ತುಮಕೂರು: ಗ್ರಾಮಾಂತರ ಕ್ಷೇತ್ರದ ಸ್ವಾಂದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲ್ಲಾಪುರದಲ್ಲಿ ಭಾನು ವಾರ ಶಾಸಕ ಬಿ.ಸುರೇಶ್‌ಗೌಡರು ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಶಾಲೆಗಾಗಿ ಟೂಡಾದಿಂದ ಮಂಜೂರಾಗಿರುವ ಅರ್ಧ ಎಕರೆ ಜಾಗದಲ್ಲಿ ಕಟ್ಟಡ ಕಟ್ಟಲು ಇನ್‌ಕ್ಯಾಪ್ ಕಂಪನಿಯವರು ಒಂದು ಕೋಟಿ ರೂ. ಸಿಎಸ್‌ಆರ್ ಅನುದಾನ ನೀಡಿದ್ದಾರೆ, ಜೊತೆಗೆ ತಮ್ಮ ಶಾಸಕರ ಅನುದಾನದ ೫೦ ಲಕ್ಷ ಸೇರಿಸಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.
ಈ ಶಾಲೆಯನ್ನು ಕೆಪಿಎಸ್ ಶಾಲೆಯಾಗಿ ಪರಿವರ್ತಿಸಲು ಹಾಗೂ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ ಅವರು, ಮೇ ತಿಂಗಳಲ್ಲಿ ಕಟ್ಟಡ ಪೂರ್ಣಗೊಳಿಸಲಾಗುವುದು ಎಂದರು.
ಈ ವೇಳೆ ಗ್ರಂಥಾಲಯ ಉದ್ಧಾಟನೆ ಮಾಡಿದ ಶಾಸಕರು, ಉತ್ತಮವಾದ ಗ್ರಂಥಾಲಯವಿದೆ, ಗ್ರಂಥಾಲಯಕ್ಕೆ ತಾವು ಶಾಸಕರ ಅನುದಾನದಲ್ಲಿ ೩ ಲಕ್ಷ ರೂ. ಗಳ ಪುಸ್ತಕ ಕೊಡಿ ಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಶಾಸಕರು ಮನೆಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ಜಲಜೀವನ್ ಯೋಜನೆ ಕಾಮಗಾರಿಗೆ ಚಾಲನೆ ನೀಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಹಾಲಕ್ಷಿö್ಮ ಸೋಮ ಶೇಖರ್, ಉಪಾಧ್ಯಕ್ಷ ಲೋಕೇಶ್, ಮಾಜಿ ಅಧ್ಯಕ್ಷರಾದ ಸಿದ್ಧರಾಜು, ರಮೇಶ್, ಡಿಡಿಪಿಐ ರಘುಚಂದ್ರ, ಬಿಇಓ ಹನುಮಂತರಾಯಪ್ಪ, ಮುಖ್ಯ ಶಿಕ್ಷಕಿ ಜಯಲಕ್ಷö್ಮಮ್ಮ, ಗ್ರಾಮ ಪಂಚಾಯ್ತಿ ಸದಸ್ಯರಾದ ಯೋಗೀಶ್, ಗಿರೀಶ್, ಈರಣ್ಣ, ನಂಜು0ಡಪ್ಪ, ಮುಖಂಡರಾದ ಮಲ್ಲೇಶ್, ನಾಗರಾಜು, ಸೋಮಶೇಖರ್ ಯೋಗೀಶ್, ದೊಡ್ಡಯ್ಯ ಮೊದಲಾದವರು ಭಾಗವಹಿಸಿದ್ದರು.

(Visited 1 times, 1 visits today)