ತುಮಕೂರು: ನಿಮ್ಮ ಅಭಿರುಚಿಯನ್ನು, ಪ್ರತಿಭೆಯನ್ನು ನೀವೇ ಅರಿತುಕೊಂಡು ಅದರಲ್ಲಿ ಮುಂದುವರೆಯಿರಿ ಹಾಗೂ ನಿಮ್ಮ ಪ್ರತಿಭೆಯನ್ನು ಪ್ರಪಂಚಕ್ಕೆ ತೋರಿಸಿ. ಅಲ್ಲದೆ, ಪ್ರತಿ ಹಂತದಲ್ಲೂ ನಮಗೆ ಮಾರ್ಗದರ್ಶನ ನೀಡುವ ಗುರುಗಳನ್ನು ಸದಾ ಗೌರವಿಸಬೇಕು. ಜ್ಞಾನಾರ್ಜನೆ – ನೈತಿಕ ಮೌಲ್ಯಗಳೇ ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿ ಎಂದು ಗಾಯಕಿ ಹಾಗೂ ನಟಿ ಸುಮಾ ಶಾಸ್ತಿç ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ವತಿಯಿಂದ ೨೦೨೬-೨೭ನೇ ಸಾಲಿನ ವಿವಿಧ ಘಟಕಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವಾದ ಅಭ್ಯುದಯ ೨೦೨೬-೨೭ ಕಾರ್ಯಕ್ರಮವನ್ನು ಸೆ. ೨ ಬುಧವಾರದಂದು ಉದ್ಘಾಟಿಸಿ ಮಾತನಾಡಿದರು.
ತುಮಕೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿಗಳಾದ ನರಸಿಂಹಮೂರ್ತಿ ಅವರು ಮಾತನಾಡಿ, ಹಿಂದಿನ ದಿನಗಳಲ್ಲಿ ಕಾಲೇಜಿನ ಒಳಗೆ ಬರುವುದೇ ಒಂದು ದೊಡ್ಡ ಸಾಧನೆಯ ವಿಚಾರವಾಗಿತ್ತು, ಆದರೆ ಇಂದು ನಿಮಗೆ ಅದ್ದೂರಿ ಸ್ವಾಗತ ಸಿಕ್ಕಿದ್ದು ಐತಿಹಾಸಿಕ ಕ್ಷಣಗಳಾಗಿವೆ. ವಿದ್ಯಾರ್ಥಿಗಳು ದೇಶವನ್ನು ಸದೃಢವಾಗಿಸಲು ಒಳ್ಳೆಯ ಪ್ರತಿಭೆಗಳಾಗಿ ಹೊರಹೊಮ್ಮಬೇಕು ಮತ್ತು ಕಲಿಕೆಯಲ್ಲಿ ಅತ್ಯಂತ ಉತ್ಕöÈಷ್ಟವಾಗಿ ವಿದ್ಯೆಯನ್ನು ಕಲಿತು ನಿಮ್ಮ ಸನ್ಮಾರ್ಗವನ್ನು ನೀವೇ ಕಂಡುಕೊಳ್ಳುವಷ್ಟು ಬೆಳೆದು ಜ್ಞಾನವನ್ನು ಅರ್ಜನೆ ಮಾಡಿಕೊಳ್ಳಬೇಕು ಎಂದರು.
ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ ಎಚ್. ಎಸ್. ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಒಳಗೂ ದೀಪ ಉರಿಯುತ್ತಿರುತ್ತಿದ್ದು, ಅದಕ್ಕೆ ಜ್ಞಾನವೆಂಬ ಎಣ್ಣೆಯನ್ನು ಹಾಕಿ ಆ ದೀಪವನ್ನು ಬೆಳಗಿ ಅಜ್ಞಾನ, ಅಹಿಂಸೆ ಹಾಗೂ ಅಧರ್ಮಗಳನ್ನು ಹೋಗಲಾಡಿಸಲು ಸಹ ಕಾರಿಯಾಗುವಂತೆ ನಡೆದುಕೊಳ್ಳಬೇಕು ಎಂದರು.
ಕಾಲೇಜಿನಲ್ಲಿ ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ಸಾಂಸ್ಕöÈತಿಕ ಚಟುವಟಿಕೆಗಳಲ್ಲಿ ಭಾಗವಹಿ ಸುವುದರಿಂದ ನಿಮ್ಮ ಶಿಸ್ತು ಮತ್ತು ಪ್ರತಿಭೆ ಅನಾ ವರಣಗೊಳ್ಳುತ್ತದೆ, ಆದ್ದರಿಂದ ಕಾಲೇಜಿನಲ್ಲಿ ಇರುವವರೆಗೂ ಸಜ್ಜನರಾಗಿ ಇರಬೇಕು. ಮಕ್ಕಳು ಜವಾಬ್ದಾರಿಯುತವಾಗಿ ಬೆಳೆಯಲು ಮತ್ತು ನೈತಿಕತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪೋ ಷಕರು ಹಾಗೂ ಶಿಕ್ಷಕರ ಜವಾಬ್ದಾರಿ ಹೆಚ್ಚಿದ್ದು, ಮಾನವೀಯ ಮೌಲ್ಯಗಳ ಜೊತೆಗೆ ಸಹಾಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಗಳಾದ ಪ್ರೊ. ಎಚ್. ನಾಗಭೂಷಣ್ ಅವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ದಾಕ್ಷಾಯಣಿ. ಜಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕöÈತಿಕ ಚಟುವಟಿಕೆಗಳ ಘಟಕದ ಸಂಚಾಲಕರಾದ ಡಾ. ಎಸ್. ಶಿವಣ್ಣ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಹೆಚ್. ಆರ್. ರೇಣುಕಾ ಅವರು ನಿರೂಪಿಸಿದರು. ಉಪ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಸುದೀಪ್ ಕುಮಾರ್. ಆರ್. ಡಾ. ಶೋಭಾ ಸಿ., ಪ್ರೊ. ಪಲ್ಲವಿ ಕುಸುಗಲ್ಲ ಉಪಸ್ಥಿತರಿದ್ದರು.

(Visited 1 times, 1 visits today)