ತುಮಕೂರು: ಕಾಡುಗೊಲ್ಲರು ಮೂಲತಃ ಬುಡಕಟ್ಟು ಸಮುದಾಯದವರಾಗಿದ್ದು, ವೈದಿಕ ಅಥವಾ ಶಿಷ್ಟ ಸಂಸ್ಕೃತಿಯ ಪ್ರಭಾವದಿಂದ ತನ್ನ ಮೂಲ ಸಂಸ್ಕೃತಿ ಹಾಗೂ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಮೂಲ ಸಂಸ್ಕೃತಿ ರಕ್ಷಣೆ ಮಾಡಲು ಕೃಷ್ಣ ಜಯಂತಿಗಿAತಲೂ ಹೆಚ್ಚಾಗಿ, ಕಳೆದುಹೋಗುತ್ತಿರುವ ಸಮುದಾಯದ ಮೂಲ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಬಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷ ರಾದ ಡಾ.ದೊಡ್ಡಮಲ್ಲಯ್ಯ ಕರೆ ನೀಡಿದರು.
ಕಾಡುಗೊಲ್ಲ ಸಮುದಾಯವನ್ನ ಶೈಕ್ಷಣಿಕ, ರಾಜಕೀಯ, ಸಾಮಾಜಿಕವಾಗಿ ಮುಂದೆ ತರಲು ಮಂಗಳವಾರ ನಗರದ ಖಾಸಗಿ ಸ್ಥಳದಲ್ಲಿ ಸಭೆ ನಡೆಸಿ ಮಾತನಾಡಿದ ಡಾ.ದೊಡ್ಡಮಲ್ಲಯ್ಯ ಕಾಡುಗೊಲ್ಲ ಸಮುದಾಯದ ಬುಡಕಟ್ಟು ವೀರಗಾರರಾದ ಎತ್ತಪ್ಪ, ಜುಂಜಪ್ಪ, ಕಾಟಪ್ಪ, ಮಾರಪ್ಪ, ಮೈಲಣ್ಣ, ಚಿಕ್ಕಣ್ಣ, ಈರಪ್ಪ ಸೇರಿದಂತೆ ಅನೇಕ ವೀರಗಾರರ ಜಯಂತಿಯನ್ನು ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದ್ದು ಹೀಗಾಗಿ ಕಾಡುಗೊಲ್ಲರು ಕೃಷ್ಣ ಜಯಂತಿಯನ್ನು ತೊರೆಯಬೇಕು ಎಂದು ಕರೆ ನೀಡಿದರು.
೨೦೧೮ರಲ್ಲಿ ‘ಕಾಡುಗೊಲ್ಲ’ ಎಂದು ಗುರುತಿಸಿ ಕೊಂಡಿದ್ದರೂ, ಪ್ರವರ್ಗ-೧ಕ್ಕೆ ಒಳಪಡುವ ಕೇಂದ್ರ ಒಬಿಸಿ ಪಟ್ಟಿ, ಅಲೆಮಾರಿ ಪಟ್ಟಿ ಹಾಗೂ ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿ ಸೌಲಭ್ಯಗಳು ಇನ್ನೂ ದೊರೆತಿಲ್ಲ, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಸೌಲಭ್ಯ ಪಡೆಯಲು ಕಾಡುಗೊಲ್ಲ ಪ್ರಮಾಣಪತ್ರ ಕಡ್ಡಾಯವಾಗಿದ್ದರೂ, ಅಧಿಕಾರಿಗಳು ಅದನ್ನು ನೀಡಲು ವಿಳಂಬ ಮಾಡುತ್ತಿರುವುದರಿಂದ ಆಡಳಿತಾತ್ಮಕ ಸಮಸ್ಯೆ ಎದುರಾಗಿದೆ ವಿವಿಧ ಸಂಘಟನೆಗಳು ತಮ್ಮ ಕಾರ್ಯಗಳನ್ನು ಮುಂದುವರಿಸುತ್ತಲೇ, ಸಮುದಾಯದ ಹಕ್ಕುಗಳು ಮತ್ತು ಅಭಿವೃದ್ಧಿಗೆ ಸಂಬAಧಿಸಿದ ವಿಷಯಗಳಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ, ಸಮುದಾಯವು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು, ಸರ್ಕಾರವು ತಕ್ಷಣವೇ ಸ್ಪಂದಿಸಿ ಜಾತಿ ಪ್ರಮಾಣಪತ್ರದ ಸಮಸ್ಯೆ ಬಗೆಹರಿಸುವುದರ ಜೊತೆಗೆ ಅರ್ಹ ಸೌಲಭ್ಯಗಳನ್ನು ಒದಗಿಸಬೇಕೆಂದು ಡಾ.ದೊಡ್ಡಮಲ್ಲಯ್ಯ ಒತ್ತಾಯಿಸಿದ್ದಾರೆ.
