BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಪೂರ್ವಭಾವಿ ಸಭೆ
  • ಎಸ್‌ಎಫ್‌ಐ, ಪ್ರಗತಿಪರ ಸಂಘಟನೆಗಳಿ0ದ ಕ್ಯಾಂಡಲ್ ಲೈಟ್ ಪ್ರತಿಭಟನೆ
  • ಅವಸಾನದ ಅಂಚಿನಲ್ಲಿ ೮೦೦ ವರ್ಷ ಹಳೆಯ ಹೊಯ್ಸಳ ಶಾಸನ
  • ಹಿರಿಯ ರಾಜಕಾರಣಿ ಮಾಜಿ ಸಚಿವ ಸಿ.ವೀರಣ್ಣ ನಿಧನಕ್ಕೆ ಗಣ್ಯರಿಂದ ಸಂತಾಪ
  • ಶಿಕ್ಷಣ ಸಚಿವರ ರಾಜೀನಾಮೆ: ಹೋರಾಟದ ವಿಜಯೋತ್ಸವ
  • ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಆರಂಭ
  • ರೌಡಿಶೀಟರ್ ಮಲ್ಲ ಭೀಕರ ಹತ್ಯೆ
  • ಜ0ತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅವಸಾನದ ಅಂಚಿನಲ್ಲಿ ೮೦೦ ವರ್ಷ ಹಳೆಯ ಹೊಯ್ಸಳ ಶಾಸನ
news

ಅವಸಾನದ ಅಂಚಿನಲ್ಲಿ ೮೦೦ ವರ್ಷ ಹಳೆಯ ಹೊಯ್ಸಳ ಶಾಸನ

ನಿಧಿಚೋರರ ಹಾವಳಿ, ಮುಳ್ಳುಪೊದೆಯಲ್ಲಿ ಅನಾಥವಾದ ಪ್ರಸನ್ನಕೇಶವಪುರದ ಇತಿಹಾಸ
By News Desk BenkiyabaleUpdated:July 27, 2026 5:10 pm

