
ಕುಣಿಗಲ್: ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಸಭೆ ಗುರುವಾರ ಜರುಗಿತು.
ಸಭೆಯಲ್ಲಿ ತಾಸಿಲ್ದಾರ್ ರಶ್ಮಿಯು ರವರು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ತೆಗೆದುಕೊಂಡಿರುವ ಮುಂಜಾಗ್ರತೆ ಕ್ರಮಗಳ ವಿವರಗಳ ಸಂಪೂರ್ಣ ಮಾಹಿತಿಯನ್ನು ಟಿಹೆಚ್‌ಓ ರವರಲ್ಲಿ ಕೇಳಿದಾಗ ಟಿಎಚ್‌ಓ ಡಾ ಮರಿಯಪ್ಪನವರು ಮಾತನಾಡಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಡಿಸೆಂಬರ್ ೨೧ರಿಂದ ಡಿಸೆಂಬರ್ ೨೪ರ ವರೆಗೆ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಇಂದ೫ ವರ್ಷದ ಪ್ರತಿಯೊಂದು ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುತ್ತದೆ ತಾಲೂಕಿನಲ್ಲಿ ಲಸಿಕೆಯನ್ನು ಪಡೆದುಕೊಳ್ಳುವ ಸುಮಾರು ಪಟ್ಟಣ ಸೇರಿದಂತೆ ೧೮೯೮೩ ಮಕ್ಕಳು ಇದ್ದು ಡಿಸೆಂಬರ್ ೨೧ರ ಭಾನುವಾರದಂದು ಒಟ್ಟು ೧೧೦ ಲಸಿಕಾ ಕೇಂದ್ರಗಳು ಇದ್ದು ಹೆಚ್ಚುವರಿಯಾಗಿ ನಗರದಲ್ಲಿ ೩ ಗ್ರಾಮಾಂತರದಲ್ಲಿ ೩ ಲಸಿಕ ಕೇಂದ್ರಗಳನ್ನು ತೆರೆಯಲಾಗಿದೆ ಈ ಸಂದರ್ಭದಲ್ಲಿ ೨೦ ವೈದ್ಯಾಧಿಕಾರಿಗಳು, ಲಸಿಕೆ ಹಾಕುವವರು ೪೦೧, ಮೇಲ್ವಿಚಾರಕರು ೨೦ ಮಂದಿ ಕೆಲಸ ನಿರ್ವಹಿಸಲಿದ್ದಾರೆ ನಮ್ಮ ತಾಲೂಕಿನಲ್ಲಿ ನಗರ ಪ್ರದೇಶದಲ್ಲಿ ೯೭೦೫ ಗ್ರಾಮಾಂತರದಲ್ಲಿ ೪೨೫೮೩ ಒಳಗೊಂಡ0ತೆ ಒಟ್ಟು ೫೨೨೮೮ ಮನೆಗಳನ್ನು ಒಳಗೊಂಡಿದೆ ಡಿಸೆಂಬರ್ ೨೧ರ ಭಾನುವಾರ ಪಲ್ಸ್ ಪೋಲಿಯೋ ಲಸಿಕೆಗಳನ್ನು ಆಕಸ್ಮಿಕವಾಗಿ ತೆಗೆದುಕೊಳ್ಳದಿದ್ದರೆ ನಮ್ಮ ಆರೋಗ್ಯ ಸಿಬ್ಬಂದಿ ಗಳು ಅಂತಹ ಮನೆಗಳಿಗೆ ತೆರಳಿ ಲಸಿಕೆಯನ್ನು ಹಾಕಿ ಬರುತ್ತಾರೆ ಎಂದ ಅವರು ಈ ಕಾರ್ಯಕ್ರಮ ರಾಷ್ಟ್ರೀಯ ಕಾರ್ಯಕ್ರಮ ಆಗಿರುವುದರಿಂದ ಇದಕ್ಕೆ ಸಂಬ0ಧಪಟ್ಟವರು ಪ್ರತಿಯೊಬ್ಬರು ಭಾಗ ವಹಿಸುವಂತೆ ತಿಳಿಸಲಾಗಿದೆ ಇದಕ್ಕೆ ಬೇಕಾಗಿರುವ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ವಿವರವಾಗಿ ತಿಳಿಸಿದರು.
ತಹಸಿಲ್ದಾರ್ ರಶ್ಮಿಯು ಮಾತನಾಡಿ ಟಿಹೆಚ್‌ಓರ ವರು ಹೇಳಿದಂತೆ ಪ್ರತಿಯೊಂದು ಲಸಿಕ ಕೇಂದ್ರಗಳಲ್ಲಿ ೨೧ರ ಭಾನುವಾರ ಪೋಲಿಯೋ ಲಸಿಕೆಗಳನ್ನು ನೀಡುತ್ತಿದ್ದು ಉಳಿದ ಮೂರು ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಸಿಬ್ಬಂದಿಗಳು ಲಸಿಕೆ ಬಿಟ್ಟು ಹೋಗಿರುವ ಮಕ್ಕಳುಗಳಿಗೆ ಮನೆಗಳಲ್ಲಿಯೂ ಸಹ ಲಸಿಕೆ ನೀಡಲಾಗುವುದು ಎಲ್ಲಾ ಮಕ್ಕಳಿಗೂ ವಂಚನೆ ಯಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕೆಂದರು ಮುಖ್ಯವಾಗಿ ಬೆಸ್ಕಾಂ, ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಮೇಲ್ವಿಚಾರಣೆಗಾಗಿ ಎಲ್ಲಾ ಸರ್ಕಾರಿ ಇಲಾಖೆ ಅಧಿಕಾರಿಗಳ ವಾಹನಗಳನ್ನು ಹಾಗೂ ಡ್ರೈವಿಂಗ್ ಸ್ಕೂಲ್ ಮಾಲೀಕರು ತಮ್ಮ ವಾಹನಗಳನ್ನು ಬಿಡುಗಡೆ ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾ ರಿಗಳು, ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



