ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆ ಮೀಸಲಾತಿ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು ಜಿಲ್ಲೆಯ ಎಲ್ಲಾ ಹತ್ತು ತಾಲೂಕುಗಳಲ್ಲಿ ಗ್ರಾಪಂ ರಾಜಕಾರಣ ಗರಿಗೆದರಿದೆ. ಸದಸ್ಯ ಸ್ಥಾನದ ಮೀಸಲಾತಿ ನಿಗದಿಯಲ್ಲಿ ಪ್ರಭಾವಿಗಳ ಹಸ್ತಕ್ಷೇಪದ ದೂರುಗಳು ಕೇಳಿಬಂದಿವೆ. ಮೀಸಲಾತಿ ಪಟ್ಟಿ ರಾಜ್ಯ ಗೆಜೆಟ್?ನಲ್ಲಿ ಪ್ರಕಟವಾದ ಕೂಡಲೇ ವ್ಯಾಟ್ಸಪ್?ಗಳಲ್ಲಿ ಹರಿದಾಡಲಾರಂಭಿಸಿದೆ.
ತುಮಕೂರು ಜಿಲ್ಲೆಯ ೩೩೦ ಗ್ರಾಪಂ ಸದಸ್ಯ ಸ್ಥಾನಕ್ಕೆ ಮೀಸಲಾತಿ ಹಂಚಿಕೆ ಪ್ರಕ್ರಿಯೆ ಮುಗಿದಿದ್ದು ಆಕ್ಷೇಪಣೆಗೆ ಅವಕಾಶವಿಲ್ಲದಂತೆ ಅಂತಿಮ ಅಧಿಸೂಚನೆ ಕೂಡ ಪ್ರಕಟಿಸುವುದರಿಂದ ಯಾರಾದರೂ ಮೀಸಲಾತಿ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯನ್ನು ಕಡಿಮೆ ಮಾಡಿದೆ. ಆಯಾ ಗ್ರಾಪಂ ವ್ಯಾಪ್ತಿಯಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹಂಚಲಾಗಿದೆ.
ಎAಎಲ್‌ಎ, ಮಾಜಿಗಳ ಪ್ರಭಾವ!: ಇತ್ತೀಚೆಗಷ್ಟೇ ಕಂದಾಯ ಗ್ರಾಮಗಳಾಗಿ ಘೋಷಣೆಯಾದ ನವಗ್ರಾಮಗಳನ್ನು ಬಿಟ್ಟು ಜಿಲ್ಲೆಯಲ್ಲಿ ೨೫೭೪ ಗ್ರಾಮಗಳಿದ್ದು ೩೩೦ ಗ್ರಾಪಂಗಳಿವೆ. ಅವಧಿ ಪೂರ್ಣಗೊಳಿಸದ ಗುಬ್ಬಿ ತಾಲೂಕು ಅಂಕಸAದ್ರ, ಮಂಚಲದೊರೆ ಹೊರತಾಗಿ ಬಹುತೇಕ ಗ್ರಾಪಂಗಳ ಆಡಳಿತಾವಧಿ ಪೂರ್ಣಗೊಂಡಿದ್ದು ಸದ್ಯ ಎಲ್ಲೆಡೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಪಂ ಸದಸ್ಯ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿ ಜವಾಬ್ದಾರಿ ಹೊತ್ತಿರುವ ಜಿಲ್ಲಾಧಿಕಾರಿ ಶುಭಕಲ್ಯಾಣ್ ಆಯಾ ತಾಲೂಕುಗಳ ತಹಸೀಲ್ದಾರ್‌ಗಳಿಗೆ ಒಂದು ಪಂಚಾಯಿತಿಯನ್ನು ಟಕ (ಯುನಿಟ್) ಆಗಿ ಪರಿಗಣಿಸಿ ಜನಸಂಖ್ಯೆ ಅನುಗುಣವಾಗಿ ಮೀಸಲು ಪಟ್ಟಿ ನಿಗದಿಪಡಿಸುವಂತೆ ಸೂಚಿಸಿದ್ದರು ಅದರಂತೆ ತಹಸೀಲ್ದಾರ್‌ಗಳು ಮೀಸಲು ಪಟ್ಟಿ ಸಿದ್ಧಪಡಿಸಿದ್ದಾರೆ. ಆದರೆ, ಪಟ್ಟಿ ಅಂತಿಮಗೊಳಿಸುವ ಮುನ್ನ ಸ್ಥಳಿಯ ಶಾಸಕರ ಒಪ್ಪಿಗೆಯನ್ನು ಎಲ್ಲಾ ತಹಸೀಲ್ದಾರ್‌ಗಳು ಪಡೆದಿರುವುದರ ಹಿಂದೆ ರಾಜಕೀಯ “ಪ್ರಭಾವ’ದ ಅನುಮಾನ ಕಂಡುಬAದಿದೆ.
