BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸ್ವಾತಂತ್ರೊeತ್ಸವದ ಸಂಭ್ರಮಕ್ಕೆ ರೋಟರಿ ಸೇವಾ ಸ್ಪರ್ಶ
  • ಬೆಂಕಿಗೆ ಸುಟ್ಟು ಬೂದಿಯಾದ ರೇಷ್ಮೆ ಬೆಳೆಗಾರನ ಬದುಕು
  • ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು
  • ಬರ ಪರಿಸ್ಥಿತಿ: ಪರ್ಯಾಯ ಬೆಳೆಗಳನ್ನು ಬೆಳೆಯಲು ಸಲಹೆ
  • ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ
  • ಮಕ್ಕಳ ಉತ್ತಮ ಭವಿಷ್ಯವೇ ದೇಶದ ನಿಜವಾದ ಸ್ವಾತಂತ್ರ: ಕೃಷ್ಣಪ್ಪ
  • ಭಗತ್‌ಕ್ರಾಂತಿ ಸೇನೆಯಿಂದ ಭಕ್ತಿಯ ಪಂಜಿನ ಮೆರವಣಿಗೆ
  • ವಿಕಸಿತ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ನಿರ್ಣಾಯಕ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬೆಂಕಿಗೆ ಸುಟ್ಟು ಬೂದಿಯಾದ ರೇಷ್ಮೆ ಬೆಳೆಗಾರನ ಬದುಕು
news

ಬೆಂಕಿಗೆ ಸುಟ್ಟು ಬೂದಿಯಾದ ರೇಷ್ಮೆ ಬೆಳೆಗಾರನ ಬದುಕು

ದುಷ್ಕರ್ಮಿಗಳಿಂದ ರೇಷ್ಮೆ ಶೆಡ್ಡಿಗೆ ಅಗ್ನಿ, ಸೀಮೆ ಹಸುವಿಗೂ ಗಾಯ
By News Desk BenkiyabaleUpdated:August 17, 2026 5:05 pm

ಹುಳಿಯಾರು: ವರ್ಷಗಳಿಂದ ರಾಗಿ, ಸಾಮೆ ಬೆಳೆಯುತ್ತಿದ್ದ ನೆಲದಲ್ಲಿ ಭರವಸೆಯ ಬೆಳೆಯಾಗಿ ರೇಷ್ಮೆ ಕೃಷಿ ನೆಚ್ಚಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದ ರೈತನೊಬ್ಬನ ಶ್ರಮದ ಫಲವನ್ನು ದುಷ್ಕರ್ಮಿಗಳು ಬೆಂಕಿಗಾಹುತಿ ಮಾಡಿದ ಅಮಾನವೀಯ ಘಟನೆ ಹುಳಿಯಾರು ಹೋಬಳಿಯ ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯ ಪೋಚಕಟ್ಟೆ ಬಳಿ ನಡೆದಿದೆ.
ದೊಡ್ಡಬಿದರೆ ಸರ್ವೇ ನಂಬರ್ ೭೭ ರಲ್ಲಿರುವ ರೈತ ಶಿವಣ್ಣ ಎಂಬುವರಿಗೆ ಸೇರಿದ ೪೧ ಅಡಿ ಉದ್ದ, ೨೫ ಅಡಿ ಅಗಲದ ರೇಷ್ಮೆ ಹುಳು ಸಾಕಣೆ ಶೆಡ್ಡಿಗೆ ದುಷ್ಟರು ಬೆಂಕಿ ಇಟ್ಟಿದ್ದಾರೆ. ಕ್ಷಣಾರ್ಧದಲ್ಲಿ ಹಬ್ಬಿದ ಬೆಂಕಿಯ ಕೆನ್ನಾಲೆಗೆಗೆ ರೇಷ್ಮೆ ಶೆಡ್‌ನ ಮುಕ್ಕಾಲು ಭಾಗ ಸಂಪೂರ್ಣ ಭಸ್ಮವಾಗಿದೆ. ಶೆಡ್‌ನ ಮುಂಭಾಗದಲ್ಲಿ ಕಟ್ಟಲಾಗಿದ್ದ ಸೀಮೆ ಹಸುವಿಗೂ ಬೆಂಕಿ ತಗಲಿದ್ದು, ಹಸು ತೀವ್ರವಾಗಿ ಗಾಯಗೊಂಡಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ವಾಹನ ಆಗಮಿಸುವಷ್ಟರಲ್ಲಾಗಲೇ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಈ ಬೆಂಕಿ ದುರಂತದಿAದಾಗಿ ಶೆಡ್‌ನಲ್ಲಿದ್ದ ಔಷಧಿ, ಚಾಫ್ ಕಟರ್, ಚಿಕ್ಕ ಕಟರ್, ಕಡ್ಡಿ ಕಟ್ ಮಾಡುವ ಯಂತ್ರ, ಚಂದ್ರಿಕೆಗಳು, ಹುಳು ಮೇಯಿಸುವ ಸ್ಟಾ÷್ಯಂಡ್ ಹಾಗೂ ಟ್ರೇಗಳು ಸಂಪೂರ್ಣ ಸುಟ್ಟು ಬೂದಿಯಾಗಿವೆ. ಕೈಗೆ ಬಂದ ಫಸಲಿನ ಬೆನ್ನಲ್ಲೇ ಸಂಭವಿಸಿದ ಈ ದುರಂತ ರೈತನನ್ನು ತೀವ್ರ ಆಘಾತಕ್ಕೀಡುಮಾಡಿದೆ.
ಘಟನಾ ಸ್ಥಳಕ್ಕೆ ಹುಳಿಯಾರು ಪೊಲೀಸ್ ಠಾಣೆಯ ಪಿಎಸ್‌ಐ ರೇಣುಕಾ ಯಾದವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಕೃಷ್ಣಮೂರ್ತಿ ಅವರು ಸ್ಥಳ ಪರಿಶೀಲನೆ ನಡೆಸಿ, ಸಂಕಷ್ಟದಲ್ಲಿರುವ ರೈತನಿಗೆ ಇಲಾಖೆಯ ವತಿಯಿಂದ ಸಾಧ್ಯವಾಗುವ ಎಲ್ಲಾ ರೀತಿಯ ಗರಿಷ್ಠ ನೆರವು ಮತ್ತು ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.
ಶ್ರಮಜೀವಿಯೊಬ್ಬನ ಹೊಟ್ಟೆಮೇಲೆ ಹೊಡೆದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಸಂಕಷ್ಟದಲ್ಲಿರುವ ಶಿವಣ್ಣ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

