ಗುಬ್ಬಿ: ಮಾನವನ ಮೂಲಭೂತ ಹಕ್ಕುಗಳನ್ನು ಪ್ರತಿಯೊಬ್ಬರು ಪರಸ್ಪರ ಗೌರವಿಸಬೇಕು ಎಂದು ಪಿಎಸ್‌ಐ ಧರ್ಮಾಂಜಿ ತಿಳಿಸಿದರು.
ತಾಲ್ಲೂಕಿನ ಕೆ ಜಿ ಟೆಂಪಲ್ ನ ಬೃಂದಾವನ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸುರಕ್ಷಾ ಪರಿಷದ್ ವತಿಯಿಂದ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಆರೋಗ್ಯ ಜಾಗೃತಿ ಮತ್ತು ರಕ್ತ ತಪಾಸಣೆ ಶಿಬಿರ ಉದ್ಘಾಟನೆ ಮಾತನಾಡಿದ ಅವರು,
ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು, ಮಾತನಾಡುವ ಹಕ್ಕು, ಸಂರಕ್ಷಣೆ ಹಕ್ಕು, ಭಾಗವಹಿಸುವಿಕೆ ಹಕ್ಕುಗಳಿಗೆವೆ. ಯಾರು ಯಾರಿಗೂ ನೋವುಂಟು ಮಾಡದೆ ಉತ್ತಮ ಮಾರ್ಗದಲ್ಲಿ ನಡೆಯಬೇಕು. ಇತ್ತೀಚಿಗೆ ಜನರು ಕುಟುಂಬದಲ್ಲಿ ಉತ್ತಮ ಸಂಸಾರಿಯೂಯಾಗದೆ ಹಾಗೂ ಸಂಸ್ಕಾರವನ್ನು ಬೆಳೆಸಿಕೊಳ್ಳದೆ ದಾರಿ ತಪ್ಪುತ್ತಿದ್ದಾರೆ. ಉತ್ತಮ ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಬೆಳೆಸಿಕೊಳ್ಳುವುದರ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ಯಾರು ದುಶ್ಚಟಗಳಿಗೆ ಬಲಿಯಾಗದೆ ವ್ಯಸನ ಮುಕ್ತ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಇದರ ಜೊತೆಗೆ ಕಾನೂನು ಪರಿಪಾಲನೆ ಅತ್ಯಗತ್ಯ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಮಾತನಾಡಿ ಮಕ್ಕಳಿಗೆ ಅವರದೇ ಆದ ಹಕ್ಕುಗಳಿವೆ. ಅದರಲ್ಲಿ ಭಾಗವಹಿಸುವಿಕೆಯ ಹಕ್ಕು ಕೂಡ ಒಂದು. ಮಕ್ಕಳು ಶಿಕ್ಷಣ, ಆಟ, ಕ್ರೀಡೆ ಪ್ರತಿ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಪೋಷಕರು ಮಕ್ಕಳ ಹಕ್ಕುಗಳನ್ನು ಗೌರವಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸುರಕ್ಷಾ ಪರಿಷದ್ ಜಿಲ್ಲಾಧ್ಯಕ್ಷ ಅನ್ಸಾರ್, ತಾಲ್ಲೂಕು ಅಧ್ಯಕ್ಷ ರಮೇಶ್, ಬಿಇಓ ನಟರಾಜ್, ಸಿಡಿಪಿಒ ಕೃಷ್ಣಮೂರ್ತಿ, ವೈದ್ಯ ಡಾ ಆರ್ಯನ್ ಸಹ, ಪಿಡಿಓ ಮಂಜುಳ, ಸೇರಿದಂತೆ ಇತರರು ಉಪಸ್ಥಿತರಿದ್ದರು.

(Visited 1 times, 1 visits today)