ಸಿರಾ: ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗಿ ತಮ್ಮ ಮುಂದಿನ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಹಾಗಾಗಿ ಪ್ರಬುದ್ಧ ದೇಶದ ಆಸ್ತಿಯಾಗಬಲ್ಲ ಯುವಕರು ಇಂತಹ ದುಶ್ಚಟಗಳ ದಾಸರಾಗದೆ ತಮ್ಮ ಅಕ್ಕ ಪಕ್ಕದಲ್ಲಿ ಒಡನಾಟದಲ್ಲಿ ಇರುವವರನ್ನು ಸಹ ನಶೆಯಿಂದ ಮುಕ್ತಗೊಳಿಸಲು ಸಹಕರಿಸಬೇಕಾಗಿ ಶಿರಾ ನಗರ ಪಿಎಸ್‌ಐ ರೇಣುಕಾ ಯಾದವ್ ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬುಧವಾರ ಬುಕ್ಕಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಆರೋಗ್ಯವಂತ ಯುವ ಸಮೂಹ ದೇಶದ ಆಸ್ತಿಯಾ ಗುತ್ತದೆ ಒಂದು ದೇಶ ಮುನ್ನಡೆಯಬೇಕಾದರೆ ದುಡಿಯುವ ಕೈಗಳ ಸಂಖ್ಯೆ ಹೆಚ್ಚಾಗಬೇಕು ಅವುಗಳು ಆರೋಗ್ಯವಂತವಾಗಿ ಶಕ್ತಿಯು ತವಾಗಬೇಕಾದರೆ ನಶೆ ಎಂಬ ಪಾಶದಿಂದ ಅವುಗಳನ್ನು ದೂರ ಮಾಡ ಬೇಕು ಹಾಗಾಗಿ ಯುವಕರು ಧೂಮಪಾನ, ಮಧ್ಯಪಾನ, ಇದ್ದಂತಹ ದುಶ್ಚಟಗಳಿಂದ ದೂರವಿದ್ದು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ದೇಶದ ಪ್ರಗತಿಗೆ ನಿಮ್ಮಿಂದ ಆಗುವಂತಹ ಕಾಣಿಕೆಗಳನ್ನು ನೀಡುವಂತಹ ಪ್ರಯತ್ನ ಮಾಡಬೇಕು ಎಂದರು.
ಅಪರಾಧ ನಡೆದ ನಂತರ ಆರೋಪಿಗೆ ಶಿಕ್ಷೆ ನೀಡುವುದಕ್ಕಿಂತ ಮುಂಚಿತವಾಗಿ ಅಪರಾಧ ನಡೆಯುವುದಂತೆ ಎಚ್ಚರಿಕೆ ವಹಿಸುವುದು ಬಹಳಷ್ಟು ಮುಖ್ಯವಾಗಿದೆ ಅಪರಾಧಗಳಿಗೆ ಕಾರಣಗಳೇನು ಅತಿಹೆಚ್ಚಿನ ಅಪರಾಧ ಪ್ರಕರಣಗಳು ಯಾವ ಯಾವ ರೀತಿಯಲ್ಲಿ ಸಂಭವಿಸುತ್ತದೆ ಎಂಬುದನ್ನು ಅರಿತು ಅವುಗಳ ತಡೆಗೆ ಕ್ರಮ ಕೈಗೊಳ್ಳಬೇಕು. ಯುವತಿ ಯರು ಸಾಮಾಜಿಕ ಜಾಲತಾಣಗಳ ಮುಖಾಂತರ ಅಪರಿಚಿತರ ಪರಿಚಯ ಮಾಡಿಕೊಂಡು ಅದರಿಂದ ಮೋಸ ಹೋಗದೆ ಎಚ್ಚರ ವಹಿಸ ಬೇಕು, ಅಪರಾಧ ಕಂಡ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾರಾದರೂ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದರೆ, ಅಪಾಯದಲ್ಲಿ ಸಿಲುಕಿಕೊಂಡಿದ್ದರೆ ಸಹಾಯ ಮಾಡುವ ಅಥವಾ ಪೊಲೀಸ್ರಿಗೆ ತಿಳಿಸುವ ಕೆಲಸ ಮಾಡಿ ಜೀವ ರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್ ಆರ್ ಹನುಮಂತರಾಯ, ಸಹಾಯಕ ಪ್ರಾಧ್ಯಾಪಕರಗಳಾದ ಸತೀಶ್ ಎ ಎಂ, ಧರಣೇಂದ್ರ ಕುಮಾರಿ, ಶಾರ್ವರಿ, ಡಾ ಮಂಜುನಾಥ್, ಮಹೇಶ್ ಎನ್, ಲೋಕೇಶ್ ಎನ್ ,ವಿಜಯ್ ಎನ್ ,ಪುಟ್ಟಲಿಂಗಪ್ಪ, ಶ್ರೀನಿವಾಸ್, ಜಗದೀಶ್, ಕುಮಾರ್ ಸೇರಿದಂತೆ ಕಾಲೇಜಿನ ಬೋಧಕೇತರ ಸಿಬ್ಬಂದಿ, ವಿಧ್ಯಾರ್ಥಿಗಳು ಹಾಜರಿದ್ದರು.

(Visited 1 times, 1 visits today)