ಹುಳಿಯಾರು: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯದ ಹಿನ್ನೀರಿನಲ್ಲಿರುವ ಮಾರುಹೊಳೆ ಗ್ರಾಮವು ತನ್ನ ಒಡಲಲ್ಲಿ ಸುಮಾರು ೮೦೦ ವರ್ಷಗಳ ಸುದೀರ್ಘ ಇತಿಹಾಸವನ್ನು ಬಚ್ಚಿಟ್ಟುಕೊಂಡಿದೆ. ಆದರೆ, ಈ ಐತಿಹಾಸಿಕ ಹಿರಿಮೆಗೆ ಸಾಕ್ಷಿಯಾಗಿ ನಿಂತಿದ್ದ ಹೊಯ್ಸಳರ ಕಾಲದ ಅಪರೂಪದ ಶಾಸನವೊಂದು ಇಂದು ಅನಾಥವಾಗಿ, ಅವಸಾನದ ಅಂಚು ತಲುಪಿರುವುದು ಅತ್ಯಂತ ವಿಷಾದನೀಯ ಸಂಗತಿ.
ಗ್ರಾಮದ ‘ಕೊರಮರಕಟ್ಟೆ’ ಎಂಬ ಜಾಗದಲ್ಲಿರುವ ಈ ಶಾಸನವು ಕ್ರಿ.ಶ. ೧೨೨೬ ರ ಕಾಲಘಟ್ಟಕ್ಕೆ ಅಂದರೆ, ಹೊಯ್ಸಳ ಸಾಮ್ರಾಟ ಎರಡನೇ ನರಸಿಂಹನ ಆಳ್ವಿಕೆಯ ಅವಧಿಗೆ ಸೇರಿದ್ದಾಗಿದೆ. ಇಷ್ಟೊಂದು ಪ್ರಮುಖ ಇತಿಹಾಸ ಸಾರುವ ಕಲ್ಲು, ಪ್ರಸ್ತುತ ಬೇಲಿ-ಪೊದೆಗಳ ನಡುವೆ ಹಾಳಾಗುತ್ತಿದ್ದು, ನಿಧಿಚೋರರ ದುರಾಶೆಗೆ ಸಿಲುಕಿ ಮಣ್ಣಿನಲ್ಲಿ ಮುಚ್ಚಿಹೋಗುವ ದುಸ್ಥಿತಿಯಲ್ಲಿದೆ. ಇಂತಹ ಅಪರೂಪದ ಶಾಸನವನ್ನು ಶಾಸನ ಸಂಶೋಧಕರಾದ ಶಶಿಕುಮಾರನಾಯ್ಕ ಅವರು ಬೆಳಕಿಗೆ ತಂದಿದ್ದು ಇದನ್ನು ರಕ್ಷಿಸುವ ಕಾರ್ಯ ಆಗಬೇಕಿದೆ.
ಕರ್ನಾಟಕದ ಸಾಂಸ್ಕöÈತಿಕ ಇತಿಹಾಸವನ್ನು ದಾಖಲಿಸುವಲ್ಲಿ ’ಎಪಿಗ್ರಾಫಿಯಾ ಕರ್ನಾಟಿಕ’ ಗ್ರಂಥಮಾಲೆ ಅತ್ಯಂತ ಪ್ರಾಮಾಣಿಕ ಆಕರವಾಗಿದೆ. ಸಂಪುಟ ೨೫ ರ ಚಿಕ್ಕನಾಯಕನಹಳ್ಳಿ ತಾಲೂಕು ಶಾಸನ ಸಂಖ್ಯೆ ೭೫ ರಲ್ಲಿ ಈ ಮಾರುಹೊಳೆಯ ಶಾಸನವನ್ನು ಸಂಪೂರ್ಣವಾಗಿ ದಾಖಲಿಸಲಾಗಿದೆ.
ಈ ಶಾಸನ ದಾಖಲೆಯು ೧೩ ನೇ ಶತಮಾನದ ಹೊಯ್ಸಳರ ಕಾಲದಲ್ಲಿದ್ದ ಭೂದಾನ ಪದ್ಧತಿ, ಭೂಕಂದಾಯ ವ್ಯವಸ್ಥೆ, ಪ್ರಾದೇಶಿಕ ಆಡಳಿತ ವಿಭಾಗಗಳು ಮತ್ತು ಸಾಮಾಜಿಕ ರಚನೆಯ ಮೇಲೆ ಬೆಳಕು ಚೆಲ್ಲುತ್ತದೆ.
ಈ ಶಾಸನದ ವಿವರಣೆಯಂತೆ ಅಂದು ಈ ಭಾಗವು ‘ಮಗರೆ-೩೦೦’ ಎಂಬ ಪ್ರಾದೇಶಿಕ ವಿಭಾಗಕ್ಕೊಳಪಟ್ಟಿತ್ತು (೩೦೦ ಹಳ್ಳಿಗಳು ಅಥವಾ ಆದಾಯದ ಘಟಕಗಳನ್ನು ಹೊಂದಿದ್ದ ಪ್ರಾಂತ್ಯ). ಸಾಮಂತ ಅಧಿಕಾರಿಯೊಬ್ಬ ಗ್ರಾಮವನ್ನು ಅಗ್ರಹಾರವನ್ನಾಗಿ ಪರಿವರ್ತಿಸಿ ದಾನ ನೀಡುವಾಗ, ಕೇವಲ ರಾಜನ ಆಜ್ಞೆಯಷ್ಟೇ ಅಲ್ಲದೆ ಸ್ಥಳೀಯ ನಾಡಪ್ರಭುಗಳು, ಊರಿನ ಗಣ್ಯರು ಹಾಗೂ ಕೃಷಿಕರ (ರೈತರ) ಸಮ್ಮುಖದಲ್ಲೇ ಈ ಪ್ರಕ್ರಿಯೆ ನಡೆದಿತ್ತು. ಅಂದರೆ, ಅಂದಿನ ಕಾಲದಲ್ಲೇ ಪಾರದರ್ಶಕ ಆಡಳಿತ ಮತ್ತು ಸಾರ್ವಜನಿಕ ಸಹಭಾಗಿತ್ವ ಇತ್ತು ಎಂಬುದಕ್ಕೆ ಇದು ಪುರಾವೆಯಾಗಿದೆ.
