ತುಮಕೂರು: ತುಮಕೂರು ನಗರದ ಎಂ.ಜಿ.ರಸ್ತೆಯಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬೇಡ್ಕರ್ ಅವರ ಪರಿನಿರ್ವಾಣ ದಿವಸ್ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ರವರ ಆಶಯದಂತೆ ವಿದ್ಯೆ ಎನ್ನುವುದು ಸಾಧಕನ ಸ್ವತ್ತೇ ವಿನಹ ಸೋಮಾರಿಗಳ ಸ್ವತ್ತಲ್ಲ ಎಂಬ ನಾನ್ನುಡಿಯಂತೆ ಬಾಬಾ ಸಾಹೇಬರು ನಡೆದು ಬಂದ ದಾರಿ ಅವರ ಜೀವನ ಚರಿತ್ರೆಯನ್ನು ಹಬ್ಬತ್ತನಹಳ್ಳಿ ಶ್ರೀನಿವಾಸ್ ವಿವರಿಸಿದರು.
ಮತ್ತೊಬ್ಬ ಹಿರಿಯ ಹೋರಾಟಗಾರರಾದ ಎಂ.ರಾಮಯ್ಯ ಮಾತನಾಡಿ ತುಮಕೂರು ಜಿಲ್ಲೆಯ ದಲಿತಪರ ಹೋರಾಟಕ್ಕೆ ಮೆರುಗು ನೀಡಿದವರು ಧೀಮಂತ ನಾಯಕ ದಿವಂಗತ ಎಂ.ಸಿ ರಾಜು ರವರು ಇಂದು ನಮ್ಮೊಟ್ಟಿಗೆ ಇಲ್ಲ, ಆದರೆ ಅವರ ಆದರ್ಶಗಳು ಹಾಗೂ ಹೋರಾಟ ಮನೋಭಾವವನ್ನು ಎಲ್ಲರೂ ಅನುಸರಿಸಬೇಕು ಅವರು ದೀನ ದಲಿತರ ಪರವಾಗಿ ಅದೇಷ್ಟೋ ಧ್ವನಿ ಎತ್ತಿದ್ದಾರೆ, ಅವರನ್ನು ಮಾದರಿಯಾಗಿ ನಾವುಗಳು ಅನುಸರಿಸಬೇಕು ಎಂದು.
ಮತ್ತೊಬ್ಬ ಹಿರಿಯ ಮುಖಂಡರು ಹಾಗೂ ಜಯನುಡಿ ಪತ್ರಿಕೆ ಸಂಪಾದಕರಾದ ಜಯನುಡಿ ಜಯಣ್ಣ ಮಾತನಾಡಿ ಬಾಬಾ ಸಾಹೇಬರ ವಿಚಾರಧಾರೆಗಳನ್ನು ಕಾಲಕಾಲಕ್ಕೆ ಸ್ಮರಿಸಿಕೊಂಡು. ವಿದ್ಯೆಗೆ ಒತ್ತು ನೀಡಿದರೆ ನಮ್ಮ ಜೀವನ ಪಾವನವಾಗುತ್ತಿದೆ ಅದೂ ಅಲ್ಲದೆ ಪ್ರತಿಯೊಬ್ಬ ದಲಿತ ಮುಖಂಡರು ಕೂಡ ಅವರವರ ಕುಟುಂಬದ ಅಕ್ಕಪಕ್ಕದಲ್ಲಿರುವ ದಲಿತರ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು, ವಿದ್ಯೆಯಿಂದ ಯಾರೂ ಸಹ ದೂರ ಸರಿಬಾರದು ಎಂದು ನುಡಿದರು.
ಈ ಸಂದರ್ಭದಲ್ಲಿ ಟಿ.ಸಿ. ರಾಮಯ್ಯ, ಲವಕುಮಾರ್, ನರಸಿಂಹರಾಜು, ತಿಮ್ಮಲಾಪುರ ನರಸಿಂಹಮೂರ್ತಿ, ಮಂಜುಳಾ, ಸುಮಾ, ಶೇಖರ್, ಛಾಯಾ, ಶೋಭಾ, ಹಂಚಿಹಳ್ಳಿ ರಾಮಸ್ವಾಮಿ, ರಾಜಶೇಖರ್, ನಂಜಯ್ಯ ಮುಂತಾದವರು ಉಪಸ್ಥಿತರಿದ್ದರು.

(Visited 1 times, 1 visits today)