ಇನ್ನೂ ಕೆಲವು ಕಡೆ ಮಾಜಿ ಶಾಸಕರು, ಆಡಳಿತ ಪಕ್ಷ ಕಾಂಗ್ರೆಸ್ ಮುಖಂಡರುಗಳು ಮೀಸಲು ಪಟ್ಟಿಯಲ್ಲಿ ಕೈಯಾಡಿಸಿದ್ದು ಇದು ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿದೆ. ಶೇ.೫೦ರಷ್ಟು ಮಹಿಳೆಯರಿಗೆ ಹಾಗೂ ಸಂವಿಧಾನದಲ್ಲಿ ಅವಕಾಶವಿರುವಂತೆ ಎಲ್ಲಾ ಜಾತಿ, ವರ್ಗಗಳಿಗೂ ಮೀಸಲಾತಿ ನಿಗದಿಪಡಿಸಿದೆ. ಮೀಸಲಾತಿ ನಿಗದಿಯಲ್ಲಿ ಬಗ್ಗೆ ಅಲ್ಲಲ್ಲಿ ಅಪಸ್ವರ ಇದ್ದೇ ಇದೆ ಆದರೆ, ಆಯಾ ಗ್ರಾಪಂ ವ್ಯಾಪ್ತಿಯನ್ನು ಟಕ ಎಂದು ಪರಿಗಣನೆಗೆ ತೆಗೆದುಕೊಂಡು ಮೀಸಲಾತಿ ಪ್ರಕಟಿಸಿರುವುದರಿಂದ ಆಕ್ಷೇಪಣೆಗಳಿಗೆ ಮನ್ನಣೆ ಸಿಗುವ ಸಾಧ್ಯತೆ ಕಡಿಮೆ ಎನ್ನಿಸಿದೆ.
ಗ್ರಾಪಂ ಸದಸ್ಯ ಸ್ಥಾನಕ್ಕೆ ಮೀಸಲಾತಿ ನಿಗದಿಯಲ್ಲಿ ಶಾಸಕರು, ಮಾಜಿ ಶಾಸಕರು, ಅಧಿಕಾರದಲ್ಲಿರುವವರ ಪ್ರಭಾವದ ನಡುವೆಯೂ ಸಂವಿಧಾನದ ಮೀಸಲಾತಿಯನ್ನು ಪಾಲಿಸಲು ಜಿಲ್ಲಾಡಳಿತವು ಸಾಕಷ್ಟು ಕಸರತ್ತು ನಡೆಸಿದೆ. ಜಿಲ್ಲಾಧಿಕಾರಿ ಶುಭಕಲ್ಯಾಣ್, ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ತಮ್ಮ ಪರಿಧಿಯಲ್ಲಿ ನಿಷ್ಪಕ್ಷಪಾತವಾಗಿ ಮೀಸಲು ನಿಗದಿಗೆ ಪ್ರಯತ್ನ ನಡೆಸಿರುವುರಾದರೂ ಅಲ್ಲಲ್ಲಿ ರಾಜಕೀಯ ಹಸ್ತಕ್ಷೇಪಗಳು ಅಲ್ಲಲ್ಲಿ ನುಸುಳಿವೆ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ತುಮಕೂರು ಗ್ರಾಮಾಂತರ, ಮಧುಗಿರಿ, ಕುಣಿಗಲ್ ಹಾಗೂ ತಿಪಟೂರು ಕ್ಷೇತ್ರಗಳ ಗ್ರಾಪಂ ಮೀಸಲಾತಿಯಲ್ಲಿ ಹೆಚ್ಚು ರಾಜಕೀಯ ಒತ್ತಡ ಕೆಲಸ ಮಾಡಿದೆ ಎಂಬ ಗುಸುಗುಸು ಇದೆ.
ತಾಪಂ, ಜಿಪಂ ಚುನಾವಣೆ ನಡೆಯೋದು ಡೌಟು: ಗ್ರಾಪಂ ಸದಸ್ಯ ಸ್ಥಾನಗಳಿಗೆ ಮೀಸಲಾತಿ ಅಂತಿಮ ಅಧಿಸೂಚನೆ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಚುನಾವಣೆ ಶ್ರೀದಲ್ಲಿಯೇ ಚುನಾವಣೆ ನಡೆಯುವ ಭರವಸೆ ಮೂಡಿಸಿದೆ. ಆದರೆ, ಚುನಾವಣೆ ನಡೆದು ೧೧ ವರ್ಷ ಕಳೆದಿರುವ ತಾಪಂ ಹಾಗೂ ಜಿಪಂ ಚುನಾವಣೆ ನಡೆಯುವುದು ಅನುಮಾನ ಎನ್ನಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಮೂರುವರೆ ವರ್ಷ ಅಧಿಕಾರವಧಿ ಪೂರೈಸಿದ್ದು ಇನ್ನೇನು ಕೆಲವೇ ತಿಂಗಳು ಕಳೆದರೆ ವಿಧಾನಸಭೆ ಚುನಾವಣೆಗೆ ತಾಲೀಮು ಆರಂಭವಾಗಲಿದೆ.
ವಿಧಾನಸಭೆ ಚುನಾವಣೆ ಮುಂದಿಟ್ಟುಕೊAಡು ಪಕ್ಷದ ಚಿನ್ಹೆಯಲ್ಲಿಯೇ ನಡೆಯುವ ತಾಪಂ ಹಾಗೂ ಜಿಪಂ ಚುನಾವಣೆ ನಡೆಸುವ ಗೋಜಿಗೆ ಯಾವ ರಾಜಕೀಯ ಪಕ್ಷಗಳು ಆಸಕ್ತಿ ತೋರಲಾರವು. ಆಡಳಿತ ಪಕ್ಷದ ಶಾಸಕರೂ ಚುನಾವಣೆಗೆ ಹಿಂದೇಟು ಹಾಕುವುದರಿಂದ ತಾಪಂ, ಜಿಪಂ ಸದಸ್ಯ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಗಳಿಗೆ ನಿರಾಸೆಯಾಗಲಿದೆ.

(Visited 1 times, 1 visits today)