
ತುಮಕೂರು: ಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಂಡಿನಶಿವರ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೋವರ್ಸ್ ಮತ್ತು ರೇಂಜರ್ಸ್, ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಹಾಗೂ ಇತರ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಕನ್ನಡ ರಾಜ್ಯೋತ್ಸವ ಹಾಗೂ ಎನ್‌ಎಸ್‌ಎಸ್ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಶನಿವಾರದಂದು ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೊಫೆಸರ್ ಜಿ.ಬಿ. ಶಿವರಾಜು ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತರು, ನಿರ್ದೇಶಕರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಗಾಂಧೀ ವಿಚಾರಧಾರೆ ಅಧ್ಯಯನ ಇಂದಿನ ಪೀಳಿಗೆಗೆ ಅವಶ್ಯಕ ಎಂದು ಹೇಳಿದರು. ಅಲ್ಲದೆ ವಿದ್ಯಾ ರ್ಥಿಗಳಿಗೆ ಗಾಂಧೀಜಿಯವರ ವಿಚಾರಧಾರೆಗಳನ್ನು ಅಳವಡಿಸಿಕೊ ಳ್ಳುವಂತೆ ಕಿವಿ ಮಾತನ್ನು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಯದುನಂದನ್ ಎಂ.ಸಿ. ಮತ್ತು ಅವರ ಸಿಬ್ಬಂದಿಗಳ ನೇತೃತ್ವದಲ್ಲಿ ಕಾಲೇಜಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಕುರಿತು ಶ್ಲಾಘಿಸಿದರು.
ಮತ್ತೋರ್ವ ಅತಿಥಿಗಳಾದ ಶ್ರೀ ಹೆಚ್.ಬಿ. ದಿನೇಶ್ ಜಂಟಿ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೋಶಾಧಿಕಾರಿಗಳು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ರಾಜ್ಯಮಟ್ಟದ ಎನ್‌ಎಸ್‌ಎಸ್ ಶಿಬಿರವನ್ನು ಕಾಲೇಜಿನಲ್ಲಿ ಆಯೋಜಿಸಲು ಅನುಮತಿಯನ್ನು ನೀಡುವುದರ ಜೊತೆಗೆ ಗಾಂಧೀಜಿಯವರ ನನ್ನ ಸತ್ಯಾನ್ವೇಷಣೆ ಆತ್ಮಕಥೆಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದೆಂದು ತಿಳಿಸಿದರು.
ಶ್ರೀಯುತ ಗಿರೀಶ್ ಗಂಗಾಧರ್ ಗೌಡ್ರು ಕಾಲೇಜಿನ ಪ್ರವೇಶಾತಿ ಅಭಿಯಾನ ಹಾಗೂ ಇತರ ಚಟುವಟಿಕೆಗಳನ್ನು ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಮುಂದಿನ ದಿನಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯಿಂದ ಹೀಗೆ ಸಹಕಾರವನ್ನು ನೀಡಲಾಗುವುದೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀ ಶಂಕರೇ ಗೌಡರು, ಸಿದ್ದೇಗೌಡರು ರಾಜಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಯದುನಂದನ್ ಎಂ.ಸಿ. ರವರು ಕಾಲೇಜಿನ ಪ್ರವೇಶಾತಿ ಅಭಿಯಾನದಲ್ಲಿ ಶ್ರೀ ಗಂಗಾಧರ ಗೌಡರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರ ಸಹಕಾವನ್ನು ಸ್ಮರಿಸುತ್ತಾ ಧನ್ಯವಾದಗಳನ್ನು ತಿಳಿಸಿದರು.
ಮೈಲಾರಯ್ಯ ರವರು ಎಲ್ಲರನ್ನೂ ಸ್ವಾಗತಿಸಿದರು. ಡಾ. ನಾಗೇಂದ್ರಪ್ಪ ಪ್ರಾಸ್ತಾವಿಕ ನುಡಿಯನ್ನಾಡಿದರು. ಕಾಲೇಜಿನಿಂದ ವರ್ಗಾವಣೆಗೊಂಡ ಡಾ. ವಸಂತ ಕುಮಾರಿ ಹಾಗೂ ಶಿಲ್ಪ ರವರಿಗೆ ಮತ್ತು ಕಾಲೇಜಿಗೆ ವರ್ಗಾವಣೆಯ ಮೂಲಕ ಆಗಮಿಸಿದ ಛಾಯಾದೇವಿ ಕಮಲ ಹಾಗೂ ಲಿಂಗರಾಜುರವರಿಗೆ ಗೌರವ ಸಮರ್ಪಣೆಯನ್ನು ಮಾಡಲಾಯಿತು.
ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ. ದಾಕ್ಷಾಯಿಣಿ, ಡಾ. ರಾಧ, ಗಿರೀಶ್, ಲಾವಣ್ಯ, ಅಮೃತ ಹಾಗೂ ಅತಿಥಿ ಉಪನ್ಯಾಸಕರು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಊರಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂದಿತು.



