ತುಮಕೂರು: ನಿರ್ಲಕ್ಷಕ್ಕೆ ಒಳಗಾದ ವಿಕಲಚೇತನರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ನೀಡಿ ಉತ್ತಮ ರೀತಿಯಲ್ಲಿ ಜೀವನ ನೆಡೆಸುವ ಹಾದಿಯನ್ನು ಕಲ್ಪಿಸುವ ಸಲುವಾಗಿ ವಿಕಲಚೇತನರ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ನೂರುನ್ನೀಸ ರವರು ತಿಳಿಸಿದರು.
ಮಂಗಳವಾರ ನಗರದ ಕೆ ಆರ್ ಬಡಾವಣೆಯಲ್ಲಿ ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿಯಾ ಹಾಗೂ ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿಯಾ ವೃದ್ಧಾಶ್ರಮ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತುಮಕೂರು.ಇವರ ಸಹಯೋಗದೊಂದಿಗೆ ವಿಶ್ವ ವಿಕಲಚೇತನರ ದಿನಾಚರಣೆ-೨೦೨೫ ಕಾರ್ಯಕ್ರಮದ ಅಂಗವಾಗಿ ವಿಶೇಷ ಚೇತನರಿಗೆ ಮತ್ತು ಹಿರಿಯ ನಾಗರೀಕರಿಗೆ ವೀಲ್‌ಚೇರ್, ಕಮೋಡ್ ಚೇರ್, ವಾಕರ್, ವಾಕಿಂಗ್ ಸ್ಟಿಕ್ ಕ್ರಚ್ಚಸ್, ಬ್ರೆಂಡ್‌ಸ್ಟಿಕ್ ಮತ್ತು ಕಂಬಳಿಗಳನ್ನು ೩೦೦ಕ್ಕೂ ಫಲಾನುಭವಿಗಳಿಗೆ ಉಚಿತವಾಗಿ ನೀಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದ ನಾಲ್ಕು ವರ್ಷಗಳಿಂದ ದಿಯಾ ಸಂಸ್ಥೆಯು ಸಾಮಾಜಿಕ ಕಾರ್ಯಕ್ರಮಗಳನ್ನು ಗಮನಿಸುತ್ತಾ ಬಂದಿದ್ದೇನೆ, ವಿಕಲಚೇತನರು,ಮಕ್ಕಳು, ಹಿರಿಯ ನಾಗರೀಕರಿಕರು ಹಾಗೂ ಸಮಾಜದಿಂದ ತುಳಿತಕ್ಕೆ ಒಳಗಾದವರಿಗೆ ತಮ್ಮ ಸ್ವಂತ ದುಡಿಮೆಯಲ್ಲಿ ಉಚಿತ ಸಲ್ಲಿಸುತ್ತಿರುವುದು ಶ್ಲಾಘನೆ ಎಂದುರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪುರುಷೋತ್ತಮ್ ಮಾತನಾಡಿ ಕಾರಣಾಂತರದಿAದ ವಿಕಲಚೇತನರಾದರಿಗೆ ಸಹಾಯ ಹಸ್ತವನ್ನು ಚಾಚುವ ಮೂಲಕ ದಿಯಾ ಸಂಸ್ಥೆಯು ಉತ್ತಮ ಸಮಾಜ ಸೇವೆಯನ್ನು ಸಲ್ಲಿಸುತ್ತಿದೆ. ತಮ್ಮ ಸ್ವಂತ ದುಡಿಮೆಯಲ್ಲಿ ಸೇವೆಯನ್ನು ಸಲ್ಲಿಸುವ ಮನೋಭಾವನೆ ಕೆಲವರಿಗಷ್ಟೇ ಇರು ತ್ತದೆ, ಇಂತಹ ಹೃದಯ ವೈಶಾಲ್ಯತೆಯನ್ನು ದಿಯಾ ಸಂಸ್ಥೆ ಸಂಸ್ಥಾಪಕ ಡಾ.ಇಮ್ಯಾನ್ಯೂಯಲ್ ಜಯಕುಮಾರ್ ರವರಿಗಿದೆ, ಸಂಸ್ಥೆಯಿ0ದ ದೊರಕುವ ಸವಲತ್ತುಗಳನ್ನು ಅರ್ಹವ್ಯಕ್ತಿಗಳು ಉಪಯೋಗಿಸುಕೊಳ್ಳುವಂತೆ ಸಾರ್ವಜನಿಕರಲ್ಲಿ ಒತ್ತಾಯಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ ದಿಯಾ ಸಂಸ್ಥೆಯು ಸಮಾಜದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ, ವಿಕಲಚೇತನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ರೋಪಿಸುತ್ತಿದೆ, ಸಂಬ0ಧಪಟ್ಟ ಇಲಾಖೆಯವರು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ದಿಯಾ ಸಂಸ್ಥೆಗೆ ಆತ್ಮವಿಶ್ವಾಸ ತುಂಬವ ಕೆಲಸ ಸರ್ಕಾರಿ ಅಧಿಕಾರಿಗಳು ಮಾಡಬೇಕಿದೆ ಎಂದರು.