ಕ್ರಿ.ಶ. ೧೨೨೬ ರಲ್ಲಿ ಹೊಯ್ಸಳ ಸಾಮ್ರಾಟ ಎರಡನೇ ನರಸಿಂಹನು ದೋರಸಮುದ್ರದಿಂದ (ಇಂದಿನ ಹಳೇಬೀಡು) ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ, ’ಮಗರೆ-೩೦೦’ ಪ್ರಾಂತ್ಯದ ಸಾಮಂತ ಅಧಿಕಾರಿಯಾಗಿದ್ದ ಕೇಶವ ದಂಡನಾಥನು ಮಾರುಹೊಳೆ ಗ್ರಾಮವನ್ನು ‘ಪ್ರಸನ್ನಕೇಶವಪುರ’ ಎಂದು ಮರುನಾಮಕರಣ ಮಾಡಿ, ಎಂಭತ್ತು ಜನ ವಿದ್ವಾಂಸ ಬ್ರಾಹ್ಮಣರಿಗೆ ದಾನವಾಗಿ ನೀಡಿದ್ದನು.
ಶಾಸನದ ಕೊನೆಯಲ್ಲಿ ಉಲ್ಲೇಖವಾಗಿರುವ ಶಾಪಾಶಯವು ಸಾರ್ವಜನಿಕ ಸ್ವತ್ತಿನ ಸಂರಕ್ಷಣೆಗೆ ನೀಡುತ್ತಿದ್ದ ಮಹತ್ವವನ್ನು ಸಾರುತ್ತದ್ದು ಈ ಶಾಸನದ ಮೂಲಕ ನೀಡಿದ ದಾನವನ್ನು ಯಾರಾದರೂ ಅಪಹರಿಸಿದರೆ ಅಥವಾ ಹಾಳುಮಾಡಿದರೆ, ಅರವತ್ತು ಸಾವಿರ ವರ್ಷಗಳ ಕಾಲ ಮಲದ ಹುಳುವಾಗಿ ಜನಿಸುವರು. ವಿಷವು ತಿಂದ ಒಬ್ಬನನ್ನು ಮಾತ್ರ ಕೊಲ್ಲುತ್ತದೆ, ಆದರೆ ಬ್ರಹ್ಮಸ್ವವನ್ನು (ದೇವರ ಹಾಗೂ ಧರ್ಮದ ದಾನವನ್ನು) ಅಪಹರಿಸಿದರೆ ಅದು ಅವರ ಮಕ್ಕಳು, ಮೊಮ್ಮಕ್ಕಳ ವಂಶವನ್ನೇ ನಾಶಮಾಡುತ್ತದೆ ಎಂಬುದಾಗಿ ಬರೆಯಲಾಗಿದೆ.
ಮಾರುಹೊಳೆಯ ಸುದೀರ್ಘ ಇತಿಹಾಸ ಮತ್ತು ಹೊಯ್ಸಳರ ಆಡಳಿತ ಶೈಲಿಗೆ ಕೈಗನ್ನಡಿಯಾಗಿರುವ ಈ ಶಾಸನಕಲ್ಲು ಇಂದು ಸೂಕ್ತ ರಕ್ಷಣೆ ಇಲ್ಲದೇ ಕಾಲಗರ್ಭದಲ್ಲಿ ಲೀನವಾಗುವ ಅಪಾಯದಲ್ಲಿದೆ. ನಿಧಿಚೋರರು ಶಾಸನದ ಸುತ್ತಮುತ್ತ ಅಗೆದು ಹಾಳುಗೆಡವುತ್ತಿರುವುದು ಚಾರಿತ್ರಿಕ ಅಪರಾಧ.
ಸಂಬAಧಪಟ್ಟ ಪುರಾತತ್ವ ಇಲಾಖೆ, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಗ್ರಾಮಾಂತರ ಆಡಳಿತ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಮಣ್ಣಿನಲ್ಲಿ ಹೂತುಹೋಗುತ್ತಿರುವ ಈ ಶಾಸನವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಮುಂದಿನ ಪೀಳಿಗೆಗೆ ಇತಿಹಾಸದ ಕುರುಹುಗಳನ್ನು ಉಳಿಸಿಕೊಡಬೇಕಿದೆ.

