BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ
  • ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು
  • ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
  • ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ
  • ಬಹುದಿನಗಳಿಂದ ನೆನಗುದಿಗೆ ಬಿದಿದ್ದ ರೈಲ್ವೆ ಕಾಮಗಾರಿ ಪ್ರಾರಂಭ
  • ಅಕ್ಟೋಬರ್ ವೇಳೆಗೆ ತುಮಕೂರಿಗೆ ಎತ್ತಿನ ಹೊಳೆ ನೀರು
  • ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ
  •  ಜು.೨೯ರವರೆಗೆ ಮನೆ-ಮನೆ ಭೇಟಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು
news

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

By News Desk BenkiyabaleUpdated:July 02, 2026 4:36 pm

ಹುಳಿಯಾರು: ಮತದಾರರ ಪಟ್ಟಿಯನ್ನು ಅತ್ಯಂತ ನಿಖರ ಹಾಗೂ ನವೀಕೃತವಾಗಿಡುವ ಉದ್ದೇಶದಿಂದ, ಹುಳಿಯಾರು ಪಟ್ಟಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಇದರ ಅಂಗವಾಗಿ ನಿಯೋಜನೆಗೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಪಟ್ಟಣದಾದ್ಯಂತ ಮನೆ ಮನೆಗೆ ಭೇಟಿ ನೀಡಿ, ಮತದಾರರಿಗೆ ಅಗತ್ಯವಿರುವ ಗಣತಿ ನಮೂನೆ ಅರ್ಜಿಗಳನ್ನು (ಎನ್ಯೂಮರೇಷನ್ ಫಾರಂ) ವಿತರಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅರ್ಜಿ ಸಲ್ಲಿಸಲು ಅಧಿಕಾರಿಗಳ ಮನವಿ: ಮನೆ ಮನೆಗೆ ತೆರಳುತ್ತಿರುವ ಅಧಿಕಾರಿಗಳು ಸಾರ್ವಜನಿಕರಲ್ಲಿ ಗಣತಿ ನಮೂನೆಗಳನ್ನು ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ, ನಿಖರವಾಗಿ ಭರ್ತಿ ಮಾಡಿ, ಅಗತ್ಯ ದಾಖಲಾತಿಗಳು ಹಾಗೂ ಭಾವಚಿತ್ರವನ್ನು ಲಗತ್ತಿಸಿ ನಿಗದಿತ ಅವಧಿಯೊಳಗೆ ತಮಗೆ ಸಲ್ಲಿಸಬೇಕೆಂದು ಮನವಿ ಮಾಡುತ್ತಿದ್ದಾರೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು? : ಈ ವಿಶೇಷ ಪರಿಷ್ಕರಣೆಯ ಕುರಿತು ಬಿಎಲ್‌ಒ ರಂಗನಾಥ್ ಅವರು ಮಾಹಿತಿ ನೀಡಿ, ೧೮ ವರ್ಷ ತುಂಬಿದ ಹೊಸ ಮತದಾರರ ಹೆಸರನ್ನು ಪಟ್ಟಿಗೆ ಸೇರ್ಪಡೆ ಮಾಡಲು, ನಿಧನರಾದ ಮತದಾರರ ಹೆಸರನ್ನು ಕೈಬಿಡಲು, ಮನೆ ಖಾಲಿ ಮಾಡಿ ಬೇರೆಡೆ ವಲಸೆ ಹೋದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಹಾಗೂ ಮತದಾರರ ವೈಯಕ್ತಿಕ ವಿವರಗಳಲ್ಲಿ ಯಾವುದೇ ತಪ್ಪುಗಳಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಈ ಪ್ರಕ್ರಿಯೆಯಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಒಂದಕ್ಕಿAತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ, ನಿಯಮಾನುಸಾರ ಒಂದೆಡೆ ಮಾತ್ರ ಉಳಿಸಿಕೊಳ್ಳಲು ಸಹ ಈ ವೇಳೆ ಅವಕಾಶವಿದೆ ಎಂದು ವಿವರಿಸಿದರು.
ಸಾರ್ವಜನಿಕರ ಸಹಕಾರಕ್ಕೆ ಮುಖ್ಯಾಧಿಕಾರಿ ಕರೆ : ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಅವರು ಮಾತನಾಡಿ, “ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ನವೀಕೃತವಾಗಿಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಎಲ್ಲ ಅರ್ಹ ಮತದಾರರು ಸಂಪೂರ್ಣವಾಗಿ ಸಹಕರಿಸಬೇಕು ಎಂದು ಕರೆ ನೀಡಿದರು.
ರಸೀದಿ ಪಡೆದುಕೊಳ್ಳಲು ಸೂಚನೆ: ಪರಿಷ್ಕರಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳು ೨೦೨೦ ರ ಜೂನ್ ೧೬ ರವರೆಗಿನ ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿ ಮತದಾರರ ಮನೆಗೂ ಭೇಟಿ ನೀಡಿ ಗಣತಿ ನಮೂನೆಯನ್ನು ತಲುಪಿಸಲಿದ್ದಾರೆ. ಮತಗಟ್ಟೆ ಅಧಿಕಾರಿಗಳು ಮನೆಗೆ ಬಂದಾಗ ಸಾರ್ವಜನಿಕರು ಸೂಕ್ತವಾಗಿ ಸ್ಪಂದಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ನೀಡುವಾಗ ಅಧಿಕಾರಿಗಳು ಕೊಡುವ ಎರಡು ಪ್ರತಿಗಳಲ್ಲಿ ಒಂದನ್ನು ಅಧಿಕಾರಿಗಳಿಗೆ ಹಿಂದಿರುಗಿಸಿ, ಮತ್ತೊಂದರಲ್ಲಿ ಅವರ ಸಹಿ ಪಡೆದು ಮತದಾರರು ರಸೀದಿಯಾಗಿ ತಮ್ಮ ಬಳಿಯೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಆರ್‌ಒ ಶೃತಿ ಬನಾರ, ಬಿಎಲ್‌ಒ ರಂಗನಾಥ್, ಬಿಎಲ್‌ಎ ರಾಜ್‌ಕುಮಾರ್ ಮತ್ತು ಸನತ್ ಹಾಗೂ ಇತರೆ ಪ್ರಮುಖರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

