
ಕೊರಟಗೆರೆ: ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ, ಗ್ಯಾರಂಟಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಸ್ಥಾನ ನೀಡಿದ ಕೊರಟಗೆರೆ ಕ್ಷೇತ್ರದ ಮತದಾರರ ಋಣ ನನ್ನ ಮೇಲಿದೆ. ೨೦೨೮ಕ್ಕೇ ಮತ್ತೇ ನಮ್ಮ ಸರಕಾರ ಬರುತ್ತೇ ಕೊರಟಗೆರೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ದಿ ಮಾಡ್ತೇನೆ. ನನ್ನ ಆರೋಗ್ಯಕ್ಕಿಂತ ನಿಮ್ಮಅಭಿಮಾನವೇ ದೊಡ್ಡದುಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.
ಕೊರಟಗೆರೆ ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬ್ಲಾಕ್ ಕಾಂಗ್ರೇಸ್, ಮಹಿಳಾ, ಯುವ ಕಾಂಗ್ರೇಸ್ ಮತ್ತು ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದಿಂದ ಭಾನುವಾರ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಎತ್ತಿನಹೊಳೆ ಯೋಜನೆ ಮಾಡೇ ಮಾಡ್ತೀವಿ.ರೈತರ ನೀರಾವರಿ ಸಮಸ್ಯೆ ನಿವಾರಣೆ ಮಾಡ್ತೀನಿ. ಬೈರಗೊಂಡ್ಲು ರೈತರು ವಿರೋಧ ಪಕ್ಷದವ್ರ ಮಾತು ಕೇಳಿ ನೀರಾವರಿ ಯೋಜನೆ ಹಾಳುಮಾಡಿದ್ರು. ಬೈರಗೊಂಡ್ಲು ಬಳಿ ೨೫೦೦ ವಿಸ್ತೀರ್ಣದ ಜಲಾಶಯ ಈಗ ನಮ್ಮ ಕೈತಪ್ಪಿದೆ..ವಡೇರಹಳ್ಳಿ ಬಳಿ ಈಗ ಕೇವಲ ೫೦೦ಎಕರೇ ನೀಡಿದ್ರೇ ಅನುಕೂಲ ಆಗುತ್ತೇ. ಈಗ ಅದಕ್ಕೂ ವಿರೋಧ ಆಗ್ತಿದೆ ಸರಕಾರ ಕೈ ಕಟ್ಟಿ ಕೋರಲ್ಲ. ವಿನಯವಾಗಿ ಗೌರವದಿಂದ ಕೈ ಮುಗಿದು ಕೇಳುತ್ತೇನೆ ಜಮೀನಿಗೆ ವಿರೋಧ ಮಾಡಬೇಡಿ ಎಂದು ಮನವಿ ಮಾಡಿದರು.
ತುಮಕೂರು ಮಾಜಿ ಸಂಸದ ಮುದ್ದ ಹನುಮೇ ಗೌಡ ಮಾತನಾಡಿ ರಾಜ್ಯದ ೨ಸಲ ಡಿಸಿಎಂ ಆಗಿರುವ ಕೀರ್ತಿ ಡಾ.ಜಿ.ಪರಮೇಶ್ವರ ಅವರದ್ದು. ೨ಸಲ ಸಿಎಂ ಹುದ್ದೇ ಕೈತಪ್ಪಿದ್ದು ೨೦೨೮ಕ್ಕೆ ನನಸಾಗಲಿ. ಸಿಎಂ ಮತ್ತು ಡಿಸಿಎಂ ಜೋಡೆತ್ತು ಮತ್ತೇ ಅಧಿಕಾರಕ್ಕೆ ಬರಲಿ.ಎತ್ತಿನಹೊಳೆ ಮತ್ತು ರಾಯದುರ್ಗ ರೈಲ್ವೆ ಯೋಜನೆ ತ್ವರಿತವಾಗಿ ಪೂರ್ಣವಾದರೇ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ ಎಂದರು.
ಪಾವಗಡ ಶಾಸಕ ವೆಂಕಟೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಆಯೋಗ ಅಧ್ಯಕ್ಷ ಡಾ.ನಾಗಲಕ್ಷಿö್ಮÃ, ಮಾಜಿ ಶಾಸಕ ಗಂಗಹನುಮಯ್ಯ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಶ್ವತ್ಥ ನಾರಾಯಣ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಕಾಂಗ್ರೇಸ್ ಮಹಿಳಾಧ್ಯಕ್ಷೆ ಜಯಮ್ಮ, ಯುವಧ್ಯಕ್ಷ ಬೈರೇಶ್, ಮುಖಂಡರಾದ ಪ್ರೇಮಾ ಮಹಾಲಿಂಗಪ್ಪ, ಬಲರಾಮಯ್ಯ, ಕೆ.ಆರ್.ಓಬಳರಾಜು, ಎಲ್.ರಾಜಣ್ಣ, ವಿನಯ್, ಅರವಿಂದ್, ರಘುವೀರ್, ಕೆಎಲ್‌ಎಂ ಮಂಜು, ಅಮರ, ಮಹೇಶ್ ಇತರರು ಇದ್ದರು.
(Visited 1 times, 1 visits today)

