BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ
  • ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ
  • ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ
  • ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ
  • ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ
  • ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್
  • ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ
  • ನಾಡಕಚೇರಿಗಳಲ್ಲಿ ಕಂದಾಯ ವಿಷಯ ಕುರಿತ ಅರ್ಜಿಗಳ ಪರಿಹಾರಕ್ಕೆ ವಿಶೇಷ ಕ್ರಮ: ಡಿಸಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವೈದ್ಯರ ರಕ್ಷಣೆಗೆ ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆ ವಹಿಸಿ
ತುಮಕೂರು ಜಿಲ್ಲಾ ಸುದ್ಧಿಗಳು

ವೈದ್ಯರ ರಕ್ಷಣೆಗೆ ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆ ವಹಿಸಿ

ಯುವ ಉತ್ಸಾಹಿ ಪಶುವೈದ್ಯ ಡಾ.ಸುಮೀಕ್ಷಾ ರೆಡ್ಡಿ ಸಾವು
By News Desk BenkiyabaleUpdated:March 24, 2026 4:58 pm

ತುಮಕೂರು: ಯುವ ಉತ್ಸಾಹಿ ಪಶುವೈದ್ಯ ಡಾ.ಸುಮೀಕ್ಷಾ ರೆಡ್ಡಿ ಅವರು ಸಾವು, ಪಶುವೈದ್ಯರಿಗೆ ಒಂದು ಪಾಠವಾಗಿದ್ದು,ಸರಕಾರ ಮತ್ತು ಅರಣ್ಯ ಇಲಾಖೆ ಇನ್ನೂ ಮುಂದಾದರೂ ವನ್ಯಜೀವಿಗಳ ಚಿಕಿತ್ಸೆಗೆ ನಿಯೋಜನೆಯಾಗುವ ವೈದ್ಯರ ರಕ್ಷಣೆಗೆ ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಿ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಹೆಚ್.ಎಂ.ಶಿವಪ್ರಸಾದ್ ಒತ್ತಾಯಿಸಿದ್ದಾರೆ.
ನಗರದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ತರಬೇತಿ ಸಭಾಂಗಣದಲ್ಲಿ ಇತ್ತೀಚಗೆ ಶಿವಮೊಗ್ಗದ ತಾವರೆಕೊಪ್ಪದ ಲಯನ್ ಸಫಾರಿ ವನ್ಯಧಾಮದಲ್ಲಿ ಚಿಕಿತ್ಸೆ ನೀಡುವ ವೇಳೆ ನೀರಾನೆ(ಹಿಪ್ಪೋಪೊಟೋಮಸ್)ದಾಳಿಗೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸಿ, ಸಾವಿಗೀಡಾದ ತರಬೇತಿ ವೈದ್ಯೆ ಡಾ.ಸುಮೀಕ್ಷಾ ರೆಡ್ಡಿ ಅವರ ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡು, ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತಿದ್ದ ಅವರು, ಸರಕಾರ ಹಾಗೂ ಅರಣ್ಯ ಇಲಾಖೆಯ ಮೇಲೆ ವನ್ಯ ಜೀವಿ ಚಿಕಿತ್ಸೆಗೆ ನಿಯೋಜನೆಗೊಳ್ಳುವ ಪಶುವೈದ್ಯರ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಡ ತರುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಪಶುವೈದ್ಯರು, ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುವ ಅಗತ್ಯವಿದೆ.ನಿಮ್ಮೊಂದಿಗೆ ನಾವು ಸಹ ಆಗಮಿಸಲಿದ್ದೇವೆ ಎಂದರು.