ಅಭಿವೃದ್ಧಿ ನಿಗಮಕ್ಕೆ ಅನುದಾನ: ಸಮುದಾಯದ ನಿಗಮಕ್ಕೆ ರೂ. ೧೦೦ ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿ, ಕಡು ಬಡವರಾಗಿರುವ ಕಾಡುಗೊಲ್ಲರ ಸಮಗ್ರ ಅಭಿವೃದ್ಧಿಗೆ ನೆರವಾಗಬೇಕು, ಭಕ್ತವತ್ಸಲ ಸಮಿತಿಯ ಸಿಫಾರಸಿನಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಡುಗೊಲ್ಲರಿಗೆ ಸ್ಪರ್ಧಿಸಲು ಅವಕಾಶ ಒದಗಿಸಬೇಕು, ೧೯೩೧ ರಿಂದ ಯಾದವ ಸಂಘದಿAದಾಗಿ ಕಾಡುಗೊಲ್ಲ ಅಸ್ಮಿತೆಗೆ ಧಕ್ಕೆಯಾಗಿದ್ದು, ಸಮುದಾಯದಲ್ಲಿ ವಿದ್ಯಾವಂತರ ಕೊರತೆಯಿಂದಾಗಿ ಹಲವು ದಶಕಗಳ ಕಾಲ ಹಿನ್ನಡೆ ಅನುಭವಿಸಲಾಗಿತ್ತು. ೨೦೧೮ ರಲ್ಲಿ ಜನಾಂಗದ ಪುನರ್ನಿರ್ಮಾಣಕ್ಕೆ ಯಶಸ್ವಿ ಹೋರಾಟ ನಡೆಸಲಾಗಿದ್ದು, ಈಗ ಸರ್ಕಾರವು ಸಮುದಾಯವನ್ನು ಅಲೆಮಾರಿ/ಅರೆ ಅಲೆಮಾರಿ ಪಟ್ಟಿಗೆ ಹಾಗೂ ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಂಗಾಧರ್ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಕಾಡುವಲ್ಲ ಬುಡಕಟ್ಟು ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾರೋಗೆರೆ ಮಾರಣ್ಣ, ದೊಡ್ಡಯ್ಯ, ದೇವರಹಳ್ಳಿ ನಾಗಣ್ಣ, ತಿಪ್ಪಯ್ಯ ,ದೊಡ್ಡ ವೀರಯ್ಯ, ಸದಾಶಿವು, ರಾಮಕೃಷ್ಣ ಚಂಗವಾರ, ಜಯಣ್ಣ ದೇವನಹಟ್ಟಿ, ಅಜ್ಜಣ್ಣ, ಈಶ್ವರಪ್ಪ, ಲಕ್ಷ್ಮಣ ಸೇರಿದಂತೆ ಕಾಡುಗೊಲ್ಲ ಸಮುದಾಯ ಇತರರು ಉಪಸ್ಥಿತರಿದ್ದರು.

(Visited 1 times, 1 visits today)