ದಿಯಾ ಸಂಸ್ಥೆಯ ಪ್ರಾಮಾಣಿಕ ಸೇವೆಯನ್ನು ಸರ್ಕಾರ ಅಧಿಕಾರಿಗಳು ಗುರುತಿಸಬೇಕಿದೆ, ಸಾಮಾಜಿಕ ಕಾರ್ಯದಲ್ಲಿ ತೊಡ ಗುವವರಿಗೆ ಪ್ರೋತ್ಸಹ ನೀಡುವ ಕೆಲಸವಾಗಬೇಕಿದೆ, ದಿಯಾ ಸಂಸ್ಥೆಯ ಮೂಲಕ ಅನೇಕ ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಮತ್ತು ವೃದ್ಧಾಶ್ರಮ ಮೂಲಕ ಅಸಾಯಕರಿಗೆ ಆಸರೆ ಕಲ್ಪಿಸುವ ಮತ್ತು ಮನೋದೌರ್ಯ ಹೆಚ್ಚಿಸುವ ಕಾರ್ಯ ದಿಯಾ ಸಂಸ್ಥೆ ಮಾಡುತ್ತಿದೆ ಎಂದು ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿಯಾ ಸಂಸ್ಥಾಪಕ ಡಾ.ಇಮ್ಯಾನ್ಯೂಯಲ್ ಜಯಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೆ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಾದ ಯೋಗೀ ಶ್ ಸುವರ್ಣ ನ್ಯೂಸ್, ಪ್ರಧಾನ ಕಾರ್ಯದರ್ಶಿಯಾದ ಟಿ ಇ ರಘುರಾಮ್ ಏಕೇಶ್,ನಿರ್ದೇಶಕರಾದ ಮಾರುತಿ ಗಂಗಹನುಮ ಯ್ಯರವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿ ಯಾ ಪ್ರಧಾನ ಕಾರ್ಯದರ್ಶಿ ಸುನಿತಾ ಡಾ.ಇಮ್ಯಾನ್ಯೂಯಲ್ ಜಯಕುಮಾರ್, ಜಿಲ್ಲಾ ವಿಕಲಚೇತನರು ಮತ್ತು ಹಿರಿಯ ನಾಗರಿಕ ಕಲ್ಯಾಣ ಅಧಿಕಾರಿಗಳಾದ ಚಿದಾನಂದ್,ವೆಸ್ಲಿ ಸಭೆಯ ಘನ ಮಾರ್ಗನ್ ಸಂದೇಶ್ ಅಯ್ಯರವರು,ಆಡಿಟರ್ ಸುಲ್ತಾನ್ ಅಹಮದ್,ವಿಲ್ಸನ್,ನಿರ್ದೇಶಕರಾದ ಸತೀಶ್, ಕಾಯದರ್ಶಿ ಕಿರಣ್ ಗಜ, ಜಗದೀಶ್ ಡಿ ,ದನಿಯಾ ಕುಮಾರ್ ಸೇರಿದಂತೆ ವಿಶೇಷ ಚೇತನರು, ಹಿರಿಯ ನಾಗರಿಕರು, ದೃಷ್ಠಿ ದೋಷ ಚೇತನರು ಉಪಸ್ಥಿತರಿದ್ದರು.

(Visited 1 times, 1 visits today)