ತುಮಕೂರು: ನ್ಯಾಯಾಲಯಕ್ಕೆ ನೀಡಿದ ಮೌಖಿಕಭರವಸೆ ಹುಸಿಗೊಳಿಸಿ, ೬೦೦೦ಕ್ಕು ಹೆಚ್ಚು ಅತಿಥಿ ಉಪನ್ಯಾಸಕರನ್ನು, ಅವರ ೨೦ ವರ್ಷಗಳ ಸೇವೆಯನ್ನು ಪರಿಗಣಿಸಿದೆ, ಆರ್ನಹ ಎಂಬ ಹಣೆಪಟ್ಟಿ ಕಟ್ಟಿ, ಸೇವೆಯಿಂದ ತೆಗೆದು ಹಾಕಿರುವ ಉನ್ನತ ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿ,೨೦೨೬ರ ಜನವರಿ ೦೫ ರಂದು ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ದಿ ಸಂಘದ ಮುಖ್ಯಮಂತ್ರಿಗಳ ಮನೆಯ ಮುಂದೆ ಹೋರಾಟ ನಡೆಸುವುದಾಗಿ ಸಂಘದ ಅಧ್ಯಕ್ಷರಾದ ಲೋಕೇಶ್.ಪಿ.ಸಿ.ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೨೦ಕ್ಕೂ ಹೆಚ್ಚು ವರ್ಷಗಳ ಕಾಲ ನಮ್ಮಿಂದ ಸೇವೆ ಪಡೆದು, ಈಗ ಅನರ್ಹಎಂದು ಹೇಳಿ ಕೆಲಸದಿಂದ ತೆಗೆಯುವ ಮೂಲಕ ಹೈಕೋರ್ಟ ಆದೇಶ ಉಲ್ಲಂಘನೆಯ ಜೊತೆಗೆ, ಯುಜಿಸಿ ನಿಯಮವನ್ನು ರಾಜ್ಯ ಸರಕಾರ ಗಾಳಿಗೆ ತೂರಿದೆ. ಸರಕಾರದ ಈ ಜನವಿರೋಧಿ ನಡೆಯ ವಿರುದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಜೊತೆಗೆ, ಪ್ರಾಥಮಿಕ ಶಾಲೆಗಳಲ್ಲಿ ಕೆಪಿಎಸ್ ಮ್ಯಾಗ್ನಟ್ ಶಾಲೆಯ ಹೆಸರಿನಲ್ಲಿ ಅತಂತ್ರರಾಗಿರುವ ೭೦ ಸಾವಿರ ಅತಿಥಿ ಉಪನ್ಯಾಸಕರು ಒಗ್ಗೂಡಿ ಹೋರಾಟದಲ್ಲಿ ಪಾಲ್ಗೊಳ್ಳ ಲಾಗುವುದು ಎಂದರು.
ನಾವು ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ಅತಿಥಿ ಉಪನ್ಯಾಸಕರಾಗಿ ಸೇರುವ ಸಂದರ್ಭದಲ್ಲಿ ಶೇ೬೫ ರಷ್ಟು ಅಂಕಗಳೊ0ದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದರೆ ಸಾಕು ಎಂಬ ಮಾನದಂಡ ಮುಂದಿಟ್ಟು, ನಮ್ಮನ್ನು ಅತ್ಯಂತ ಕಡಿಮೆ ಗೌರವಧನಕ್ಕೆ ದುಡಿಸಿಕೊಂಡು, ಇನೇನು ನಿವೃತ್ತಿಯ ವಯಸ್ಸು ಹತ್ತಿರವಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ೬ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರನ್ನು ಬೀದಿಗೆ ತಳ್ಳಿದೆ. ಕರ್ನಾಟಕ ಹೈಕೋರ್ಟಿಗೆ ೨೪-೧೧-೨೦೨೫ರಂದು ಸರಕಾರದ ಪರವಾಗಿ ಅಡ್ವಕೇಟ್ ಜನರಲ್ ಅವರು ಹಾಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಯಾವುದೇ ತೊಂದರೆ ನೀಡು ವುದಿಲ್ಲ ಎಂದು ನ್ಯಾಯಪೀಠಕ್ಕೆ ಮೌಖಿಕ ಭರವಸೆ ನೀಡಿ, ಡಿಸೆಂಬರ್ ೦೮ ರಂದು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರು ಹಾಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊ ಳಿಸ ಲು ಆದೇಶ ಮನೆ ಮುಂದೆ ಹೋರಾಟ ಹಮ್ಮಿಕೊಂ ಡಿರು ವುದಾಗಿ ತಿಳಿಸಿದರು.