(Visited 1 times, 1 visits today)
Chikkanayakanahalli crime kannada news karnataka local news tumakur tumkur ಚಿಕ್ಕನಾಯಕನಹಳ್ಳಿ ತುಮಕೂರು: ಹುಳಿಯಾರು
Previous Articleತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು
Next Article ಸ್ವಾತಂತ್ರೊeತ್ಸವದ ಸಂಭ್ರಮಕ್ಕೆ ರೋಟರಿ ಸೇವಾ ಸ್ಪರ್ಶ
News Desk Benkiyabale

Related Posts

ಸ್ವಾತಂತ್ರೊeತ್ಸವದ ಸಂಭ್ರಮಕ್ಕೆ ರೋಟರಿ ಸೇವಾ ಸ್ಪರ್ಶ

August 17, 2026 5:07 pm news

ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು

August 15, 2026 5:56 pm news

ಬರ ಪರಿಸ್ಥಿತಿ: ಪರ್ಯಾಯ ಬೆಳೆಗಳನ್ನು ಬೆಳೆಯಲು ಸಲಹೆ

August 15, 2026 5:33 pm news
ತಾಜಾ ಸುದ್ಧಿಗಳು
news

ಸ್ವಾತಂತ್ರೊeತ್ಸವದ ಸಂಭ್ರಮಕ್ಕೆ ರೋಟರಿ ಸೇವಾ ಸ್ಪರ್ಶ

August 17, 2026 5:07 pm
news

ಬೆಂಕಿಗೆ ಸುಟ್ಟು ಬೂದಿಯಾದ ರೇಷ್ಮೆ ಬೆಳೆಗಾರನ ಬದುಕು

August 17, 2026 5:05 pm
news

ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು

August 15, 2026 5:56 pm
news

ಬರ ಪರಿಸ್ಥಿತಿ: ಪರ್ಯಾಯ ಬೆಳೆಗಳನ್ನು ಬೆಳೆಯಲು ಸಲಹೆ

August 15, 2026 5:33 pm
news

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ

August 15, 2026 5:32 pm
news

ಮಕ್ಕಳ ಉತ್ತಮ ಭವಿಷ್ಯವೇ ದೇಶದ ನಿಜವಾದ ಸ್ವಾತಂತ್ರ: ಕೃಷ್ಣಪ್ಪ

August 15, 2026 5:30 pm
Our Youtube Channel
Our Picks

ಸ್ವಾತಂತ್ರೊeತ್ಸವದ ಸಂಭ್ರಮಕ್ಕೆ ರೋಟರಿ ಸೇವಾ ಸ್ಪರ್ಶ

August 17, 2026 5:07 pm

ಬೆಂಕಿಗೆ ಸುಟ್ಟು ಬೂದಿಯಾದ ರೇಷ್ಮೆ ಬೆಳೆಗಾರನ ಬದುಕು

August 17, 2026 5:05 pm

ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು

August 15, 2026 5:56 pm

ಬರ ಪರಿಸ್ಥಿತಿ: ಪರ್ಯಾಯ ಬೆಳೆಗಳನ್ನು ಬೆಳೆಯಲು ಸಲಹೆ

August 15, 2026 5:33 pm

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ

August 15, 2026 5:32 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸ್ವಾತಂತ್ರೊeತ್ಸವದ ಸಂಭ್ರಮಕ್ಕೆ ರೋಟರಿ ಸೇವಾ ಸ್ಪರ್ಶ

By News Desk BenkiyabaleAugust 17, 2026 5:07 pm

ಕೊರಟಗೆರೆ: ಸ್ವಾತಂತ್ರೊ÷್ಯÃತ್ಸವದ ಸಂಭ್ರಮದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಮೂಲಕ ಕೊರಟಗೆರೆ ರೋಟರಿ ಸಂಸ್ಥೆ ಅರ್ಥಪೂರ್ಣವಾಗಿ ಸಹಭಾಗಿತ್ವ ವಹಿಸಿತು. ಕೊರಟಗೆರೆಯಲ್ಲಿ…

ಬೆಂಕಿಗೆ ಸುಟ್ಟು ಬೂದಿಯಾದ ರೇಷ್ಮೆ ಬೆಳೆಗಾರನ ಬದುಕು

August 17, 2026 5:05 pm

ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು

August 15, 2026 5:56 pm

ಬರ ಪರಿಸ್ಥಿತಿ: ಪರ್ಯಾಯ ಬೆಳೆಗಳನ್ನು ಬೆಳೆಯಲು ಸಲಹೆ

August 15, 2026 5:33 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.