oplus_0

ಕೊರಟಗೆರೆ: ತಾಲೂಕಿನ ತಣ್ಣೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಆಂಜನೇಯಸ್ವಾಮಿ ಸೇವಾ ಟ್ರಸ್ಟ್ ಹಾಗೂ ಸಪ್ತಗಿರಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.
ಟ್ರಸ್ಟ್ ಅಧ್ಯಕ್ಷ ಗೋವಿಂದಯ್ಯ ಮಾತನಾಡಿ ಗ್ರಾಮೀಣ ಭಾಗದಲ್ಲಿ ಬಡತನದಿಂದ ಅನೇಕ ಯುವಕರು ಹಾಗೂ ವಯೋವೃದ್ಧರು ಪಟ್ಟಣಕ್ಕೆ ಹೋಗಿ ಚಿಕಿತ್ಸೆ ಪಡೆಯಲು ಆಗದಂತಹ ಪರಿಸ್ಥಿತಿ ಇನ್ನೂ ಹಳ್ಳಿಗಳಲ್ಲಿ ಇದ್ದಾರೆ. ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯದ ರಕ್ಷಣೆ ಬಹು ಮುಖ್ಯ ಆದ್ದರಿಂದ ನಮ್ಮ ಸೇವಾ ಟ್ರಸ್ಟ್ ಪದಾಧಿಕಾರಿಗಳು ನಮ್ಮ ತಾಲೂಕಿನ ಬಡ ಜನರಿಗೆ ಅನುಕೂಲವಾಗಲಿ ಎಂದು ಈ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದೇವೆ ಇದರ ಸದುಪಯೋಗವನ್ನು ಪಡೆದುಕೊಂಡು ಆರೋಗ್ಯವನ್ನ ಕಾಪಾಡಿಕೊಳ್ಳಿ ಎಂದರು.
ಸಪ್ತಗಿರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಧನುಷ್ ಮಾತನಾಡಿ , ನಮ್ಮ ಆಸ್ಪತ್ರೆಯ ನುರಿತ ವೈದ್ಯಾಧಿಕಾರಿಗಳು ತಣ್ಣೇನಹಳ್ಳಿ ಗ್ರಾಮಕ್ಕೆ ಬಂದಿದ್ದಾರೆ. ನಿಮ್ಮ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ಆಂಜನೇಯಸ್ವಾಮಿ ಸೇವಾ ಟ್ರಸ್ಟ್ನ ಮುಖಂಡರು ಈ ಆರೋಗ್ಯ ಶಿಬಿರ ಆಯೋಜನೆ ಮಾಡಿದ್ದು ಇದರ ಸದುಪಯೋಗ ಪಡೆದುಕೊಂಡು ನಿಮಗೆ ಇರುವ ಆರೋಗ್ಯದ ಸಮಸ್ಯೆಯನ್ನು ನಮ್ಮ ಬಳಿ ಹೇಳಿಕೊಳ್ಳಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನ ನಾವು ನೀಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಗೋವಿಂದಯ್ಯ, ರಮೇಶ್, ಹನುಮಂತರಾಯಪ್ಪ, ಕಾಂತರಾಜು, ಗೋವಿಂದ ರೆಡ್ಡಿ, ರಂಗನಾಥ, ಬೋರ್‌ವೆಲ್ ಚಂದ್ರಣ್ಣ, ಆಶಾ ಕಾರ್ಯಕರ್ತೆರಾದ ಲಕ್ಷ್ಮಮ್ಮ, ನಂದಿನಿ, ಸೇರಿದಂತೆ ಬಸವೇಶ್ವರ ಸ್ವಾಮಿ ಹಾಗೂ ಆಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

(Visited 1 times, 1 visits today)