ಕೊರಟಗೆರೆ: ಕೊರಟಗೆರೆ ಕ್ಷೇತ್ರದ ಮಾಜಿ ಸಚಿವ, ಹಿರಿಯ ರಾಜಕಾರಣಿ ಸಿ. ವೀರಣ್ಣ ಅವರು ಶುಕ್ರವಾರ ರಾತ್ರಿ ತಾಲೂಕಿನ ಬುಕ್ಕಾಪಟ್ಟಣ ಗ್ರಾಮದ ತಮ್ಮ ತೋಟದ ಮನೆಯಲ್ಲಿ ನಿಧನರಾಗಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಅಂತಿಮ ದರ್ಶನ ಪಡೆದರು, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರೆವೇರಿತು.
ಮಾಜಿ ಸಚಿವ ಸಿ.ವೀರಣ್ಣ ಅವರು ಕಳೆದ ತಿಂಗಳು ತೀರ್ವ ಅನಾರೋಗ್ಯದಿಂದ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ವಿಚಾರಿಸಿದ್ದರು. ಆದರೆ, ಚಿಕಿತ್ಸೆ ಬಳಿಕವೂ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ಸಿ.ವೀರಣ್ಣ ಅವರು ರಾಜಕೀಯ ಪ್ರವೇಶಿಸಿದ ಬಳಿಕ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ೧೯೮೩ರಲ್ಲಿ ವಿಧಾನ ಸಭೆಯ ಉಪಸಭಾಧ್ಯಕ್ಷರಾಗಿ (ಡೆಪ್ಯೂಟಿ ಸ್ಪೀಕರ್) ಕಾರ್ಯ ನಿರ್ವಹಿಸಿದ್ದ ಅವರು, ೧೯೮೪ರಿಂದ ೧೯೮೯ರವರೆಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ದಿವಂಗತ ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್.ಬೊಮ್ಮಾಯಿ ನೇತೃತ್ವದ ಸರ್ಕಾರಗಳಲ್ಲಿ ಸಾರಿಗೆ, ಸಣ್ಣ ಉಳಿತಾಯ, ಕೈಗಾರಿಕೆ ಮತ್ತು ವಾಣಿಜ್ಯ, ಬಂಧಿಖಾನೆ ಸೇರಿದಂತೆ ೧೧ ಇಲಾಖೆಗಳ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ ಅವರು ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಪ್ರಕ್ರಿಯೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸಮುದಾಯದ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿಯೆತ್ತಿದ ನಾಯಕರಾಗಿ ಗುರುತಿಸಿಕೊಂಡಿದ್ದರು.
೧೯೭೧ರಲ್ಲಿ ಜನಸಂಘದ ಪಕ್ಷದಅಧ್ಯಕ್ಷರಾಗಿ, ಸಂಘಟಾತ್ಮಕ ಪದೆದವರಾದಅವರು, ೧೯೭೨ರ ಮೊದಲ ಚುನಾವಣೆಗೆ ಸೋಲು ಕಂಡರೂ ಹೋರಾಟ ಮುಂದುವರಿಸಿದರು.೧೯೭೮ರ ಸೋಲೂ ಅವರಿಗೆ ಬೇಸರತರಲಿಲ್ಲ, ಜನ ಸೇವೆಯ ನೆಲೆ ಬಿದ್ದಿತ್ತು.ಜನ ಮನಸ್ಸುಗೆಲ್ಲುವುದು ನಿಧಾನವಾದರೂ ಶಾಶ್ವತವಾಗಿ ನಿಲ್ಲುತ್ತದೆ.
೧೯೮೩ರಲ್ಲಿ ಜನತಾ ಪಕ್ಷದ ಟಿಕೆಟ್ ಪಡೆದು, ಕೊನೆಗೂ ಪ್ರಚಂಡ ಬಹುಮತದಿಂದ ಶಾಸಕರಾಗಿ ಆಯ್ಕೆಯಾದರು. ಇವರಲ್ಲಿದ್ದ ಧೃಡತೆ, ನೈತಿಕತೆ, ನಾಯಕನಾಗುವ ಸಾಮರ್ಥ್ಯ ಕಂಡ ಪ್ರಭಾವಿ ರಾಜಕಾರಣಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ವೀರಣ್ಣ ನಮ್ಮ ವಿಧಾನಸಭೆಯ ಉಪಸಭಾಧ್ಯಕ್ಷ ಎಂಬ ನಂಬಿಕೆಯಿAದ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿಸಿದರು. ಇದು ಇವರು ರಾಜಕೀಯಕ್ಕೆ ತಂದಿದ್ದ ಮೌಲ್ಯಗಳ ದೊಡ್ಡ ಗೆಲುವು.
ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನನಾಂದಪುರಿ ಸ್ವಾಮಿಜೀ, ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಗೌರಿಶಂಕರ್, ಸೊಗಡು ಶೀನಿವಾಸ್, ನಿಂಗಪ್ಪ, ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.
(Visited 1 times, 1 visits today)