ರಾತ್ರಿಯ ವೇಳೆ ವನ್ಯ ಜೀವ ಚಿಕಿತ್ಸೆಗೆ ನಿಯಮದಲ್ಲಿ ಅವಕಾಶವೇ ಇಲ್ಲ. ಒಂದು ವೇಳೆ ತುರ್ತು ಅಗತ್ಯ ಕಂಡುಬAದರೆ ಹಿರಿಯ ಆರ್.ಎಫ್.ಓ ಮತ್ತು ನುರಿತ ಡಾಕ್ಟರ್‌ಗಳ ಸಮ್ಮುಖದಲ್ಲಿ ಎಲ್ಲಾ ಅಗತ್ಯ ಮುಜಾಂಗ್ರತಾ ಕ್ರಮಗಳನ್ನು ಕೈಗೊಂಡು ಚಿಕಿತ್ಸೆ ಮಾಡಬೇಕಾಗುತ್ತದೆ.ಆದರೆ ಟ್ರೆöÊನಿ ಪಶು ವೈದ್ಯರನ್ನು ಅಂತಹ ಕ್ರೂರ ಮೃಗದ ಚಿಕಿತ್ಸೆಗೆ ಕಳುಹಿಸಿದವರು ಯಾರು,ಈ ವೇಳೆ ಎಸ್.ಓ.ಪಿ ಅನುಸರಿಸಿಲ್ಲವೇ ಎಂಬ ಇತ್ಯಾದಿ ಪ್ರಶ್ನೆಗಳು ಉದ್ಬವಿಸುತ್ತೇವೆ.ಈ ಬಗ್ಗೆ ಇರುವ ಗೊಂದಲ ಬಗೆಹರಿಸಿಕೊಳ್ಳಲು ಸಿಸಿಟಿವಿ ಪೂಟೇಜ್ ಸಹ ಲಭ್ಯವಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ನ್ಯಾಯಯುತ ತನಿಖೆ ನಡೆಯುವುದೇ ಅನುಮಾನ ಎಂದು ಹಲವರು ಮಾತನಾಡುತಿದ್ದಾರೆ.ಸರಕಾರ ಇನ್ನೂ ಮುಂದಾದರೂ ಅಗತ್ಯ ಕ್ರಮ ಕೈಗೊಂಡು, ಪಶುವೈದ್ಯರ ಜೀವ ಉಳಿಸಲು ಮುಂದಾಗಲಿ.ನಮ್ಮಲ್ಲಿಯೂ ಕೆಲವೊಮ್ಮೆ ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬಂದಾಗ,ಜಾತ್ರೆ, ಉತ್ಸವಗಳಲ್ಲಿ ಆನೆಗಳ ಬಳಕೆ ಮಾಡುವ ಸಂದರ್ಭದಲ್ಲಿ ಪಶುವೈದ್ಯರನ್ನು ಕಳುಹಿಸಿಕೊಡಲು ಬೇಡಿಕೆ ಬರುತ್ತದೆ.ಆದರೆ ನಮ್ಮಲ್ಲಿ ವನ್ಯಜೀವಿ ತರಬೇತಿ ಪಡೆದ ವೈದ್ಯರಿಲ್ಲದ ಕಾರಣ, ಮನವಿಯನ್ನು ತಿರಸ್ಕರಿಸಲಾಗುತ್ತದೆ ಎಂದು ಡಾ.ಹೆಚ್.ಎಂ.ಶಿವಪ್ರಸಾದ್ ನುಡಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರುದ್ರಪ್ರಸಾದ್, ಯುವ ಉತ್ಸಾಹಿ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಸಾವು ನಿಜಕ್ಕೂ ದುಖಃದ ವಿಚಾರ.ವನ್ಯಜೀವಿಗಳ ಸೇವೆಯನ್ನು ಫ್ಯಾಷನ್ ಎಂಬ0ತೆ ತೆಗೆದುಕೊಂಡು ತರಬೇತಿಗಾಗಿ ಶಿವಮೊಗ್ಗ ಜಿಲ್ಲೆಯ ತಾವರೆಕೆರೆ ವನ್ಯಜೀವಿ ಧಾಮಕ್ಕೆ ಕಳೆದ ಒಂದುವರೆಗೆ ತಿಂಗಳ ಹಿಂದೆ ಬಂದಿದ್ದ ಇವರ ಸಾವು ಪಶು ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವವರಿಗೆ ನಿಜಕ್ಕೂ ಆಘಾತವನ್ನು ಉಂಟು ಮಾಡಿದೆ.ತಂದೆ, ತಾಯಿಗೆ ಒಬ್ಬಳೇ ಮಗಳಾಗಿ,ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ವನ್ಯಜೀವಿಗಳ ಸೇವೆಗೆ ತನ್ನ ಬದುಕನ್ನು ಮೀಸಲಿಡಬೇಕು ಎಂದುಕೊ0ಡಿದ್ದ ಯುವ ಪ್ರತಿಭೆಯ ಸಾವು ಉತ್ತರ ಸಿಗದ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದರು.
ಅರಣ್ಯ ಇಲಾಖೆಗಾಗಲಿ,ಪ್ರಾಣಿ ಸಂಗ್ರಹಾಲಯಗಳಿಗೆ ತನ್ನದೇ ಆದ ಸ್ವಂತ ಸಿಬ್ಬಂದಿ ಇಲ್ಲ.ಪಶು ವೈದ್ಯಕೀಯ ಇಲಾಖೆಯಿಂದಲೇ ಎರವಲು ಪಡೆಯುತ್ತಾರೆ.ವನ್ಯಜೀವಿಗಳ ಸೇವೆಗೆ ಹೋಗಲು ಹಿಂದು ಮುಂದು ನೋಡುವ ಈ ಕಾಲದಲ್ಲಿ ಡಾ.ಸಮೀಕ್ಷಾ ರೆಡ್ಡಿ ಕಾಡು ಪ್ರಾಣಿಗಳ ಸೇವೆಗೆ ಮುಂದಾಗಿದ್ದರು.ಆವರ ರಕ್ಷಣೆಗೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು.ಇಂತಹ ಘಟನೆ ಇದೆ ಮೊದಲಲ್ಲ. ಎರಡು ವರ್ಷದ ಹಿಂದೆ ವಿನಯ್ ಎಂಬ ಪಶುವೈದ್ಯರು ಆನೆ ದಾಳಿಗೆ ತುತ್ತಾಗಿ, ಜೀವನ್ಮರಣ ಹೋರಾಟ ನಡೆಸಿ, ಪ್ರಾಣ ಉಳಿಸಿಕೊಂಡಿದ್ದರು. ಸರಕಾರದ ನಿರ್ಲಕ್ಷಕ್ಕೆ ಇನ್ನೆಷ್ಟು ಪಶುವೈದ್ಯರು ಬಲಿಯಾಗಬೇಕು ?, ಯಾವ ನಂಬಿಕೆಯ ಮೇಲೆ ಪಶುವೈದ್ಯರು ಪ್ರಾಣಿ ಸಂಗ್ರಹಾಲಯಗಳಲ್ಲಿ ಕೆಲಸ ಮಾಡಲು ಹೋಗಬೇಕು, ಡಾ.ಸಮೀಕ್ಷಾ ರೆಡ್ಡಿ ಅವರ ಸಾವಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮೆಲ್ಲರ ಆಗ್ರಹವಾಗಿದೆ ಎಂದು ಡಾ.ರುದ್ರಪ್ರಸಾದ್ ನುಡಿದರು.
