ತುಮಕೂರು: ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನವಿರೋಧಿ ಧೋರಣೆ ಹೊಂದಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಪರ್ಯಾಯವಾಗಿ ಜನಪರ ಅಂಶಗಳನ್ನು ಒಳಗೊಂಡ ರಾಜಕೀಯ ಆಂದೋಲನ ರೂಪಿಸುವ ನಿಟ್ಟಿನಲ್ಲಿ ಸಿಪಿಐ(ಎಂ) ರಾಜ್ಯದಾದ್ಯಂತ ಕೈಗೊಂಡಿರುವ ಪರ್ಯಾಯ ರಾಜಕಾರಣಕ್ಕಾಗಿ ಜನದನಿಯ ರ‍್ಯಾಲಿ ಎಂಬ ಬೃಹತ್ ಪ್ರತಿಭಟನಾ ಕಾರ್ಯಕ್ರಮದ ಸಮಾರೋಪ ಸಮಾರಂಭ ಡಿಸೆಂಬರ್ ೨೧ ರಂದು ಬೆಂಗಳೂರಿನಲ್ಲಿ ಜರಗಲಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಪ್ರಕಾಶ್ ತಿಳಿಸಿದರು.
ಜನಚಳವಳಿ ಕೇಂದ್ರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,೨೦೨೫ರ ನವೆಂಬರ್ ೦೧ ರಿಂದ ಡಿಸೆಂಬರ್ ೨೦ ರವರೆಗೆ ನಡೆದಿರುವ ಕಾರ್ಯಕರ್ತರ ಮನೆ ಮನೆ ಭೇಟಿ, ಕಿರುಪತ್ರ ಹಂಚುವಿಕೆ ಮೂಲಕ ಜನರಿಗೆ ಆಳುವ ಪಕ್ಷಗಳ ದುರಾಡಳಿತದ ಬಗ್ಗೆ ಮನವರಿಕೆ ಮಾಡಿಕೊಡುವುದಲ್ಲದೆ, ಹೊಸ ರಾಜಕೀಯ ಶಕ್ತಿಯ ಉದಯಕ್ಕೆ ನಾಂದಿ ಹಾಡುವಂತೆ ಮನವೊ ಲಿಸುವ ಪ್ರಯತ್ನ ನಡೆದಿದೆ.ಇದರ ಸಮಾರೋಪ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಡಿಸೆಂಬರ್ ೨೧ ರಂದು ಸುಮಾರು ೩೦ ಸಾವಿರಕ್ಕೂ ಅಧಿಕ ರೈತರು, ಕಾರ್ಮಿಕರು, ಯುವಜನರು ಭಾಗವಹಿಸಲಿದ್ದಾರೆ ಎಂದರು.
ಕೇ0ದ್ರದ ಎಡಿಎ ಮತ್ತು ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಬಂಡವಾಳದ ಮುಕ್ತ ಹರಿವಿನಿಂದ ದೇಶದ ಜನರಿಗೆ ಅನುಕೂಲವಿದೆ.ಆ ಮೂಲಕ ಶಿಕ್ಷಣ,ಆರೋಗ್ಯದಲ್ಲಿ ಸುಧಾರಣೆ ತರಬಹುದೆಂಬ ಭ್ರಮೆಯಲ್ಲಿ ಖಾಸಗೀಕರಣಕ್ಕೆ ಮುಂದಾಗಿದೆ.ಎನ್.ಇ.ಪಿ-೨೦೨೦ನ್ನು ಬಹಿರಂಗವಾಗಿ ವಿರೋಧಿಸಿ, ಎಸ್.ಇ.ಪಿ. ಜಾರಿಗೆ ತಂದ ಸಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರ,ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಮೂಲಕ ಹಂತ ಹಂತವಾಗಿ ಶಿಕ್ಷಣವನ್ನು ಬಡವರು, ಮಧ್ಯಮ ವರ್ಗದ ಜನರಿಂದ ದೂರ ಉಳಿಯುವಂತೆ ಮಾಡಿ, ಹಿಂಬಾಗಿಲಿನ ಮೂಲಕ ಎನ್.ಇ.ಪಿ ಜಾರಿ ಮಾಡುತ್ತಿದೆ.ಪಿಪಿಪಿ ಮಾಡಲ್‌ನಲ್ಲಿ ಹೊಸದಾಗಿ ೧೧ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿ, ಬಡವರಿಗೆ ಉಚಿತವಾಗಿ ತಲುಪಬಹುದಾಗಿದ್ದ ಗುಣಮಟ್ಟದ ಆರೋಗ್ಯ ಸೇವೆಯಿಂದ ವಂಚಿಸಲು ಹೊರಟಿದೆ.ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದ್ದು,ಸ್ಯಾಕ್ಷನ್ ಪೋಸ್ಟ್ಗಳಲ್ಲಿ ಶೇ ೪೦ಕ್ಕೆ ಅನುಮೋದನೆ ನೀಡಿ, ಅವುಗಳಲ್ಲಿ ಶೇ೩೦ರಷ್ಟು ಭರ್ತಿ ಮಾಡಿ, ಹಿಂದೆ0ದು ಕಾಣದ ನಿರುದ್ಯೋಗ ಸಮಸ್ಯೆ ಕಾಡುವಂತೆ ಮಾಡಿದೆ.ಈ ಕಡೆಗೆ ಯುವಜನರ ಗಮನ ಹರಿಯದಂತೆ ರಾಮಜನ್ಮ ಭೂಮಿ,ಒಂದೆ ಮಾತರಂ ನಂತರ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಯುವಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಡಾ.ಪ್ರಕಾಶ್ ಆರೋಪಿಸಿದರು.
ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಕಾರ್ಪೋರೇಟ್ ಭ್ರಷ್ಟಾಚಾರ ಮಿತಿ ಮೀರಿದೆ.ಸರಕಾರ ಯೋಜನೆಗಳನ್ನು ದೊಡ್ಡ ದೊಡ್ಡ ಕಂಪನಿಗಳಿಗೆ ಸಬ್ಸಿಡಿ ಮೂಲಕ ನೀಡಿ, ಅದರಲ್ಲಿ ಇಂತಿಷ್ಟು ಹಣವನ್ನು ಬಿಜೆಪಿ ಪಕ್ಷಕ್ಕೆ ಚುನಾವಣಾ ಧೇಣಿಗೆ ರೂಪದಲ್ಲಿ ಪಡೆದು ದೇಶದ ಜನರನ್ನು ಮೋಸ ಮಾಡಲಾಗುತ್ತಿದೆ.ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಾಯ್ದೆ೭೯ ಎ ಮತ್ತು ಬಿ ಗೆ ಷರತ್ತು ತೆಗೆದು ಹಾಕಿ, ೫೪ ಎಕರೆ ಇದ್ದ ಭೂ ಕೊಳ್ಳುವಿಕೆ ಮಿತಿಯನ್ನು ೧೦೮ ಕ್ಕೆ ಹೆಚ್ಚಿಸುವ ಮೂಲಕ ರೈತರ ಫಲವತ್ತಾದ ಭೂಮಿಯನ್ನು ಭೂಗಳ್ಳರ ಕೈಗೆ ಒಪ್ಪಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಹೊರಟಿವೆ.ಚನ್ನರಾಯಪಟ್ಟಣದ ರೈತರು ಉದ್ದೇಶಿಸಿ ಯೋಜನೆಗೆ ಭೂಮಿ ನೀಡಲಿಲ್ಲವೆಂಬ ಕಾರಣಕ್ಕೆ ಶಾಶ್ವತ ಹಸಿರು ವಲಯ ಘೋಷಿಸಿ,ಅವರನ್ನು ಬೆದರಿಸುವ ತಂತ್ರವನ್ನು ಇಂದಿನ ರಾಜ್ಯ ಸರಕಾರ ಅನುಸರಿಸುತ್ತಿದೆ. ಈ ವಿಚಾರಗಳೇ ಅಲ್ಲದೆ ಸುಮಾರು ೧೯ ವಿಚಾರಗಳನ್ನು ಮುಂದಿಟ್ಟುಕೊAಡು ಸಿಪಿಐ(ಎಂ) ಕಾರ್ಯಕರ್ತರು ಕಳೆದ ಒಂದು ತಿಂಗಳಿನಿAದ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ, ಸರಕಾರಗಳ ಜನ ವಿರೋಧಿ ಧೋರಣೆ ಮತ್ತು ಸಿಪಿಐ(ಎಂ)ನ ಯೋಜನೆಗಳ ಕುರಿತು ಅರಿವು ಮೂಡಿಸಲು ಪ್ರಯತ್ನ ನಡೆಸಿದ್ದು, ಇದರ ಸಮಾರಂಭ ಸಮಾರಂಭ ಡಿಸೆಂಬರ್ ೨೧ ರಂದು ಜರಗಲಿದೆ.ರೈತರು, ಕೂಲಿ ಕಾರ್ಮಿಕರು,ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ನಗರ ಕಾರ್ಯದರ್ಶಿ ಎ.ಲೋಕೇಶ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್,ಜಿ.ಕಮಲ ಮತ್ತಿತರರು ಪಾಲ್ಗೊಂಡಿದ್ದರು.

(Visited 1 times, 1 visits today)