ತುಮಕೂರು: ಸಂಘಟನೆಯಲ್ಲಿ ಗುರುತಿಸಿಕೊಂಡವರು ಜನಪ ರವಾಗಿ ರಬೇಕು. ಅವರ ಹೋರಾಟ ಪಾರದರ್ಶಕವಾಗಿದ್ದರೆ ಜನರ ಬೆಂಬಲ ದೊರೆಯುತ್ತದೆ. ನೇರ ಪ್ರಶ್ನೆ ಮಾಡುವ, ನ್ಯಾಯ ಕೇಳುವ ಶಕ್ತಿ ಸಂಘಟನೆಯಿ0ದ ಬರುತ್ತದೆ, ಮಾಡುವ ಕೆಲಸದಲ್ಲಿ ಪ್ರಾಮಾ ಣಿಕತೆ ಇದ್ದರೆ ಸಮಾಜದಲ್ಲಿ ಗೌರವವೂ ದೊರೆಯುತ್ತದೆ ಎಂದು ವಿಜಯಸೇನೆ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ಹೇಳಿದರು.
ಸೋಮವಾರ ನಗರದಲ್ಲಿ ವಿಜಯಸೇನೆಯ ನಗರ ಮಹಿಳಾ ಘಟಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾ ಡಿದ ಅವರು, ರಾಜಕೀಯ ಪಕ್ಷಗಳಲ್ಲಿ ಸ್ಥಾನಮಾನಗಳು ಬದಲಾಗ ಬಹುದು, ಆ ದರೆ ಬಲಿಷ್ಠವಾದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡವರಿಗೆ ಅವರದ್ದೇ ಆದ ಸ್ಥಾನ ಉಳಿದಿರುತ್ತದೆ. ನ್ಯಾಯದ ಪರ ಪ್ರಶ್ನೆ ಮಾಡುವ ಶಕ್ತಿ ಬೆಳೆಯುತ್ತದೆ. ಈ ಮೂಲಕ ನಾಯಕತ್ವ ಬೆಳೆಸಿಕೊಳ್ಳಬಹುದು ಎಂದರು.
ಸಂಘಟನೆಯವರು ಯಾವತ್ತೂ ನೊಂದವರ ಧ್ವನಿಯಾಗಿ, ನ್ಯಾಯಕ್ಕಾಗಿ ಹೋರಾಟ ಮಾಡುವ ಮನೋಭಾವ ಹೊಂದಿ ರಬೇಕು. ಭ್ರಷ್ಟರಿಗೆ ಸಿಂಹಸ್ವಪ್ನವಾಗಿ ಹೋರಾಟ ಮಾಡಿ ನ್ಯಾಯ ಕೊಡಿಸಬೇಕು. ಹೋರಾಟದಲ್ಲಿ ಪ್ರಾಮಾಣಿಕತೆ ಇದ್ದರೆ ಯಶಸ್ವಿ ಯಾಗಬಹುದು. ಸಂಘಟನೆಯಲ್ಲಿ ಹೋರಾಟ, ನಾಯಕತ್ವ ರೂಪಿಸಿಕೊಂಡರೆ ರಾಜಕೀಯ ಸ್ಥಾನಮಾನಗಳನ್ನು ಪಡೆಯಲೂ ಅವಕಾಶವಾಗುತ್ತದೆ ಎಂದು ಹೇಳಿದರು.
ಕನ್ನಡ ಜನ, ನಾಡು, ನುಡಿ, ನೆಲ, ಜಲ ರಕ್ಷಣೆಯ ಆಶಯ ಗಳನ್ನು ಹೊಂದಿರುವ ವಿಜಯಸೇನೆ, ಧಕ್ಕೆಯಾದಾಗ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧವಾಗುತ್ತದೆ. ಹಾಗೆ ಜನಸಾಮಾನ್ಯರಿಗೆ ಅನ್ಯಾಯವಾ ದಾಗ ಅವರಪರವಾಗಿ ಧ್ವನಿಯಾಗಿ ನಿಲ್ಲು ತ್ತದೆ. ಮಹಿಳಾ ಘಟಕದವರೂ ಇಂತಹ ಹೋರಾಟಗಳಲ್ಲಿ ಮುಂಚೂ ಣಿಯಲ್ಲಿರಬೇಕು ಎಂದು ಹೆಚ್.ಎನ್.ದೀಪಕ್ ಹೇಳಿದರು.
ವಿಜಯಸೇನೆ ರಾಜ್ಯ ಕಾರ್ಯದರ್ಶಿ ರಂಜನ್, ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ ರಾಧಾ ಗಂಗಾಧರ್, ಜಿಲ್ಲಾಧ್ಯಕ್ಷೆ ಯಾಸ್ಮೀನ್ ತಾಜ್, ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ, ಪ್ರಧಾನ ಕಾರ್ಯದರ್ಶಿ ಹರೀಶ್, ಉಪಾಧ್ಯಕ್ಷ ಆದೇಶ್, ಮುಖಂಡರಾದ ರುದ್ರೇಶ್, ನಾಗರಾಜ್, ಮನಸೂರ್ ಮೊದಲಾದವರಿದ್ದರು. ಈ ವೇಳೆ ವಿಜಯಸೇನೆ ನಗರ ಘಟಕ ಅಧ್ಯಕ್ಷೆ ತೇಜಾಮಣಿ ಶಿವಶಂಕರ್, ಉಪಾಧ್ಯಕ್ಷೆ ಮಮತಾ ಶಿವು, ಪ್ರಧಾನ ಕಾರ್ಯದರ್ಶಿ ಮಮತಾ ಶಿವಶಂಕರಯ್ಯ, ಖಜಾಂಚಿ ರತ್ನಮ್ಮ ಗೋಪಿ ಹಾಗೂ ಸದಸ್ಯೆಯರು ಅಧಿಕಾರ ಸ್ವೀಕಾರ ಮಾಡಿದರು.

(Visited 1 times, 1 visits today)