ತುಮಕೂರು: ಅಂಗನವಾಡಿ, ಬಿಸಿಊಟ, ಆಶಾ ನೌಕರರನ್ನು ಒಳಗೊಂಡ0ತೆ ದುಡಿವ ಜನರಿಗೆ ದ್ರೋಹ ಬಗೆಯುವ ೪ ಕಾರ್ಮಿಕ ಸಂಹಿತೆಗಳು ರದ್ದುಮಾಡಬೆಕು.. ದುಡಿವ ಜನರಿಗೆ ಶಾಸನ ಬದ್ದ ಸವಲತ್ತುಗಳನ್ನು ನಿರಾಕರಿಸುವ “ಶ್ರಮಶಕ್ತಿ ನೀತಿ” ೨೦೨೫ ಬೇಡವೇ ಬೇಡಾ.ಅಂಗನವಾಡಿಬಿಸಿಊಟ, ಆಶಾ, ನೌಕರರಿಗೂ ಮುಟ್ಟಿನ ರಜೆ ನೀಡಬೇಕು. ೫೬ ಲಕ್ಷ ಸ್ಕೀಮ್ ಕಾರ್ಮಿಕರ ಸೇವಾ ಷರತ್ತುಗಳ ಸುಧಾರಣೆಗೆ ಪ್ರತ್ಯೇಕ ವೇತನ ಆಯೋಗ ರಚಿಸಿ. ೨೦೧೮ ರಿಂದ ಅಂಗನವಾಡಿ, ಬಿಸಿಊಟ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ, ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ ೨೭೦೦ ರೂ., ಸಹಾಯಕಿಗೆ ೧೩೫೦ ರೂಗಳನ್ನು ಮಾತ್ರವೇ ನೀಡುತ್ತಿದೆ. ೨೦೦೯ ರಿಂದಬಿಸಿಊಟ ನೌಕರಿಗೆ ಕೇವಲ ೬೦೦ ರೂಗಳಿಗೆ ದುಡಿಸಲಾಗುತ್ತಿದೆ ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಕನಿಷ್ಠ ವೇತನವನ್ನಾದರೂ ಜಾರಿ ಮಾಡಬೇಕು. ಶಿಫಾರಸ್ಸಿನಂತೆ ಇವರನ್ನು ಉದ್ಯೋಗಸ್ಥರೆಂದೂ ಪರಿಗಣಿಸಿ ಶಾಸನ ಬದ್ಧಾ ಸೌಲಭ್ಯಗಳನ್ನು ಕೊಡಬೇಕು.ಅಂಗನವಾಡಿ ನೌಕರರನ್ನು ೩ ಮತ್ತು ೪ನೇ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು.ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿಪ್ರಾರಂಭಿಸಬೇಕು.ಎಲ್ಲಾ ಸ್ಕಿಮ್ ನೌಕರರಿಗೆ ಮಾಸಿಕ ೧೦,ಸಾವಿರ ನಿವೃತ್ತಿ ವೇತನ ನೀಡಬೇಕು. ಬಿಸಿಯೂಟ ನೌಕರರಿಗೆ ಆರೋಗ್ಯ ವಿಮೆ ಜಾರಿ ಮಾಡಬೇಕು ಎಂದು ಒತ್ತಾಯಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ,ರಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ಅಶಾ ಕಾರ್ಯಕರ್ತೇಯರ ಸಂಘ . ಸಿಐಟಿಯುನ ನೇತ್ರತ್ವದಲ್ಲಿ ಸಾವಿರಾರು ಸ್ಕೀಮ್ ನೌಕರು ತುಮಕೂರು ನಗರದ ಪ್ರವಾಸಿ ಮಂಧಿರದ ಬಳಿ ಇರುವ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಸೋಮಣ್ಣ ಅವರ ಕಛೇರಿ ಎದುರು ಧರಣಿಗೆ ಜಮಾವಣೆ ಗೋಂಡರು. ಪೋಲಿಸರು ಅಲ್ಲಿ ಧರಣಿಗೆ ಅವಕಾಶ ನಿರಾಕರಿಸಿದರು. ಪ್ರತಿಭಟನಕಾರರು ಅಲ್ಲಿಂದ ಮೇರವಣಿಗೆಯಲ್ಲಿ ಹೋರಟು ನಗರದ ಟೌನ್ಹಾಲ್ ಅವರಣದಲ್ಲಿ ಧರಣಿಯನ್ನು ಮುಂದುವರಿಸಿದ್ದಾರೆ.
