ಗುಬ್ಬಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನುಷ್ಯ ಬುದ್ಧಿವಂತನಾಗುತ್ತಿದ್ದಾನೆ, ಆದರೆ ಮಾನವೀ ಯತೆಯನ್ನು ಮರೆಯುತ್ತಿದ್ದಾನೆ ಎಂದು ಉಪನಿರ್ದೇಶಕ ರಘುಚಂದ್ರ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ), ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ), ಗುಬ್ಬಿ ತಾಲ್ಲೂಕು ಘಟಕ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಸಾವಿತ್ರಿಬಾಯಿ ಪುಲೆಯವರ ೧೯೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಸಾವಿತ್ರಿಬಾಯಿರವರು ಮಹಿಳೆಯರು ಸ್ವಾವಲಂಬಿಗಳಾಗಬೇಕೆ0ದು ಬಯಸಿದ್ದರು. ಇಂದು ಮಹಿಳೆಯರು ಶಿಕ್ಷಣ ಪಡೆದು ಸಮಾಜದ ವಿವಿಧ ಉನ್ನತ ಹುದ್ದೆಗಳಲ್ಲಿದ್ದೇವೆಯೆಂದರೆ ಅದಕ್ಕೆ ಅಂದು ಸಾವಿತ್ರಿಬಾಯಿಯವರು ಹಾಕಿಕೊಟ್ಟ ಭದ್ರಬುನಾದಿಯೇ ಕಾರಣ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂಎಸ್ ನಟರಾಜು ಮಾತನಾಡಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಗುಣಮಟ್ಟದ ಶಿಕ್ಷಣ ನೀಡುವುದರಿಂದ ಸರ್ಕಾರಿ ಶಾಲೆಯಲ್ಲಿ ಹೆಚ್ಚು ದಾಖಲಾತಿಯನ್ನು ಕಾಣಬಹುದು.  ಪೋಷಕರು ಸರ್ಕಾರಿ ಶಾಲೆಯ ಕಡೆಮುಖ ಮಾಡುವಂತೆ ಶಿಕ್ಷಕರು ಶ್ರಮವಹಿಸಿ ಪಾಠ ಮಾಡಬೇಕು ಎಂದರು.

ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಮಚಂದ್ರ, ನಿರ್ದೇಶಕರಾದ ಚನ್ನಬಸವರಾದ್ಯ,  ಚನ್ನಬಸವಯ್ಯ,ಪದ್ಮಾವತಿ,  ಗಂಗಾಧರ್, ಪ್ರಾಥಮಿಕ ಶಿಕ್ಷಕರ ಸಂಘದ ಅದ್ಯಕ್ಷ ಮಂಜುನಾಥ್, ಖಜಾಂಚಿ ಲಕ್ಷೀಪತಿ,  ಗೌರಾದ್ಯಕ್ಷ ರಾಮಕೃಷ್ಣಪ್ಪ,  ಮಾಜಿ ಅದ್ಯಕ್ಷ ಎನ್ ಟಿ ಪ್ರಕಾಶ್, ನರಸಿಂಹಮೂರ್ತಿಗಳಿಗೆ ಸನ್ಮಾನ ಮಾಡಲಾಯಿತು ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಸಂಘದ ಅಧ್ಯಕ್ಷೆ ಲಕ್ಷ್ಮೀ,  ಕಾರ್ಯದರ್ಶಿ ಜ.ಎಸ್. ಮಂಜುಳಾ, ಸಿಂದು, ಲತಾಮಣಿ, ಸರೋಜ, ನರಸಮ್ಮ, ತಿಮ್ಮಮ, ಲತಾ,  ದೀಪ,  ಜಯಮ್ಮ,  ಗೌರಮ್ಮ ,  ಶಿಕ್ಷಕಿಯರಾದ ಶಿವರತ್ನ, ಕೋಮ ಲಾಂಗನ, ವೀಣಾ,   ಉಪಾಧ್ಯಾಯರ ಸಹಕಾರ ಸಂಘದ  ನೂತನ ಅದ್ಯಕ್ಷ ಮಲ್ಲೇಶ್, ಉಪಾದ್ಯಕ್ಷ ಭದ್ರೇಶ್,  ಸುಬ್ರಹ್ಮಣ್ಯ, ರೇಣುಕಮ್ಮ ಇತರರು ಇದ್ದರು.

(Visited 1 times, 1 visits today)