(Visited 1 times, 1 visits today)
Chikkanayakanahalli tumakur tumkur ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ಹುಳಿಯಾರು
Previous Articleಹಿರಿಯ ರಾಜಕಾರಣಿ ಮಾಜಿ ಸಚಿವ ಸಿ.ವೀರಣ್ಣ ನಿಧನಕ್ಕೆ ಗಣ್ಯರಿಂದ ಸಂತಾಪ
Next Article ಎಸ್‌ಎಫ್‌ಐ, ಪ್ರಗತಿಪರ ಸಂಘಟನೆಗಳಿ0ದ ಕ್ಯಾಂಡಲ್ ಲೈಟ್ ಪ್ರತಿಭಟನೆ
News Desk Benkiyabale

Related Posts

ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಪೂರ್ವಭಾವಿ ಸಭೆ

July 27, 2026 5:14 pm news

ಎಸ್‌ಎಫ್‌ಐ, ಪ್ರಗತಿಪರ ಸಂಘಟನೆಗಳಿ0ದ ಕ್ಯಾಂಡಲ್ ಲೈಟ್ ಪ್ರತಿಭಟನೆ

July 27, 2026 5:12 pm news

ಹಿರಿಯ ರಾಜಕಾರಣಿ ಮಾಜಿ ಸಚಿವ ಸಿ.ವೀರಣ್ಣ ನಿಧನಕ್ಕೆ ಗಣ್ಯರಿಂದ ಸಂತಾಪ

July 27, 2026 5:09 pm news
ತಾಜಾ ಸುದ್ಧಿಗಳು
news

ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಪೂರ್ವಭಾವಿ ಸಭೆ

July 27, 2026 5:14 pm
news

ಎಸ್‌ಎಫ್‌ಐ, ಪ್ರಗತಿಪರ ಸಂಘಟನೆಗಳಿ0ದ ಕ್ಯಾಂಡಲ್ ಲೈಟ್ ಪ್ರತಿಭಟನೆ

July 27, 2026 5:12 pm
news

ಅವಸಾನದ ಅಂಚಿನಲ್ಲಿ ೮೦೦ ವರ್ಷ ಹಳೆಯ ಹೊಯ್ಸಳ ಶಾಸನ

July 27, 2026 5:10 pm
news

ಹಿರಿಯ ರಾಜಕಾರಣಿ ಮಾಜಿ ಸಚಿವ ಸಿ.ವೀರಣ್ಣ ನಿಧನಕ್ಕೆ ಗಣ್ಯರಿಂದ ಸಂತಾಪ

July 27, 2026 5:09 pm
news

ಶಿಕ್ಷಣ ಸಚಿವರ ರಾಜೀನಾಮೆ: ಹೋರಾಟದ ವಿಜಯೋತ್ಸವ

July 27, 2026 5:07 pm
news

ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಆರಂಭ

July 27, 2026 5:06 pm
Our Youtube Channel
Our Picks

ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಪೂರ್ವಭಾವಿ ಸಭೆ

July 27, 2026 5:14 pm

ಎಸ್‌ಎಫ್‌ಐ, ಪ್ರಗತಿಪರ ಸಂಘಟನೆಗಳಿ0ದ ಕ್ಯಾಂಡಲ್ ಲೈಟ್ ಪ್ರತಿಭಟನೆ

July 27, 2026 5:12 pm

ಅವಸಾನದ ಅಂಚಿನಲ್ಲಿ ೮೦೦ ವರ್ಷ ಹಳೆಯ ಹೊಯ್ಸಳ ಶಾಸನ

July 27, 2026 5:10 pm

ಹಿರಿಯ ರಾಜಕಾರಣಿ ಮಾಜಿ ಸಚಿವ ಸಿ.ವೀರಣ್ಣ ನಿಧನಕ್ಕೆ ಗಣ್ಯರಿಂದ ಸಂತಾಪ

July 27, 2026 5:09 pm

ಶಿಕ್ಷಣ ಸಚಿವರ ರಾಜೀನಾಮೆ: ಹೋರಾಟದ ವಿಜಯೋತ್ಸವ

July 27, 2026 5:07 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಪೂರ್ವಭಾವಿ ಸಭೆ

By News Desk BenkiyabaleJuly 27, 2026 5:14 pm

ತುಮಕೂರು: ಎಐಸಿಸಿಯ ಅಧ್ಯಕ್ಷರಾದ ಮಲ್ಲಿಕಾರ್ಜನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ಕಾಂಗ್ರೆಸ್ ಪಕ್ಷದ…

ಎಸ್‌ಎಫ್‌ಐ, ಪ್ರಗತಿಪರ ಸಂಘಟನೆಗಳಿ0ದ ಕ್ಯಾಂಡಲ್ ಲೈಟ್ ಪ್ರತಿಭಟನೆ

July 27, 2026 5:12 pm

ಅವಸಾನದ ಅಂಚಿನಲ್ಲಿ ೮೦೦ ವರ್ಷ ಹಳೆಯ ಹೊಯ್ಸಳ ಶಾಸನ

July 27, 2026 5:10 pm

ಹಿರಿಯ ರಾಜಕಾರಣಿ ಮಾಜಿ ಸಚಿವ ಸಿ.ವೀರಣ್ಣ ನಿಧನಕ್ಕೆ ಗಣ್ಯರಿಂದ ಸಂತಾಪ

July 27, 2026 5:09 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.