜೀವ ನಾಡಿ ಮದಲೂರು ಕೆರೆ ಭರ್ತಿಯಾಗಿ ಸತತ ಕೊಡಿ ಬಿದ್ದ ಕಾರಣ ವಿಜೃಂಭಣೆಯ ತೆಪ್ಪೋತ್ಸವ ನೆಡೆಸಲು ರೈತ ಮತ್ತು ಜಯಚಂದ್ದ ಅಭಿಮಾನಿಗಳ ಬಳಗ ನಿರ್ಧರಿಸಿದ್ದು,

ಕಾರ್ಯಕ್ರಮ ಆಯೋಜಿಸುವ ಮದಲೂರು ಕೆರೆಗೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಡಿ. ಸಿ. ಅಶೋಕ್ ಶಿರಾ ತಾಲ್ಲೂಕ್ಕಿನ ಕುಡಿಯುವ ನೀರಿನ ಬರ ನೀಗಿಸಲು ಕಳೆದ ೨೩ ವರ್ಷಗಳಿಂದ ಹೋರಾಟ ಮಾಡಿ ಸತತವಾಗಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸಿ ಕಳ್ಳಂಬೆಳ್ಳ, ಶಿರಾ ದೊಡ್ಡ ಕೆರೆ, ಮದಲೂರು ಕೆರೆ ಸೇರಿದಂತೆ ೧೧ ಕೆರೆಗಳನ್ನು ಭರ್ತಿ ಮಾಡಿ ಬರದ ನಾಡಿನ ಬರವನ್ನು ನೀಗಿಸಿ, ಶಿರಾ ಜನತೆಯ ಕುಡಿಯುವ ನೀರಿನ ದಾಹ ನೀಗಿಸಿದ ನಿಜವಾದ ಭಗೀರಥ ಟಿಬಿ ಜಯಚಂದ್ರರವರು ಎಂದು ಹೇಳಿದರು.

ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಮಾತನಾಡಿ, ಡಿ. ೬ ಐತಿಹಾಸಿಕ ದಿನವನ್ನಾಗಿ ಮಾಡುವ ನಿಟ್ಟಿನಲ್ಲಿ ಮದಲೂರು ಕೆರೆಯಲ್ಲಿ ತೆಪ್ಪೋತ್ಸವನ್ನು ಏರ್ಪಡಿಸಿದ್ದು , ಪೂರ್ಣಿಕುಂಭದೊ0ದಿಗೆ ಶ್ರೀ ದುರ್ಗಮ್ಮ ಶ್ರೀ ರಂಗನಾಥಸ್ವಾಮಿ, ಶ್ರೀ ಮಾರಮ್ಮ, ಶ್ರೀ ಆಂಜನೇಯಸ್ವಾಮಿ, ಶ್ರೀ ಕನ್ನೆರಮ್ಮ ಸೇರಿದಂತೆ ೧೦ ದೇವರುಗಳು ತೆಪ್ಪೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಬರದ ನಾಡಿಗೆ ಹೇಮಾವತಿ ನೀರು ಹರಿಸಿ ರೈತರ ಸಂಕಷ್ಟ ದೂರ ಮಾಡಿದ ಶಿರಾ ಕ್ಷೇತ್ರದ ಶಾಸಕರಾದ ಟಿಬಿ ಜಯಚಂದ್ರ ರವರು

ನೇತೃತ್ವವಹಿಸಲಿದ್ದು, ಶಿರಾ ತಾಲ್ಲೂಕಿನ ನೂರಾರು ಗ್ರಾಮಗಳ ಸಾವಿರಾರು ಜನ ಪಾಲ್ಗೊಳ್ಳಲಿದ್ದು ಈ ದಿನವನ್ನು ಐತಿಹಾಸಿಕ ದಿನವಾಗಿ ಮಾಡುವುದೇ ನಮ್ಮ ಸಂಕಲ್ಪ, ೫೦ ವರ್ಷ ಸುದೀರ್ಘ ರಾಜಕೀಯ ಅನುಭವವಿರುವ ಮತ್ಸದಿ ರಾಜಕಾರಣಿ, ನೀರಾವರಿ ತಜ್ಞ ಟಿ.ಬಿ.ಜಯಚಂದ್ರ ರವರಿಗೆ ಸಚಿವ ಸಂಪುಟ ಪುನರ್ ರಚನೆಯಲ್ಲಿ ಸಚಿವ ಸ್ಥಾನ ನೀಡುವಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಸಚಿವ ಸ್ಥಾನ ನೀಡುವ ಮೂಲಕ ಜಯಚಂದ್ರ ರವರ ಹಿರಿತನಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ಮದಲೂರು ಹಿರಿಯ ಮುಖಂಡ ವಿ.ಎಸ್.ಎಸ್. ಎನ್. ಅಧ್ಯಕ್ಷ ನಾಗಣ್ಣ, ತಾಲ್ಲೂಕು ಕಾಂಗ್ರೆಸ್ ಪರಿಶಿಷ್ಟ ಪಂಗಡದ ಅಧ್ಯಕ್ಷ ಶರತ್ ಪಾಳೇಗಾರ್, ಗಾಲಿ ಅಜಯ್ ಕುಮಾರ್, ಯುವ ಮುಖಂಡ ರವೀಂದ್ರ, ಮದಲೂರು ಸಿದ್ದೇಶ್ ಸೇರಿದಂತೆ ಹಲವಾರು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

(Visited 1 times, 1 visits today)