
ಕೊರಟಗೆರೆ: ನಾನು ಕೊರಟಗೆರೆ ಕ್ಷೇತ್ರದಲ್ಲಿ ಶಾಸಕನಾಗಿ ನೂರು ವರ್ಷ ಇರೋದಿಲ್ಲ. ಆದರೇ ನಾನು ಮಾಡಿದ ಅಭಿವೃದ್ಧಿ ಕೆಲಸಗಳೇ ಶಾಶ್ವತವಾಗಿ ಉಳಿಯುತ್ತೇ. ೨೦೨೬ರ ಮಳೆಗಾಲಕ್ಕೆ ಎತ್ತಿನಹೊಳೆ ನೀರು ತುಮಕೂರಿಗೆ ಬರುತ್ತೇ. ಕೊರಟಗೆರೆ ಕ್ಷೇತ್ರದ ೭೦ಕೆರೆಗಳಿಗೆ ಹರಿಯುತ್ತೇ. ರೈತ ಸಮುದಾಯದ ಅಭಿವೃದ್ಧಿಗೆ ನಾನು ಯಾವ ತ್ಯಾಗಕ್ಕೂ ಸಿದ್ದನಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಭರವಸೆ ನೀಡಿದರು.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಎತ್ತಿನಹೊಳೆ ಯೋಜನೆಯಿಂದ ಭೂ ಸ್ವಾಧೀನವಾದ ಜಮೀನಿನ ರೈತರಿಗೆ ಪರಿಹಾರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೆಡಿಎಸ್ ಮತ್ತು ಬಿಜೆಪಿ ನಾಯಕರ ಹುನ್ನಾರದಿಂದ ಬೈರಗೊಂಡ್ಲು ಬಫರ್‌ಡ್ಯಾಂ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಆಯ್ತು. ರೈತರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸವನ್ನು ವಿರೋಧ ಪಕ್ಷದವ್ರು ಮಾಡಿದ್ರು. ರೈತರ ಜೊತೆ ಅಧಿಕಾರಿವರ್ಗ ಸಭೆ ನಡೆಸಿ ಮನವೋಲಿಸಲು ಪ್ರಯತ್ನಪಟ್ರು. ನಾನು ೩ಸಲ ರೈತ ಮುಖಂಡರ ಸಭೆ ನಡೆಸಿ ಮನವಿ ಮಾಡಿದ್ರು ಪ್ರಯೋಜನಾ ಆಗದೇ ಈಗ ನಮ್ಮ ರೈತರಿಗೆ ನಷ್ಟವಾಯ್ತು ಎಂದರು.
ಎತ್ತಿನಹೊಳೆ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ ೩೨೦೦ಎಕರೇ ಜಮೀನು ಭೂಸ್ವಾಧೀನ ಆಗಿದೆ. ರೈತರಿಗೆ ಸರಕಾರ ೧ಸಾವಿರ ಕೋಟಿ ಪರಿಹಾರ ನೀಡಬೇಕಿದೆ. ಅದರಲ್ಲಿ ಈಗಾಗಲೇ ೮೪೦ಕೋಟಿ ರೈತರ ಖಾತೆಗಳಿಗೆ ಜಮಾ ಆಗಿದೆ. ಇನ್ನೂಳಿದ ಹಣ ೩೦ದಿನಗಳಲ್ಲಿ ಜಮಾ ಆಗಲಿದೆ. ಈಗ ಕೊರಟಗೆರೆ ಕ್ಷೇತ್ರದ ೫೮ಜನ ರೈತರಿಗೆ ೨೨ಜಮೀನಿಗೆ ೫ಕೋಟಿ ೫೫ಲಕ್ಷ ವಿತರಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ನಾನು ಶಿಕ್ಷಣ ಸಚಿವನಾಗಿದ್ದ ವೇಳೆ ತುಮಕೂರು ಜಿಲ್ಲೆಗೆ ವಿಶ್ವವಿದ್ಯಾಲಯ ತಂದಿದ್ದೇನೆ. ೨೦೦ಎಕರೇ ವಿಸ್ತೀರ್ಣದಲ್ಲಿ ಕ್ಯಾಂಪಸ್ ಉದ್ಘಾಟನೆ ಮಾಡಿದ್ದೇನೆ. ಕೊರಟಗೆರೆಯ ಇಬ್ಬರು ಐಎಎಸ್ ಅಧಿಕಾರಿಗಳು ದೇಶದ ವಿವಿದೆಡೆ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಏನೇ ಕೇಳಿದ್ರು ಅನುಧಾನ ತರುವ ಜವಾಬ್ದಾರಿ ನನ್ನದು. ಗ್ರಾಮೀಣ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದೆ ಎಂದು ವಿದ್ಯಾರ್ಥಿಗಳು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಪ್ರಭು, ಎಸ್ಪಿ ಅಶೋಕ್, ವಿಶೇಷ ಅಧಿಕಾರಿ ಡಾ.ನಾಗಣ್ಣ, ಎಸಿ ಕೊಟ್ಟೂರು ಶಿವಪ್ಪ, ತಹಶೀಲ್ದಾರ್ ಮಂಜುನಾಥ, ತಾಪಂ ಇಓ ಅಪೂರ್ವ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಅರಕೆರೆಶಂಕರ್, ಯುವಧ್ಯಕ್ಷ ಬೈರೇಶ್, ಮುಖಂಡರಾದ ದಿನೇಶ್, ಎಂಎನ್‌ಜೆ ಮಂಜುನಾಥ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಉಮೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅನಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಲತಾ, ಸದಸ್ಯರಾದ ಎ.ಡಿ.ಬಲರಾಮಯ್ಯ,ಓಬಳರಾಜು, ನಂದೀಶ್,ಭಾಗ್ಯಮ್ಮ ಗಣೇಶ್, ಮುಖಂಡರಾದ ಮಹಾಲಿಂಗಪ್ಪ,ವಿನಯ್, ಕೇಬಲ್ ಸಿದ್ದಗಂಗಯ್ಯ, ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಜಯಮ್ಮ, ಅಟಿಕ ನಾಗರಾಜು, ಸೇರಿದಂತೆ ಇತರರು ಇದ್ದರು.
