ತುಮಕೂರು: ಶಿಲ್ಪಕಲೆಗಳಿಂದ ನಾವು ಇತಿಹಾಸವನ್ನು ಸ್ಪಷ್ಟವಾಗಿ ಅರ್ಥೆÊಸಿಕೊಳ್ಳಬಹುದು. ಧಾರ್ಮಿಕ ಆಚಾರ ವಿಚಾರಗಳು ಹಾಗೂ ಹಿಂದೆ ನಡೆದ ಪ್ರಮುಖ ಐತಿಹಾಸಿಕ ಘಟನೆಗಳನ್ನು ನಮ್ಮ ನೆನಪಿನಲ್ಲಿ ಉಳಿಸಿಕೊಳ್ಳುವಲ್ಲಿ ಇವು ಪ್ರಮುಖ ಪಾತ್ರವಹಿಸುತ್ತವೆ. ಇತಿಹಾಸವನ್ನು ಮರು ನಿರ್ಮಾಣ ಮಾಡುವಲ್ಲಿ ಶಿಲ್ಪಿಗಳ ಶ್ರಮ ಹಾಗೂ ಪಾತ್ರ ಅತ್ಯಂತ ಮಹತ್ವವಾದದ್ದು ಎಂದು ಮಾಜಿ ವಿಧಾನಪರಿಷತ್ ಸದಸ್ಯರು ಹಾಗೂ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ. ಆರ್. ಹುಲಿನಾಯ್ಕರ್ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತುಮಕೂರು ವಿವಿ ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಯೋಗದಲ್ಲಿ ಸೆ. ೦೭, ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ ಹಿರಿಯ ಶಿಲ್ಪಿ ವಿಶ್ವನಾಥ್ ರವರ ಏಕವ್ಯಕ್ತಿ ಶಿಲ್ಪಕಲಾ ಕೃತಿಗಳ ಪ್ರದರ್ಶನ “ಕಲ್ಲರಳಿ ಹೂವಾಗಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಬ್ಬ ಶಿಲ್ಪಿ ಕೇವಲ ಕಲ್ಲು ಕೆತ್ತುವವನಷ್ಟೇ ಅಲ್ಲ, ಆತ ಅಚ್ಚುಕಟ್ಟಾದ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಾನೆ. ಹೀಗಾಗಿ ಇಂತಹ ಪ್ರತಿಭಾವಂತ ಶಿಲ್ಪಿಗಳ ನೆರವಿಗೆ ಸರ್ಕಾರಗಳು ರಾಜಾಶ್ರಯದೋಪಾದಿಯಲ್ಲಿ ಧಾವಿಸಿ ಸೂಕ್ತ ಸಹಕಾರ ನೀಡಬೇಕು ಎಂದರು.
ಅಯೋಧ್ಯೆಯ ರಾಮಲಲ್ಲಾ ಮೂರ್ತಿ ನಿರ್ಮಾತೃ ಹಾಗೂ ಹಿರಿಯ ಶಿಲ್ಪಿ ಗಣೇಶ್ ಎಲ್. ಭಟ್ ಮಾತನಾಡಿ, ಪ್ರಾಚೀನ ಕಾಲದ ದೇವಾಲ ಯಗಳು ಕೇವಲ ಪೂಜಾ ಸ್ಥಳಗಳಾಗಿರದೆ ವಿಶ್ವವಿ ದ್ಯಾನಿಲಯಗಳ ಜೊತೆಗೆ ಪರಿಣಾಮಕಾರಿ ಮಾಧ್ಯಮಗಳಾಗಿಯೂ ಕಾರ್ಯನಿರ್ವಹಿಸಿದ್ದವು.
ನಾಡಿಗೆ ನಮ್ಮ ರಾಜ್ಯದ ಕಲೆ ಹಾಗೂ ಶಿಲ್ಪಕಲೆಯ ಕೊಡುಗೆ ಅಪಾರವಾಗಿದ್ದು, ಆ ಕಲೆಗಳನ್ನು ರೂಪಿಸಿದ ರಾಜರ ಮತ್ತು ಶಿಲ್ಪಿಗಳ ಕುರಿತು ಆಳವಾದ ಅಧ್ಯಯನಗಳು ನಡೆಯಬೇಕು. ಭಾರತದಲ್ಲಿ ನಮ್ಮ ಕರ್ನಾಟಕ ರಾಜ್ಯದ ಶಿಲ್ಪಕಲೆ ಅತ್ಯಂತ ಶ್ರೇಷ್ಠವಾದುದು. ಇತ್ತೀಚಿನ ದಿನಗಳಲ್ಲಿ ಇಂತಹ ಶ್ರೇಷ್ಠ ಕಲೆಗಳಿಗೆ ದೊರೆಯುತ್ತಿರುವ ಸಹಕಾರ ಮತ್ತು ಪ್ರೋತ್ಸಾಹ ಕಡಿಮೆಯಾಗುತ್ತಿರುವುದು ಕಳವಳಕಾರಿ ಎಂದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ರಮೇಶ್ ಎಂ.ಸಿ. ಮಾತನಾಡಿ, ಕಲೆ ಎಂದರೆ ಕೇವಲ ಕಾಗದದ ಮೇಲೆ ಚಿತ್ರ ರಚಿಸುವುದು ಅಥವಾ ಶಿಲೆಗೆ ರೂಪ ನೀಡುವುದು ಮಾತ್ರವಲ್ಲ, ನಮ್ಮ ನಡೆ, ನುಡಿ ಮತ್ತು ಆಚಾರ ವಿಚಾರಗಳ ಅರಿತು ಪಾಲಿಸುವುದೇ ನಿಜವಾದ ಕಲೆ. ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಯುವುದು ಅತ್ಯಂತ ಪ್ರಮುಖವಾದದ್ದು ಎಂದರು.
ಇತಿಹಾಸ ಮತ್ತು ಪುರಾತತ್ವ ಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ಎಲ್.ಪಿ. ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯರಾದ ಶಿವಣ್ಣ ಎಂ., ಹಿರಿಯ ಪ್ರಾಧ್ಯಾಪಕರಾದ ಡಾ. ಎಂ. ಕೊಟ್ರೇಶ್, ಬೆಂಗಳೂರಿನ ಅಭಿಯಂತರರಾದ ರಮೇಶ್ ಸಿ.ಕೆ., ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಈಶ್ವರ್ ಮಿರ್ಜಿ ಇದ್ದರು.
(Visited 1 times, 1 visits today)



