ತುಮಕೂರು: ಎಲ್ಲಾ ಮುನಿಪಲ್ ಗುತ್ತಿಗೆ / ಹೋರ ಗುತ್ತಿಗೆ ಕಾರ್ಮಿಕರ ಸೇವೆಗಳ ಖಾಯಂಮಾತಿಗಾಗಿ ,ಖಾಯಂಗೊಳಿಸುವ ತನಕ ನೇರ ಪಾವತಿಯಡಿಯಲ್ಲಿ ಸಮಾನ ಕೇಲಸಕ್ಕೆ ಸಮಾನ ವೇತನ ನೀಡಲು ೨೦೨೬-೨೭ ಸಾಲಿನ ಬಜೆಟ್‌ನಲ್ಲಿ ಕ್ರಮ ವಹಿಸಲು ಒತ್ತಾಯಿಸಿ ದಿನಾಂಕ; ೧೮-೧೨-೨೦೨೫ ರಂದು ಮಧ್ಯಾನ್ಹ ಧರಣಿ ತುಮಕೂರು ಮಹಾ ನಗರ ಪಾಲಿಕೆ ಕಸದ ವಾಹನ ಚಾಲಕರ ಸಹಾಯಕರು ಲೋರ‍್ಸ್.&ಕ್ಲೀರ‍್ಸ ಸಂಘ ರಿ, ಪೌರ ಕಾರ್ಮಿಕರ ಸಂಘ. ರಿ ಸಿಐಟಿಯು ನೇತ್ರೇತ್ವದಲ್ಲಿ ಮಹಾ ನಗರ ನಗರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದ ಎಲ್ಲಾ ಮುನಿಸಿಪಾಲಿಟಿ,ಮಹಾ ನಗರ ಪಾಲಿಕೆಗಳಲ್ಲಿ ನೇರ ಪಾವತಿ , ಗುತ್ತಿಗೆ ಪೌರಕಾ ರ್ಮಿಕರು, ದಿನಾಗೂಲಿ ಲೋರ‍್ಸ್, ಕಸದ ವಾಹನ ಚಾಲಕರು, ಸಹಾಯಕರು, ಕ್ಲಿರ‍್ಗಳು, ಒಳಚರಂಡಿ ಸ್ವಚ್ಛತಾ , ಪಾರ್ಕ, ಸ್ಮಶಾಣ, ಘನ ತ್ಯಾಜ್ಯವಿಲೆವಾರಿ ಘಟಕ, ಶೌಚಾಲಯಗಳಲ್ಲಿ ಕಾರ್ಮಿಕರು, ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು , ನೀರು ಸರಬರಾಜು ನೌಕರರ, ಕಂಪ್ಯೂಟರ್ ಅಪರೇರ‍್ಗಳು ನಡುವೆ ತಾರತಮ್ಯ ಮಾಡದೆ ಒಂದೇ ಬಾರಿಗೆ ಖಾಯಂಗೊಳಿಸಲು ಮುನಿಸಿಪಲ್ ನೌಕರರು ದಶಕಗಳಿಂದ ಒತ್ತಾಯಿಸುತ್ತಲೆ ಬಂದಿದ್ದರು ಯಾವುದೆ ಕ್ರಮವಹಿಸಿದೆ ಮುನಿಸಿಪಲ್ ಕಾರ್ಮಿ ಕರನ್ನು ವಿಭಜಿಸುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ರಾಜ್ಯದಲ್ಲಿ ಬಾಕಿ ಇರುವ ಕನಿಷ್ಟ ವೇತನವನ್ನು ಈ ತಕ್ಷಣವೆ ಪರಿಷ್ಕರಣೆಗೆ ಒಳ ಪಡಿಸಿ ಮಾಸಿಕ ಕನಿಷ್ಟ ವೇತನ ರೂ ೩೬೦೦೦ , ತುಟ್ಟಿಭತ್ಯೆ ಅಂಕ ಒಂದಕ್ಕೆ ೫ ಪೈಸೆ ಮತ್ತು ೬ ತಿಂಗಳಿಗೆ ಒಮ್ಮೆ ತುಟ್ಟಿ ಭತ್ಯೆ ಜಾರಿಗೆ ಕ್ರಮ ವಹಿಸ ಬೇಕು. ಅತಿ ಹೆಚಿ ್ಚನ ಸಂಖ್ಯೆಯಲ್ಲಿರುವ ಮಹಿಳಾ ಪೌರಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ, ಬಾಲವಾಡಿ, ವಿಶ್ರಾಂತಿ ಗೃಹದಂತಹ ಅತ್ಯವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಡ್ಡಾಯ ವಾಗಿ ರಾಜ್ಯದ ಎಲ್ಲಾ ಕಡೆ ನೀಡಲೇಬೇಕು ಎಂಬ ಸರ್ಕಾರಿ ಅದೇಶವನ್ನು ಕೂಡಲೇ ಹೊರಡಿಸಬೇಕು..
ಪೌರಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯ ಯೋಜನೆಯನ್ನು ಕೇವಲ ಖಾಯಂ ಪೌರಕಾರ್ಮಿಕರಿಗೆ ಸೀಮಿತ ಮಾಡದೆ ಎಲ್ಲಾರನ್ನು ಪರಿಗಣಿಸಬೇಕು ಮಕ್ಕಳು ಶಾಲೆ ಕಾಲೇಜುಗಳಲ್ಲಿಯೂ ವ್ಯಾಸಂಗ ಮಾಡಲು ಹಣ ಕಾಸಿನ ನೆರವು ನೀಡಭೆಕು .. ಮುನಿಸಿಪಲ್ ಕಾರ್ಮಿಕರಿಗೆ ಇತರೆ ಕೆಲಸಗಳಿಗೆ ನಿಯೋಜಿಸಬಾರದು, ಎಲ್ಲಾ ಮುನಿಸಿಪಲ್ ಗುತ್ತಿಗೆ- ಹೋರ ಗುತ್ತಿಗೆ ಕಾರ್ಮಿಕರಿಗೆ ತಿಂಗಳ ೫ ನೇತಾರಿಕೀನ ಒಳಗೆ ಸಂಬಳ ನೀಡಬೇಕು. ಕಾರ್ಮಿಕ ಕಾನೂನುಗಳ ಅನ್ವಯ ೮ ಗಂಟೆ ಕೆಲಸ, ಸಂಬಳದ ಚೀಟಿ, ವಾರದ ರಜೆ, ಹಬ್ಬದ ರಜೆ,ಉಪಧನ ಸಂಬ0ದ ಸ್ಪಷ್ಟವಾದ ಅದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಸೈಯದ್ ಮುಜೀಬ್, ಎನ್.ಕೆ. ಸುಬ್ರಮಣ್ಯ, ಕಸದ ವಾಹನ ಚಾಲಕರ & ಇತರ ಸಂಘ ಪ್ರಧಾನ ಕಾರ್ಯಧರ್ಶಿ ಮಾರುತಿ, ಖಜಾಂಚಿ, ಮಂಜು ನಾಥ್ , ಶ್ರೀನಿವಾಸ್, ತುಮಕೂರು ಪೌರ ಕಾರ್ಮಿಕರ ಸಂಘ,.ರಿ ಮಂಜುನಾಥ್, ಕುಮಾರ್ , ಅಂಜನಿ ಮತ್ತಿತರರು ಮಾತನಾಡಿದರು.
ಮನವಿ ಸ್ವಿಕರಿಸಿದ ಆರೋಗ್ಯಧಿಕಾರಿಗಳಾದ ಡಾ; ಯೋಗಿಶ್ ನೀತಿ ನಿರೂಪಕ ಪ್ರಶ್ನೆಗಳನ್ನು ಸರ್ಕಾರಕ ಕಳುಹಿಸುವುದಾಗಿ , ಮತ್ತು ಇಲ್ಲೆ ಇತ್ಯಾರ್ಥಕ್ಕೆ ಸಾಧ್ಯತೆ ಇರುವ ಪ್ರಶ್ನೆಗಳನ್ನು ಸಭೆ ನಡೆಸಿ ಪರಿಹಾರ ಮಾಡುವುದಾಗಿ ತಿಳಿಸಿದರು.

(Visited 1 times, 1 visits today)