
ತುಮಕೂರು: ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನದಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ಇವರ ವತಿಯಿಂದ ಗಾಜಿನ ಮನೆ, ತುಮಕೂರಿನಲ್ಲಿ ಡಿಸೆಂಬರ್ ೨೯ ಮತ್ತು ೩೦, ೨೦೨೫ ರಂದು ನಡೆಯಲಿರುವ, ತುಮಕೂರು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಪರ ಸಂಘಟನೆಗಳಿ0ದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ ಎಸ್ ಸಿದ್ದಲಿಂಗಪ್ಪ ನವರು ಮಾತನಾಡಿ ತುಮಕೂರು ಜಿಲ್ಲಾಡಳಿತದ ಸಹಯೋಗದಲ್ಲಿ ೨೦೨೫ರ ಡಿಸೆಂಬರ್ ೨೯ ಮತ್ತು ೩೦ರಂದು ೧೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ತುಮಕೂರು ನಗರದ ಗಾಜಿನ ಮನೆಯಲ್ಲಿ ಏರ್ಪಡಿಸಲಾಗಿದೆ, ಕಾರ್ಯಕ್ರಮವು ಜಿಲ್ಲೆಯ ನಾಗರಿಕರು ಮತ್ತು ಪರಿಷತ್ತಿನ ಅಜೀವ ಸದಸ್ಯರು ಹಾಗೂ ಕನ್ನಡಪರ ಸಂಘಟನೆಗಳ ಸಹಕಾರದಿಂದ ಏರ್ಪಡಿಸಲಾಗಿದೆ, ಈ ಸಮ್ಮೇಳನಕ್ಕೆ ಖ್ಯಾತ ಸಾಹಿತಿಗಳು ಸಂಶೋಧಕರು ವಿಮರ್ಶಕರು ಹಾಗೂ ಹಂಪಿ ವಿಶ್ವವಿ ದ್ಯಾನಿಲಯದ ನಿವೃತ್ತ ಕುಲ ಸಚಿವರು ಪ್ರಸ್ತುತ ಕರ್ನಾಟಕ ಸರ್ಕಾರದ ಗ್ರಂಥಾಲಯ ಇಲಾಖೆಯ ಅಧ್ಯಕ್ಷರು ಆಗಿರುವ ಕುಣಿಗಲ್ ತಾಲೂಕಿನ ಡಾ. ಕರಿಗೌಡ ಬಿಚ ನಹಳ್ಳಿ ಅವರನ್ನು ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಮಾಡ ಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯ ದರ್ಶಿಗಳಾದ ಡಾ. ಕೆ. ಸಣ್ಣ ಹೊನ್ನಯ್ಯ ನವರು ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನ ದಲ್ಲಿ ವಿವಿಧ ತಲಾತಂಡದೊ0ದಿಗೆ ನಡೆಯುವ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದ ಜೊತೆಗೆ ದಲಿತ ಬಂಡಾಯ ಸಾಹಿತ್ಯಗೋಷ್ಠಿ, ತುಮಕೂರು ಜಿಲ್ಲೆಯ ಧಾರ್ಮಿಕ ಪರಂಪರೆ ಕುರಿತು ಗೋಷ್ಠಿ ಮಕ್ಕಳ ಸಾಹಿತ್ಯ ಗೋಷ್ಠಿ, ಹಿರಿಯ ಮತ್ತು ಯುವಕವಿಗಳ ಕವಿಗೋಷ್ಠಿ, ನಾಡಗೀತೆಯ ೧೦೦ನೇ ವರ್ಷದ ವಿಶೇಷ ಉಪನ್ಯಾಸ ಸಾಧಕರಿಗೆ ಸನ್ಮಾನ ಮತ್ತು ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ತುಮಕೂರು ಜಿಲ್ಲಾಧ್ಯಕ್ಷರಾದ ಧನಿಯಾ ಕುಮಾರ್, ಕನ್ನಡಪರ ಸಂಘ ಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಎಸ್ ಶಂಕರ್, ವಿಜಯ ಸೇನೆ ಜಿಲ್ಲಾಧ್ಯಕ್ಷರಾದ ಅರುಣ್ ಕೃಷ್ಣಯ್ಯ, ಕದಂಬ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್, ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಹೊಸಕೋಟೆ ನಟರಾಜ್, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಹೋರಾಟಗಾರರಾದ ಶಾಂತರಾಜು, ಎಸ್ ರಾಮಚಂದ್ರರಾವ್, ಶಬ್ಬೀರ್ ಅಹ್ಮದ್, ಗುರು ರಾಘ ವೇಂದ್ರ, ವಿಠಲ್ ಜೆ. ಮಂಜುನಾಥ್, ಅಂಬರೀಶ್ ಕೆ, ಪವನ್ ಕುಮಾರ್ ಟಿ. ಎಲ್. ಇನ್ನು ಮುಂತಾದವರು ಉಪಸ್ಥಿತರಿದ್ದರು.