ಜನ ಉಪಯೋಗಿ ಯೋಜನೆಗಳಿಗೆ ಅನುದಾನ ಕಡಿತ ಮಾಡುವ ಕೇಂದ್ರ ಸರ್ಕಾರ ಜನತೆಯ ತೆರಿಗೆ ಹಣವನ್ನು ವಿವಿಧ ಯೊಜನೆಗಳ ನೆಪದಲ್ಲಿ ಶ್ರೀಮಂತ ಕಾಪೋರೇಟ್ ಬಂಡವಾಳಿಗರಿಗೆ ನೀಡುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಬಡಜನರು ಮತ್ತು ಅವರ ಪರ ಇರುವ ಯೋಜನೆಗಳಾದ ಐಸಿಡಿಎಸ್. ಬಿಸಿಊಟದಂತಹ ಯೋಜನೆಗಳಿಗೆ ಅನುದಾನ ಹೆಚ್ಚಳಮಾಡಿಲ್ಲ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಸೈಯದ್ ಮುಜೀಬ್ ಅವರು ಗಂಭೀರ ಆರೋಪ ಮಾಡಿದರು ಅವರು ಸ್ಕೀಮ್ ನೌಕರರ ಅನಿಧಿಷ್ಟ ಧರಣಿಯನ್ನು ಉಧ್ಘಾಟಿಸಿ ಮಾತನಾಡಿದರು. ಸಿಐಟಿಯು ರಾಜ್ಯ ಕಾರ್ಯಧರ್ಶಿ ಮುನಿರಾಜು ಸ್ಕೀಮ್ ನೌಕರರಿಗೆ ಕನಿಷ್ಟ ಕೂಲಿ ನೀಡದೆ ದುಡಿಸುವುದು ಅಮಾನವಿಯ ಎಂದರು. ಸಿಐಟಿಯು ಮುಖಂಡ ವಸಂತಚಾರಿ. ಸಿಪಿಐ. ಎಂ. ಜಿಲ್ಲಾ ಕಾರ್ಯಧರ್ಶಿ, ಎನ್. ಕೆ ಸುಬ್ರಮಣ್ಯ. ಅಂಗನವಾಡಿ ನೌಕರರ ಸಂಘದ ರಾಜ್ಯ ಖಜಾಂಚಿ ಜಿ.ಕಮಲ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು. ಬಿಸಿಊಟ ನೌಕರರ ಸಂಘದ. ಹನುಮಕ್ಕ. ನಿಂಗಮ್ಮ , ಮತ್ತಿತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ತುಮಕೂರು ಅನಸೂಯ. ಪಾರ್ವತಮ್ಮ. ಪುಪ್ಪ. ಚಿತ್ರದುರ್ಗ, ಶಿವಮೊಗ್ಗ. ದಕ್ಷಿಣ ಕನ್ನಡ, ಬಳ್ಳಾರಿ. ವಿಜಯನಗರ, ಉಡುಪಿ ಜಿಲ್ಲೆಗಳ ಅಂಗನವಾಡಿ. ಬಿಸಿಊಟ, ಅಶಾ ಕಾರ್ಯಕರ್ತೇಯರು ಭಾಗವಹಿಸಿದ್ದಾರೆ.ಜಿಲ್ಲೆಗಳ ಪದಾಧಿಕಾರಿಗಳಾ ಬಳ್ಳಾರಿ ಉಮಾ, ಈರಮ್ಮ. ಮಲ್ಲಮ್ಮ. ಉಡುಪಿ ಭಾರತಿ, ಶಾಂತ.ಚಿತ್ರದುರ್ಗದ. ನಿರ್ಮಲ, ಮಂಜುಳ. ಕಲ್ಯಾಣಮ್ಮ. ವಿಜಯನಗರದ ನಾಗರತ್ನ, ಸಪ್ನ, ಮಾರಕ್ಕ
ಬಿಸಿಊಟ ನೌಕರರ ಸಂಘ ತುಮಕೂರಿನ ಕೆಂಚಮ್ಮ. ನಾಗರತ್ನ, ಬಳ್ಳಾರಿ ದುರ್ಗಮ್ಮ. ಗೌರಮ್ಮ, ನಾಗರತ್ನ, ದುರ್ಗದ ಶಿವಮ್ಮ, ರಾಜಮ್ಮ ವಿಜಯನಗರ ಗೌರಮ್ಮ. ಸುಮಾ ಯಶೋಧ, ಶಿವಮೊಗ್ಗದ ಸುನಿತಾ. ದಕ್ಷಿಣ ಕನ್ನಡದ ಭವ್ಯ, ಮತ್ತಿತರು ಮುಂದಾಳತ್ವ ಮಹಿಸಿದ್ದರು.
ಸಿಐಟಿಯು ತುಮಕೂರು ನಾಯಕರಾದ ಸುಜೀತ್ ನಾಯಕ್. ಭಿಮರಾಜು, ವಸಿಂ ಅಕ್ರಮ. ಇಂತಿಯಾಷ್. ಜನವಾಧಿ ಮಹಿಳಾ ಸಂಘಟನೆಯ ಟಿ.ಆರ್ ಕಲ್ಪನಾ ಇದ್ದರು.

(Visited 1 times, 1 visits today)