ಪೌರಕಾರ್ಮಿಕರಿಗೆ ಮನೆ ಹಸ್ತಾಂತರ:
ರಾಜ್ಯಸರಕಾರದ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ೬ಲಕ್ಷ, ಪಪಂಯಿ0ದ ೧ಲಕ್ಷ ಸೇರಿ ೧ಕೋಟಿ ವೆಚ್ಚದ ೧೩ಮನೆಗಳನ್ನು ಕೊರಟಗೆರೆಯ ೧೩ಜನ ಪೌರಕಾರ್ಮಿಕರಿಗೆ ಹಸ್ತಾಂತರ. ಪೌರಕಾರ್ಮಿಕರಿಗೆ ೨೦ಲಕ್ಷದ ಅಪಘಾತ ವಿಮೆಗೆ ಚಾಲನೆ ಮತ್ತು ಮಡಿವಾಳ ಸಮಾಜದ ಕಾರ್ಮಿಕರಿಗೆ ಇಸ್ತ್ರಿ ಪೆಟ್ಟಿಗೆಯನ್ನು ಗೃಹಸಚಿವ ಡಾ.ಜಿ.ಪರಮೇಶ್ವರ ವಿತರಣೆ ಮಾಡಿದರು.
ಉದ್ಯನವನ ಅಭಿವೃದ್ದಿಗೆ ಚಾಲನೆ:
ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಪಾರ್ಕ್ ನಿರ್ಮಾಣಕ್ಕೆ ೫೦ಲಕ್ಷ, ಗೋಕುಲ ಕೆರೆಯ ಉದ್ಯಾನವನಕ್ಕೆ ೩೦ಲಕ್ಷ, ತಾಲೂಕು ಕಚೇರಿ ಹತ್ತಿರ ಉದ್ಯಾನವನಕ್ಕೆ ೧೦ಲಕ್ಷ ಮತ್ತು ವಿನಾಯಕ ನಗರದಲ್ಲಿ ಪಾರ್ಕ್ ನಿರ್ಮಾಣಕ್ಕೆ ೧೦ಲಕ್ಷ ಸೇರಿ ೪ಕಡೆ ೧ಕೋಟಿ ವೆಚ್ಚದ ಕಾಮಗಾರಿಗೆ ಗೃಹಸಚಿವ ಭೂಮಿಪೂಜೆ ನೇರವೆರಿಸಿದರು.
ಗೃಹಸಚಿವ ಜವಾಬ್ದಾರಿ ಜಾಸ್ತಿ ಇರುತ್ತೇ:
ಕೊರಟಗೆರೆ ಕ್ಷೇತ್ರದ ಜನರ ಆರ್ಶಿವಾದದಿಂದ ೩ಸಲ ರಾಜ್ಯದ ಗೃಹಸಚಿವನಾಗಿದ್ದೇನೆ. ರಾಜ್ಯದ ಮಹಿಳೆ, ಮಕ್ಕಳು ಸೇರಿದಂತೆ ಸರಕಾರದ ಆಸ್ತಿ ರಕ್ಷಣೆ ಮಾಡುವುದು ನನ್ನ ಕರ್ತವ್ಯ. ನಾನು ಕೊರಟಗೆರೆಗೆ ಪ್ರತಿತಿಂಗಳು ಬರೋದಿಲ್ಲ ಅನ್ನೋ ಮಾತ್ರಕ್ಕೆ ಯಾವ ಅಭಿವೃದ್ದಿ ಕೆಲಸಗಳು ನಿಲ್ಲೂದಿಲ್ಲ. ಅಭಿವೃದ್ದಿ ವಿಚಾರದಲ್ಲಿ ಕೊರಟಗೆರೆಗೆ ನನ್ನ ಪ್ರಮುಖ ಆಧ್ಯತೆ ಇರುತ್ತೇ. ನಾನು ಎಲ್ಲೇ ಇದ್ದರೂ ಪ್ರತಿಯೊಂದು ಮಾಹಿತಿಯು ನನಗೇ ಬರುತ್ತೇ ಎಂದರು.
ಪಪ0ಯನ್ನು ಮೇಲ್ದರ್ಜೆಗೆ ಏರಿಸಿ ಈಗ ಪುರಸಭೆ ಮಾಡಿದ್ದೇನೆ. ಕೊರಟಗೆರೆ ಸೇರಿದಂತೆ ರಾಜ್ಯದಲ್ಲಿನ ಪುರಸಭೆ ಚುನಾವಣೆ ತ್ವರಿತವಾಗಿ ನಡೆಸಲು ಸರಕಾರ ತಿರ್ಮಾನ ಮಾಡಿದೆ. ಪಪಂ ಸದಸ್ಯರ ಮತ್ತು ಜನತೆಯ ಬಹುವರ್ಷದ ಬೇಡಿಕೆ ಈಡೇರಿದೆ. ಕೊರಟಗೆರೆ ಪಟ್ಟಣದ ಜನರಿಗೆ ನೀಡಿದ ಮತ್ತೊಂದು ಭರವಸೆಯು ಈಡೇರಿದೆ.
> ಡಾ.ಜಿ.ಪರಮೇಶ್ವರ್. ಗೃಹ ಸಚಿವ





