ಚಿಕ್ಕನಾಯಕನಹಳ್ಳಿ: ಚಂಚಲ ಮನಸ್ಸಿನ ಭಾವನೆಗೆ ಕಡಿವಾಣ ಹಾಕುವ ಮೂಲಕ ನೀವು ಅದ್ಯಯನ ಮಾಡಿದರೆ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಅದ್ದರಿಂದ ನಿಮ್ಮ ಜೀವನದ ಮುಖ್ಯಘಟ್ಟವಾದ ಈ ಪಿಯುಸಿಯ ಹಂತದಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಸರ್ಕಾರದ ಉಚಿತ ಸೀಟ್ಗಳನ್ನು ಪಡೆದು ನಿಮ್ಮ ತಂದೆ ತಾಯಿಗಳ ಹೊರೆಯನ್ನು ಕಡಿಮೆ ಮಾಡಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಎಸ್.ಬಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಸಿಇಟಿ, ನೀಟ್, ಹಾಗೂ ಜೆಇಇ ತರಬೇತಿ ಅಂತಿಮ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ವರ್ಷದಲ್ಲಿ ೩೭೬ ವಿದ್ಯಾರ್ಥಿಗಳು ಈ ಉಚಿತ ತರಬೇತಿಯಲ್ಲಿ ತರಬೇತಿ ಪಡೆದು ೯೬ ವಿದ್ಯಾರ್ಥಿ ಗಳು ಸರ್ಕಾರದ ವಿವಿಧ ಕೊರ್ಸ್ ಗಳ ಉಚಿತವಾಗಿ ಸೀಟ್ಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿ ಅವರ ಪೋಷಕರ ಹೊರೆಯನ್ನು ತಗ್ಗಿಸಿದ್ದಾರೆ ಅದ ರಂತೆ ಈ ವರ್ಷ ಕಳೆದ ೨೭ ವಾರಗಳಿಂದ ಪ್ರಥಮ ಪಿಯುಸಿಯವರಿಗೆ ವಿಶೇಷವಾಗಿ ತರಬೇತಿ ನೀಡುವ ಮೂಲಕ ಮುಂದಿನ ವರ್ಷ ದ್ವಿತಿಯ ಪಿಯುಸಿಯಲ್ಲಿ ಸಿಇಟಿ, ನೀಟ್, ಹಾಗೂ ಜೆ.ಇ.ಇ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಅನುಕೂಲವಾಗಲಿ ಎಂಬ ದೃಷ್ಠಿಯಿಂದ ತಾಲ್ಲೂಕಿನ ಎಲ್ಲಾ ಕಾಲೇಜುಗಳಿಂದ ಸುಮಾರು ೭೫ ಜನ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿದೆ ಇದನ್ನು ಮಕ್ಕಳು ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಿ ಉತ್ತಮವಾದ ಕೆಲಸಗಳಿಗೆ ಸೇರಿ ಈ ತಾಲ್ಲೂಕಿನ ಸೇವೆ ಮಾಡಿರಿ ಎಂದರು.
ಉಚಿತ ಸಿ.ಇ.ಟಿ ತರಬೇತಿ ಸಮಿತಿಯ ಅಧ್ಯಕ್ಷ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಮಾತನಾಡಿ, ಇದೇ ತರಬೇತಿಗಳು ನಗರ ಪ್ರದೇಶದಲ್ಲಿ ಎರಡರಿಂದ ಮೂರು ಲಕ್ಷದವರೆಗೆ ಖರ್ಚಾಗುತ್ತವೆ. ಆದರೆ ನಮ್ಮ ಶಾಸಕರು ತರಬೇತಿಯೊಂದಿಗೆ ಎಲ್ಲಾ ಅದ್ಯಯನ ಸಲಕರಣೆಗಳನ್ನು ನೀಡುವ ಮೂಲಕ ಈ ತರಬೇತಿಯನ್ನು ನುರಿತ ಉಪನ್ಯಾಸರುಗಳಿಂದ ನೀಡಿಸಿದ್ದಾರೆ. ನೀವು ಉತ್ತಮ ಅಂಕಗಳನ್ನುಗಳಿಸುವ ಮೂಲಕ ಸರ್ಕಾರಿ ಸೀಟ್ಗಳನ್ನು ಪಡೆಯುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಯು.ಡ.ಬ್ಲೂ.ಜೆ ರಾಜ್ಯ ಪ್ರತಿನಿಧಿ ಚಿ.ನಿ.ಪುರುಷೋತ್ತಮ್, ಬಿ.ಇ.ಒ ಕಾಂತರಾಜು, ಮಾಜಿ ಪುರಸಭಾದ್ಯಕ್ಷ ಎಂ.ಎನ್.ಸುರೇಶ್, ತಾಲ್ಲೂಕು ಮಡಿವಾಳ ಸಮಾಜ ಅದ್ಯಕ್ಷ ನಾಗರಾಜು, ತಾಲ್ಲೂಕು ಸವಿತಾ ಸಮಾಜದ ಅದ್ಯಕ್ಷ ಶಿವಣ್ಣ, ಉಪನ್ಯಾಸಕ ಕೃಷ್ಣ, ಸೇರಿದಂತೆ ಮುಖಂಡರುಗಳಾದ ಜಾಕೀರ್, ಸಾಕ್ಯ ಗೌತಮ್, ಸುನೀಲ್ ಮತ್ತಿತರರು ಇದ್ದರು.

(Visited 1 times, 1 visits today)