
ತುಮಕೂರು: ರಾಜ್ಯ ರ‍್ಕಾರದ ಸೂಚನೆಯಂತೆ ನಗರದ ಎಲ್ಲಾ ವಾಣಿಜ್ಯ ಮಳಿಗೆಗಳು, ಕರ‍್ಖಾನೆಗಳ ನಾಮಫಲಕಗಳಲ್ಲಿ ಶೇಕಡ ೬೦ರಷ್ಟು ಕನ್ನಡ ಅಕ್ಷರ ಕಡ್ಡಾಯವಾಗಿ ಬಳಸುವ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿಬೇಕು, ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಕನ್ನಡ ರಕ್ಷಣೆ ಮಾಡಬೇಕು ಎಂದು ಜಿಲ್ಲಾ ಕನ್ನಡ ಸೇನೆ ಮುಖಂಡರು ಸೋಮವಾರ ನಗರಪಾಲಿಕೆ ಆಯುಕ್ತೆ ಶುಭಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಅವರೊಂದಿಗೆ ಕನ್ನಡಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್ ಹಾಗೂ ಮುಖಂಡರು ಈ ಸಂಬಂಧ ಪಾಲಿಕೆ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿ, ಇನ್ನು ೧೫ ದಿನಗಳೊಳಗೆ ನಾಮಫಲಕಗಳಲ್ಲಿ ಶೇಕಡ ೬೦ರಷ್ಟು ಕನ್ನಡ ಪದಗಳ ಬಳಕೆ ಮಾಡಲು ಕ್ರಮ ತೆಗೆದುಕೊಳ್ಳದಿದ್ದರೆ ವಿವಿಧ ಸಂಘಟನೆಗಳೊಂದಿಗೆ ಪಾಲಿಕೆ ಎದುರು ತಮಟೆ ಚಳವಳಿ ನಡೆಸಿ ಹೋರಾಟ ಮಾಡುವುದಾಗಿ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮನೆ ಅವರು ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಸಂರ‍್ಭದಲ್ಲಿ ಕನ್ನಡ ಕರ‍್ಯಕ್ರಮಗಳನ್ನು ಕಡ್ಡಾಯವಾಗಿ ಜಾರಿ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಕನ್ನಡ ನಾಮಫಲಕ ಇಲ್ಲದ ಮಳಿಗೆಗಳಿಗೆ ದಂಡ ವಿಧಿಸಿ, ಪರವಾನಗಿ ನವೀಕರಣ ಮಾಡಬೇಡಿ ಎಂದು ಹೇಳಿದ್ದರು. ಕಳೆದ ಕನ್ನಡ ರಾಜ್ಯೋತ್ಸವ ಸಂರ‍್ಭದಲ್ಲಿ ಜಿಲ್ಲಾಧಿಕಾರಿಗಳು ಕರೆದಿದ್ದ ಕನ್ನಡ ಸಂಘಟನೆಗಳ ಸಭೆಯಲ್ಲೂ ಈ ವಿಚಾರವನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ಆದರೂ ಯಾವುದೇ ಕ್ರಮ ಆಗಿಲ್ಲ ಎಂದು ಡಾ.ಧನಿಯಾಕುಮಾರ್ ಹೇಳಿದರು.
ನಗರದ ಬಹುತೇಕ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡದೆ ನಾಡ ಭಾಷೆ, ರ‍್ಕಾರದ ಆದೇಶವನ್ನು ನರ‍್ಲಕ್ಷಿಸಲಾಗಿದೆ. ಪಾಲಿಕೆ ಅಧಿಕಾರಿಗಳು ತಪಾಸಣೆ ಮಾಡಿ, ನಿಯಮ ಉಲ್ಲಂಘನೆ ಮಾಡಿರುವ ಮಳಿಗೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮಾತೃಭಾಷೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಆಯುಕ್ತೆ ಶುಭಾ ಅವರು, ಗಡಿಭಾಗ ಬೆಳಗಾವಿಯಲ್ಲಿ ತಾವು ಆಯುಕ್ತರಾಗಿದ್ದಾಗ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವನ್ನು ಪರಿಣಾಮ ಕಾರಿಯಾಗಿ ಅನುಷ್ಟಾನಗೊಳಿಸಿದ್ದೆ, ತುಮಕೂರಿನಲ್ಲೂ ಆ ಕೆಲಸ ಮಾಡುವುದಾಗಿ ಹೇಳಿದ ಅವರು, ಶೀಘ್ರದಲ್ಲಿ ಅಧಿಕಾರಿಗಳು ಹಾಗೂ ಕನ್ನಡ ಸಂಘಟ ನೆಗಳ ಪ್ರಮುಖರ ಸಭೆ ಕರೆದು ಕನ್ನಡ ಪಾಲನೆ ನಿಯಮ ಉಲ್ಲಂಘನೆ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಕನ್ನಡ ಸೇನೆ ಜಿಲ್ಲಾ ಗೌರವಾಧ್ಯಕ್ಷ ಆರ್.ಎನ್.ವೆಂಕಟಾಚಲ, ಮುಖಂಡರಾದ ರಾಮಚಂದ್ರ ರಾವ್, ಶಬ್ಬೀರ್ ಅಹ್ಮದ್, ನಟರಾಜಶೆಟ್ಟಿ, ಬೆಸ್ಟೆಕ್ಸ್ ರಾಮರಾಜು, ಅರುಣ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.