ಪಶುವೈದ್ಯೆ ಡಾ.ಜಯಂತಿ ಮಾತನಾಡಿ,ಯುವ ಉತ್ಸಾಹಿ ಪಶುವೈದ್ಯೆಯೊಬ್ಬರ ಜೀವ,ಅವರ ಅತಿ ಉತ್ಸಾಹಕ್ಕೆ ಬಲಿಯಾಗಿದೆ. ಎಸ್.ಓ.ಪಿ ಇಲ್ಲದೆ ವನ್ಯ ಜೀವಿಗಳ ಚಿಕಿತ್ಸೆ ಅಸಾಧ್ಯ. ಎಷ್ಟೋ ಸಂದರ್ಭಗಳಲ್ಲಿ ಸಾಕು ಪ್ರಾಣಿಗಳೇ ನಿರೀಕ್ಷೆಗೂ ವ್ಯತಿರಕ್ತವಾಗಿ ವರ್ತಿಸಿರುವ ಉದಾಹರಣೆಗಳಿವೆ.ಹಾಗಾಗಿ ವೈದ್ಯರು ಪ್ರಾಣಿಗಳ ಚಿಕಿತ್ಸೆಗೆ ಮುಂದಾಗುವ ವೇಳೆ ಎಷ್ಟೋ ಅನುಭವ ಇದ್ದರೂ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಮೈ ಎಲ್ಲಾ ಕಣ್ಣಾಗಿರಬೇಕು. ಅನ್ಯಮಸ್ಕರಾಗಿ ಪ್ರಾಣಿಗಳ ಚಿಕಿತ್ಸೆಯಲ್ಲಿ ತೊಡಗಬಾರದು.ಇನ್ನೂ ಮುಂದಾದರೂ ಸರಕಾರ ಈ ರೀತಿಯ ಘಟನೆಗಳು ಮರುಕಳುಹಿಸದಂತೆ ಎಚ್ಚರಿಕೆ ವಹಿಸಬೇಕೆಂದರು.
ಕಾರ್ಯಕ್ರಮವನ್ನು ಡಾ.ಶ್ರೀನಿವಾಸ್ ಕುಜ ನಿರೂಪಿಸಿದರು.ವೇದಿಕೆಯಲ್ಲಿ ಪಶುವೈದ್ಯಕೀಯ ತರಬೇತಿ ಶಾಲೆ ಪ್ರಾಂಶುಪಾಲರಾದ ಡಾ.ದಿವಾಕರ್, ಡಾ.ಮಂಜುನಾಥ್ ಹಾಗೂ ಪಶುವೈದ್ಯರು ಉಪಸ್ಥಿತರಿದ್ದರು.

(Visited 1 times, 1 visits today)
Previous Articleಸ್ತನ ಕ್ಯಾನ್ಸರ್: ಆತಂಕ ಬೇಡ ಎಚ್ಚರವಿರಲಿ
Next Article ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ
News Desk Benkiyabale

Related Posts

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm news
ತಾಜಾ ಸುದ್ಧಿಗಳು
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm
news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm
news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm
news

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
news

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
news

ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್

September 30, 2026 6:04 pm
Our Youtube Channel
Our Picks

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

By News Desk BenkiyabaleOctober 01, 2026 5:34 pm

ತುಮಕೂರು: ಪ್ರವಾದಿ ಮುಹಮ್ಮದ್(ಸ) ರವರ ಜೀವನ ಮತ್ತು ಸಂದೇಶಗಳನ್ನು ಯುವಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಜಮಾಆತೆ ಇಸ್ಲಾಮಿಕ್ ಹಿಂದ್ ಆಯೋಜಿಸಿರುವ…

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.