ತುಮಕೂರು: ಐತಿಹಾಸಿಕ ಮತ್ತು ಚಾರಿತ್ರಿಕ ವಿಷಯಗಳ ಬಗ್ಗೆ ಸಂಶೋಧನೆಗಳು ಕಡಿಮೆ. ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ. ಆ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಗಳಗನಾಥ ಮತ್ತು ನಾ.ಶ್ರೀರಾಜ ಪುರೋಹಿತ ಪ್ರತಿಷ್ಠಾನವತಿಯಿಂದ ೨೦೨೪ನೇ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು, ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡುತಿದ್ದ ಅವರು,ನಾಗಾವಿಯಲ್ಲಿ ಮೊದಲ ಕನ್ನಡ ವಿವಿ ಇತ್ತು. ಇಂದಿಗೂ ಘಟಿಕೋತ್ಸವ ಭವನ ಅಲ್ಲಿದೆ, ನೋಡಬಹುದು. ಇದರ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಇಂತಹ ಮಹತ್ವದ ವಿಚಾರಗಳು ಸಂಶೋಧನೆಗಳ ಮೂಲಕ ಜನರ ಗಮನಕ್ಕೆ ಬರಬೇಕಿದೆ. ನಾನು ಪ್ರವಾಸೋದ್ಯಮ ಮತ್ತು ಪುರಾತತ್ವ ಮಂತ್ರಿ ಇದ್ದಾಗ,ಹಸ್ತಪ್ರತಿ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದೆ.ಯಾರ ಮನೆಯಲ್ಲಿಯೇ ಯಾವುದೇ ವಿಚಾರಕ್ಕೆ ಸಂಬAಧಿಸಿದ ಹಸ್ತ ಪ್ರತಿಗಳಿದ್ದರು ಅವುಗಳನ್ನು ಸಂಗ್ರಹಿಸಿ,ಅದರಲ್ಲಿನ ಸಾರಾಂಶಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಸಂಶೋಧನೆ ಮತ್ತು ಅಧ್ಯಾತ್ಮದಲ್ಲಿ ಬಹಳ ಹೆಸರು ಮಾಡಿದ್ದ ಗಳಗನಾಥರು ಮತ್ತು ರಾಜಪುರೋಹಿತರ ಪ್ರತಿಷ್ಠಾನದಿಂದ ನೀಡುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ. ಗಳಗನಾಥರು ಆರಂಭಿಸಿದ ಸದ್ಬೋಧ ಪತ್ರಿಕೆ ೧೧೦ ವರ್ಷಗಳ ಹಿಂದೆ ಆರಂಭಿಸಿ, ಇಂದಿಗೂ ಮುದ್ರಣಗೊಳ್ಳುತ್ತಿದೆ. ಹಾಗೆಯೇ ರಾಜಪುರೋಹಿತರು ಸಂಶೋಧನೆಯ ಮೂಲಕ ಕರ್ನಾಟಕ ರಾಜಮನೆತನಗಳ ಚರಿತ್ರೆ ಕರ್ನಾಟಕಕ್ಕೆ ಹೊಸ ದಿಕ್ಕು ನೀಡಿವೆ. ಇರ್ವರ ಹೆಸರಿನಲ್ಲಿ ಹಿರಿಯ ಸಂಶೋಧಕರಾದ ಡಾ.ಆರ್.ಶೇಷಾ ಶ್ರಾಸ್ತಿ ಮತ್ತು ಹಿರಿಯ ಕಾದಂಬರಿಕಾರರಾದ ಡಾ.ಕೆ.ಎನ್. ಗಣೇಶಯ್ಯ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಸಂತೋಷ ತಂದಿದೆ ಎಂದರು.
ಶ್ರೀದೇವಿ ಶಿಕ್ಷಣ ಸಂಸ್ಥೆ ಗಣಕಪರಿಷತ್ತಿನ ಸಹಯೋಗದಲ್ಲಿ ಒಂದು ಮಹತ್ವದ ಕಾರ್ಯವನ್ನು ಕೈಗೊಂಡಿದೆ.ಕನ್ನಡದ ಸಾಹಿತ್ಯ ಕ್ಷೇತರದಲ್ಲಿರುವ ಎಲ್ಲಾ ಪುಸ್ತಕಗಳನ್ನು ಎಐಗೆ ಅಳವಡಿಸುವ ಕೆಲಸವನ್ನು ಆರಂಭಿಸಲಾಗಿದೆ. ಗೂಗಲ್ ಮತ್ತು ಜಾಟ್ ಟಿಪಿಟಿಯಲ್ಲಿ ಕನ್ನಡದ ಕುರಿತು ಪ್ರಶ್ನೆಗಳಿಗೆ ನಿಖರ ಉತ್ತರ ಪಡೆಯುವ ನಿಟ್ಟಿನಲ್ಲಿ ಪ್ರಜ್ಞಾ ಎಂಬ ಹೊಸ ತಂತ್ರಾAಶ ಸೃಜಿಸಲು ಸುಮಾರು ೫೦ ಲಕ್ಷ ರೂಗಳ ವೆಚ್ಚದಲ್ಲಿ ೨೦ ಲಕ್ಷ ಪುಸ್ತಕಗಳನ್ನು ಎಐಗೆ ಅಳವಡಿಸಲು ಮುಂದಾಗಿದೆ. ಇದು ವಿದ್ಯಾರ್ಥಿಗಳಿಗೆ ಪ್ರಯೋಗಿಕ ಪರೀಕ್ಷೆಯ ಸಹ ಆಗಲಿದೆ. ಇಡೀ ವಿಶ್ವದಲ್ಲಿಯೇ ಈ ಜಾಲತಾಣ ಉಚಿತವಾಗಿ ದೊರೆಯಲಿದೆ ಎಂದು ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದರು.
ಗಳಗನಾಥ ಹಾಗೂ ನಾ.ಶ್ರೀರಾಜಪುರೋಹಿತ ಪ್ರತಿಷ್ಠಾನದ ೨೦೨೪ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ಸಂಶೋಧಕರಾದ ಡಾ.ಆರ್.ಶೇಷಶಾಸ್ತಿç, ಹಾಗು ಕೃಷಿಕರು, ಕಾದಂಬರಿಕಾರರಾದ ಡಾ.ಕೆ.ಎನ್.ಗಣೇಶಯ್ಯ ಅವರಿಗೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಪ್ರೊ.ದುಷ್ಯಂತಗೌಡ, ಡಾ.ಕೆ.ಆರ್.ಕಮಲೇಶ್, ಬಿಎಂಶ್ರಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಬೈರಮಂಗಳ ರಾಮೇಗೌಡ, ತುಮಕೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು ಅವರುಗಳು ಪಾಲ್ಗೊಂಡಿದ್ದರು.

(Visited 1 times, 1 visits today)