ರಾಜ್ಯ ಸರಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ದಿ ಸಂಘದ ಸದಸ್ಯರಾದ ಮಂಜುನಾಥ್ ಜೋಗಿ ಮಾತನಾಡಿ, ಸುಪ್ರಿಂಕೋರ್ಟಿನ ಆದೇಶದಂತೆ ಅತಿಥಿ ಉಪನ್ಯಾಸಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಜೊತೆಗೆ, ಸತತ ೧೦ ವರ್ಷ ಕಾರ್ಯನಿರ್ವಹಿಸಿದ ಉಪನ್ಯಾಸಕರನ್ನು ಖಾಯಂ ಗೊಳಿಸಬೇಕು ಎಂಬ ಆದೇಶವನ್ನು ಪಾಲಿಸುತ್ತಿಲ್ಲ. ಬದಲಿಗೆ ಯುಜಿಸಿ ನಿಯಮದ ಕೆಲವೇ ಅಂಶಗಳನ್ನು ಮುಂದಿಟ್ಟು, ನೀವು ನೆಟ್, ಸ್ಲಟ್, ಎಂ.ಫೀಲ್, ಪಿಹೆಚ್‌ಡಿ ಪಡೆದಿಲ್ಲ. ಹಾಗಾಗಿ ನೀವು ಆರ್ಹರಲ್ಲಎಂದು ಬೀದಿಗೆ ತಳ್ಳಲು ಹೊರಟಿದೆ. ನಮ್ಮನ್ನು ಸೇವೆಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಅಗತ್ಯವಿಲ್ಲದ ಈ ಆರ್ಹತೆಗಳು, ೨೦ ವರ್ಷ ಪಾಠ ಮಾಡಿ, ಸಾವಿರಾರು ಮಕ್ಕಳಿಗೆ ಪದವಿ ಶಿಕ್ಷಣ ನೀಡಿ, ಅವರಿಗೆದಾರಿ ದೀಪ ಕಲ್ಪಿಸಿದ ನಂತರ ಉದ್ಬವಿಸಿದ್ದು ಏಕೇ, ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.ನಾವು ಆನರ್ಹರು ಎಂದಾದರೆ, ನಮ್ಮ ಪಾಠ ಕೇಳಿ ಪದವಿಧರರಾದವರುಆರ್ಹ ಪದವಿಧರರೇ? ಈ ಪ್ರಶ್ನೆಗೆ ಸರಕಾರವೇ ಉತ್ತರ ನೀಡಬೇಕು ಎಂದರು.
ಇಡೀ ರಾಷ್ಟಕ್ಕೆ ಇರುವುದು ಒಂದೇ ಯುಜಿಸಿ ನಿಯಮ.ಆದರೆ ರಾಜ್ಯ ಸರಕಾರ ಮಾತ್ರ ಕರ್ನಾಟಕಲ್ಲಿ ೪೫೦ ಸರಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕದಲ್ಲಿ ನ್ಯಾಯಾಲಯಕ್ಕೆ ಯುಜಿಸಿ ನಿಯಮಗಳ ತಪ್ಪು ವ್ಯಾಖ್ಯಾನ ಮಾಡಿ, ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಹೊಸದಾಗಿ ನೇಮಕಾತಿ ಸಂದರ್ಭದಲ್ಲಿ ಯುಜಿಸಿ ನಿಯಮದ ಪ್ರಕಾರ ನೆಟ್, ಸ್ಲೆಟ್,ಪಿ.ಹೆಚ್.ಡಿಕಡ್ಡಾಯ.ಆದರೆ ಈಗಾಗಲೇ ಹತ್ತಾರು ವರ್ಷ ಸೇವೆ ಸಲ್ಲಿಸಿರುವವರಿಗೆ ವಿನಾಯಿತಿ ಇದೆ. ಆದನ್ನು ಮುಚ್ಚಿಟ್ಟು ನ್ಯಾಯಾಲಯದ ದಾರಿ ತಪ್ಪಿಸುವುದರ ಜೊತೆಗೆ, ಅತಿಥಿ ಉಪನ್ಯಾಸಕರನ್ನು ಬೀದಿಗೆ ತಳ್ಳಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ದಿ ಸಂಘದ ಖಜಾಂಚಿ ಮನೋಹರ್.ಎಸ್, ರಂಗಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)