(Visited 1 times, 1 visits today)
Chikkanayakanahalli kannada news karnataka local news mla suresh babu SIR tumakur tumkur ಜಿಲ್ಲಾಧಿಕಾರಿ ಶುಭ ಕಲ್ಯಾಣ್
Previous Articleಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
Next Article ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ
News Desk Benkiyabale

Related Posts

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

July 02, 2026 4:59 pm news

ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

July 02, 2026 4:33 pm news

ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ

July 02, 2026 4:29 pm news
ತಾಜಾ ಸುದ್ಧಿಗಳು

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

July 02, 2026 4:59 pm

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

July 02, 2026 4:36 pm

ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

July 02, 2026 4:33 pm

ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ

July 02, 2026 4:29 pm

ಬಹುದಿನಗಳಿಂದ ನೆನಗುದಿಗೆ ಬಿದಿದ್ದ ರೈಲ್ವೆ ಕಾಮಗಾರಿ ಪ್ರಾರಂಭ

July 02, 2026 4:26 pm

ಅಕ್ಟೋಬರ್ ವೇಳೆಗೆ ತುಮಕೂರಿಗೆ ಎತ್ತಿನ ಹೊಳೆ ನೀರು

July 02, 2026 4:19 pm
Our Youtube Channel
Our Picks

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

July 02, 2026 4:59 pm

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

July 02, 2026 4:36 pm

ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

July 02, 2026 4:33 pm

ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ

July 02, 2026 4:29 pm

ಬಹುದಿನಗಳಿಂದ ನೆನಗುದಿಗೆ ಬಿದಿದ್ದ ರೈಲ್ವೆ ಕಾಮಗಾರಿ ಪ್ರಾರಂಭ

July 02, 2026 4:26 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

By News Desk BenkiyabaleJuly 02, 2026 4:59 pm

ತುಮಕೂರು/ಶಿವಮೊಗ್ಗ: ತುಮಕೂರಿನ ಇತಿಹಾಸ ಸಂಶೋಧಕರ ತಂಡ ಶಿವಮೊಗ್ಗ ತಾಲೂಕಿನ ಬಿದಿರಿ ಗ್ರಾಮದಲ್ಲಿ ವಿಜಯನಗರ ಕಾಲದ ಅತ್ಯಂತ ಮಹತ್ವದ ಹಾಗೂ ಇಂದಿನವರೆಗೂ…

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

July 02, 2026 4:36 pm

ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

July 02, 2026 4:33 pm

ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ

July 02, 2026 4:29 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.