
ಕುಣಿಗಲ್: ಪ್ರಾಣ ಹೋದರು ಸರಿಯೇ ಖಾಸಗಿ ಇಟ್ಟಿಗೆ ಕಾರ್ಖಾನೆಯಾದ ವಿನ್ನರ್ ಬರ್ಗರ್ ಗೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಕೆರೆಯಲ್ಲಿ ಮಣ್ಣನ್ನು ತೆಗೆಯಲು ಬಿಡುವುದಿಲ್ಲ ಎಂದು ಕಿತ್ನಮಂಗಲ ಕೆರೆಯ ಸುತ್ತಮುತ್ತಲ ನೂರಾರು ರೈತರು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಂಬೆ ಶಿವಣ್ಣನವರ ನೇತೃತ್ವದಲ್ಲಿ ಕೆರೆಯಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಶಿವಣ್ಣನವರು ಮಾತನಾಡಿ ಪ್ರತಿ ಸಭೆ ಸಮಾರಂಭಗಳಲ್ಲಿ ಶಾಸಕರು ರೈತರು, ರೈತರು ಎಂದು ಮಾತನಾಡುತ್ತಾರೆ ಆದರೆ ರೈತರ ಜೀವನಾಡಿಯಾಗಿರುವ ಕೆರೆಯ ಮಣ್ಣನ್ನು ಖಾಸಗಿ ವಿನ್ನರ್ ಬರ್ಗರ್ ಇಟ್ಟಿಗೆ ಫ್ಯಾಕ್ಟರಿಗೆ ಮಣ್ಣನ್ನು ಸಾಗಾಟ ಮಾಡುವ ವ್ಯಕ್ತಿಗೆ ಹಿನ್ನೆಲೆಯಾಗಿ ಸಹಕಾರ ನೀಡುವುದು ಎಷ್ಟು ಸರಿ? ಹೇಗಂದರೆ ಕೆರೆಯ ಮಣ್ಣನ್ನು ತುಂಬುವುದಕ್ಕೆ ತನ್ನದೇ ಆದಂತಹ ಕಾನೂನುಗಳಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡುತ್ತಾರೆ ಇವರ ಹೇಳಿಕೆ ರೈತರ ವಿರೋಧಿ ಹೇಳಿಕೆಯಾಗುವುದಿಲ್ಲವೇ? ಕೆರೆಯ ತುಂಬೆಲ್ಲ ಮರಳು ತುಂಬಿದೆ ಕೆಲವರು ಹಣದ ಆಸೆಯಿಂದ ಖಾಸಗಿ ಕಾರ್ಖಾನೆಗಳಿಗೆ, ವಾಣಿಜ್ಯ ವ್ಯವಹಾರಗಳಿಗೆ ಕೆರೆಯಲ್ಲಿ ಮನಸ್ಸು ಇಚ್ಚೆ ಮಣ್ಣು ತುಂಬಿದರೆ ಸುತ್ತಮುತ್ತಲ ಹಳ್ಳಿಗಳ ಕೊಳವೆ ಬಾವಿಗಳು, ಸಣ್ಣಪುಟ್ಟ ಕಟ್ಟೆಗಳ ನೀರು, ಬತ್ತಿ ಹೋಗಿ ರೈತರು ಜೀವನ ಸಾಗಿಸಲು ಪಟ್ಟಣದ ಕಡೆ ಮುಖ ಮಾಡಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಶಾಸಕರ ಬಗ್ಗೆ ನಮಗೆ ಅಪಾರವಾದ ಗೌರವವಿದೆ ಇಂತಹ ಸರ್ಕಾರ ಯಾರೇ ಶಾಸಕರಾದರು ಮುಂದೆ ಬರುವುದಿಲ್ಲ ಈಗಿನ ಶಾಸಕರಿಗೆ ಚಿನ್ನದಂತ ಅವಕಾಶ ಇದೆ ಅವರ ಸಂಬAಧಿಕರೇ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಮಂತ್ರಿಗಳಿದ್ದಾರೆ ಈ ಅವಧಿಯಲ್ಲಿ ರೈತರಿಗೆ ಬೇಕಾದಂತಹ ಅನುಕೂಲಗಳನ್ನು ಶಾಸಕರು ಮಾಡಬಹುದು ಆದರೆ ಕೇವಲ ಐದು ಕಿಲೋಮೀಟರ್ ಅಂತರದಲ್ಲಿ ಹರಿಯುವ ಹೇಮಾವತಿ ನೀರನ್ನು ಶಾಸಕರು ಕಸಬಾ ಹೋಬಳಿಯ ೩೮೦ ಎಕರೆ ಒಳಗೊಂಡಿರುವ ಕಿತ್ನಮಂಗಲಕೆರೆಗೆ ನೀರು ಹರಿಸಿ ಕೆರೆ ತುಂಬಿಸಿದ್ದರೆ ಹಿತ್ತಲಹಳ್ಳಿ,ಕಲ್ಲುಪಾಳ್ಯ, ಸಾಲುಪಾಳ್ಯ, ಗಂಟ್ಕನಹಳ್ಳಿ, ಗುಜ್ಜೆನಹಳ್ಳಿ ಅಯ್ಯನಕಟ್ಟೆ, ಹೊಸಕೆರೆ, ಕುರುವೇಗೌಡನಪಾಳ್ಯ, ಮುನಿಯನಪಾಳ್ಯ, ಗೊಲ್ಲರಹಟ್ಟಿ,ಕಾಡು ಮತ್ತಿಕೆರೆ ಒಳಗೊಂಡ0ತೆ ಸುಮಾರು ೪೦ ಹಳ್ಳಿಗಳಿಗೆ ತುಂಬಾ ಅನುಕೂಲವಾಗುತಿತ್ತು ರೈತರು ನೆಮ್ಮದಿಯಿಂದ ಕೃಷಿ ಮಾಡುತ್ತಿದ್ದರು ಮತ್ತು ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ ಆಗ ಶಾಸಕರನ್ನ ಈ ಭಾಗದ ರೈತರು ಕೊಂಡಾಡುತ್ತಿದ್ದರು ಎಷ್ಟೇ ಹಣ ಖರ್ಚಾಗಿದ್ದರು ಶಾಸಕರ ಪುತ್ತಳಿಯನ್ನು ಅನಾವರಣ ಮಾಡಿ ಶಾಸಕರಿಗೆ ಸನ್ಮಾನ ಮಾಡುತ್ತಿದ್ದೆ ಎಂದ ಅವರು ಕೆರೆಯಲ್ಲಿ ರೈತರು ಜಮೀನುಗಳಿಗೆ ಮಣ್ಣನ್ನು ತುಂಬಲು ಹೋದರೆ ಅಧಿಕಾರಿಗಳು ಬಂದು ರೈತರಿಗೆ ತೊಂದರೆ ಕೊಟ್ಟು ಆಪ್ತ ವಸೂಲಿ ಮಾಡುತ್ತಾರೆ ಎಂದು ದೂರಿದರು. ಮೊದಲಿಗೆ ಶಾಸಕರು ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲಿ ನಂತರ ಹೆಚ್ಚುವರಿ ನೀರನ್ನು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಲಿ ನಮ್ಮ ಅಭ್ಯಂತರವಿಲ್ಲ ಎಂದು ಮಾತನಾಡುತ್ತಾ ಎಷ್ಟೇ ಹೋರಾಟ ಆದರೂ ಸರಿಯೇ, ಪ್ರಾಣ ಹೋದರು ಸರಿಯೇ, ಯಾವುದೇ ಕಾರಣಕ್ಕೂ ಕಿತ್ನಾಮಂಗಲ ಕೆರೆಯಲ್ಲಿ ಒಂದು ಹಿಡಿ ಮಣ್ಣನ್ನು ತುಂಬಲು ರೈತರು ಬಿಡುವುದಿಲ್ಲ ಕೆರೆ ಇರುವುದು ರೈತರಿಗೋಸ್ಕರ ಹಣ ಮಾಡುವವರಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಸುತ್ತಮುತ್ತಲ ರೈತರ ಜಮೀನುಗಳಿಗೆ ಕೆರೆಯ ಮಣ್ಣನ್ನು ತುಂಬಲು ಹೊರತುಪಡಿಸಿ ಯಾರೇ ಆದರೂ ಸರಿಯೇ ವಾಣಿಜ್ಯ ವ್ಯವಹಾರಗಳಿಗೆ ಕೆರೆಯ ಮಣ್ಣನ್ನು ತುಂಬಲು ಅವಕಾಶ ನೀಡುವುದಿಲ್ಲ ಈಗಾಗಲೇ ಸಂಬ0ಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಈ ಸಂಬAಧ ಅರ್ಜಿ ನೀಡಿದ್ದೇವೆ ಎಂದರು.
ಮಾಜಿ ತಾಲೂಕು ಪಂಚಾಯತಿ ಸದಸ್ಯ ಕುಮಾರ್ ಮಾತನಾಡಿ ಭಾನುವಾರ ಬೇಗೂರು ನಾರಾಯಣ್ ಕೆರೆಯಲ್ಲಿ ಮಣ್ಣನು ತುಂಬಲು ಸರ್ಕಾರಕ್ಕೆ ಹಣ ಕಟ್ಟಿ ಸರ್ಕಾರದಿಂದ ಆದೇಶ ತಂದಿದ್ದೇವೆ ಎಂದು ಕೆರೆಯ ಬಳಿ ಬಂದಿದ್ದರು ಅವರನ್ನು ತಡೆದು ವಾಪಸ್ ಕಳುಹಿಸಿದ್ದೇವೆ ಇನ್ನು ಕೆರೆಯಲ್ಲಿ ಮಣ್ಣು ತುಂಬುವ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶಾಸಕರು ನೀಡಿರುವ ಹೇಳಿಕೆ ” ಅಡ್ಡಗೋಡೆ ಮೇಲೆ ದೀಪ ಇಟ್ಟಂಗಿದೆ” ಇದು ರೈತರ ವಿರೋಧಿ ಹೇಳಿಕೆ ಅಲ್ಲವೇ, ಪ್ರಾಣ ಹೋದರು ವಾಣಿಜ್ಯ ವಹಿವಾಟುಗಳಿಗೆ ಕೆರೆಯಲ್ಲಿ ಮಣ್ಣು ತುಂಬಿಸಲು ಬಿಡುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯ ಬ್ರಹ್ಮ ಕುಮಾರ್, ಮುಖಂಡರಾದ ರಾಮಚಂದ್ರಯ್ಯ, ಶಿವಲಿಂಗಯ್ಯ, ರಂಗಯ್ಯ, ಜಗದೀಶ್, ಒಳಗೊಂಡ0ತೆ ರೈತರು ಉಪಸ್ಥಿತರಿದ್ದರು.





