ತುಮಕೂರು: ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ,ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ. ಆದರೆ ರಾಜಕೀಯವಾಗಿ ಮುಂದುವರೆಯಬೇಕಾದರೆ ಇತರೆ ಸಮುದಾಯಗಳ ಬೆಂಬಲದ ಅಗತ್ಯವಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತುಮಕೂರು ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘ(ರಿ)ವತಿಯಿAದ ಆಯೋಜಿಸಿದ್ದ ತುಮಕೂರು ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಸಮಾವೇಶ ಮತ್ತು ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಧರ್ಮಛತ್ರ, ಹಾಸ್ಟಲ್‌ಗಳು ಮತ್ತು ಮಠಗಳಲ್ಲಿ ಓದಿ ಸರಕಾರಿ ಉದ್ಯೋಗ ಪಡೆದು ಸಮಾಜದಲ್ಲಿ ವೀರಶೈವಲಿಂಗಾಯಿತ ಸಮಾಜ ತಮ್ಮ ಆಸ್ಥಿತ್ವವನ್ನು ಉಳಿಸಿಕೊಂಡಿದೆ.ಆದರೆ ರಾಜಕೀಯವಾಗಿ ಬೆಳೆಯಬೇಕಾದರೆ, ಅದರಲ್ಲಿಯೂ ವೀರಶೈವ ಲಿಂಗಾಯಿತರು ಕಡಿಮೆ ಸಂಖ್ಯೆಯಲ್ಲಿರುವ ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಅಧಿಕಾರ ಸಿಗಬೇಕಾದರೆ ಓಬಿಸಿ, ಎಸ್ಸಿ,ಎಸ್ಟಿ ಸಮುದಾಯಗಳ ಜೊತೆಗೆ ಹೊಂದಿಕೊAಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಬಸವರಾಜು ಮಾತನಾಡಿ,ಕರ್ನಾಟಕದ ಅಭಿವೃದ್ದಿ ಪಥದಲ್ಲಿದ್ದರೆ, ಅದಕ್ಕೆ ಮಠ ಮಾನ್ಯಗಳ ಕೊಡುಗೆ ಆಪಾರ.ಮಠ ಮಾನ್ಯಗಳು ಜಾತಿ, ಧರ್ಮ ನೋಡದೆ ಎಲ್ಲಾ ವರ್ಗದ ಮಕ್ಕಳಿಗೆ ಶಿಕ್ಷಣ ನೀಡಿದ ಪರಿಣಾಮ ಇಂದು ಕರ್ನಾಟಕ ಜಿ.ಎಸ್.ಟಿ ಸಂಗ್ರಹಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಜಿಡಿಪಿ ಬೆಳವಣಿಗೆಯಲ್ಲಿ ಐದನೇ ಸ್ಥಾನದಲ್ಲಿದೆ.ನಮ್ಮ ಸರಕಾರಿ ನೌಕರರ ಸಂಘದಿAದ ಅತಿ ಹೆಚ್ಚು ಅಂಕ ಪಡೆದ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡುತ್ತಾ ಬಂದಿದ್ದು,ಈ ವರ್ಷ ೩೫೦೦ ಜನರಿಗೆ ಅರಮನೆ ಮೈದಾನದಲ್ಲಿ ಪ್ರತಿಭಾನ್ವಿತರನ್ನು ಅಭಿನಂದಿಸಲಾಗಿದೆ. ಇದಕ್ಕಾಗಿ ನಾಲ್ಕು ಕೋಟಿ ರೂಗಳನ್ನು ಸಂಘದಲ್ಲಿ ಮೀಸಲಿರಿಸಲಾಗಿದೆ.ಮಕ್ಕಳು ಮತ್ತು ಪೋಷಕರು ಕೇವಲ ಅಂಕಗಳಿಗೆ ಮಹತ್ವ ನೀಡದೆ, ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಬೇಕು.ವೈದ್ಯಕೀಯ ಶಿಕ್ಷಣ, ಇಂಜಿನಿಯರಿAಗ್, ಎಂ.ಬಿ.ಎ ಇನ್ನಿತರ ಸ್ನಾತಕೋತ್ತರ ಪದವಿ ಪಡೆದವರು ಭಯೋತ್ಪಾಧಕರಾಗಿರುವುದನ್ನು ನೋಡುತ್ತಿದ್ದೇವೆ. ಹಾಗಾಗಿ ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದರು.
ಪ್ರಸ್ತಾವಿಕ ನುಡಿಗಳನ್ನಾಡಿದ ತುಮಕೂರು ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ಜೋತಿಪ್ರಕಾಶ್.ಟಿ.ಜೆ.,ಸರಕಾರಿ ಮತ್ತು ಖಾಸಗಿ ಕ್ಷೇತ್ರದ ನೌಕರರಿಗೆ ಒಂದು ಇತಿ ಮಿತಿ ಇದೆ.ಹಾಗಾಗಿ ನಮ್ಮ ವ್ಯಾಪ್ತಿಯೊಳಗೆ ಕಳೆದ ೧೫ ವರ್ಷಗಳಿಂದಲೂ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ.ಕೊವೀಡ್ ಸಂದರ್ಭ ಹೊರತು ಪಡಿಸಿದರೆ ಉಳಿದ ವರ್ಷಗಳಲ್ಲಿ ಪ್ರತಿಭಾವಂತರನ್ನು ಗುರುತಿಸಿ ಅಭಿನಂದಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ.ಮಠ ಮಾನ್ಯಗಳಿಗೆ, ಬಡ ಮಕ್ಕಳ ಓದಿಗೆ ಕೈಲಾದ ನೆರವು ನೀಡಲಾಗುತ್ತಿದೆ. ಸಮುದಾಯದ ಜನಪ್ರತಿನಿಧಿಗಳು ಈ ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.
ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿಅಖಿಲ ಭಾರತ ವೀರಶೈವಲಿಂಗಾಯಿತ ಮಹಾಸಭಾ ಮಹಿಳಾ ರಾಷ್ಟಿçÃಯ ಅಧ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬೆಳ್ಳಾವೆಯ ಶ್ರೀಕಾರದೇಶ್ವರ ಮಠದ ಶ್ರೀಶ್ರೀವೀರಕಾರದ ಬಸವ ಸ್ವಾಮೀಜಿ ಆಶೀರ್ವಚನ ನೀಡಿ,ವೀರಶೈವ ಲಿಂಗಾಯಿತ ಸಮುದಾಯದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಇಂತಹ ಸಮಾರಂಭಗಳ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಕೇವಲ ಇಂಜಿನಿಯರಿAಗ್, ಮೆಡಿಕಲ್ ಅಷ್ಟೇ ಅಲ್ಲ ಬೇರೆ ಬೇರೆ ಕ್ಷೇತ್ರಗಳ ಕಡೆಗೂ ಸಮುದಾಯದ ವಿದ್ಯಾರ್ಥಿಗಳು ಗಮನಹರಿಸಬೇಕು. ತಾವು ಒಳ್ಳೆಯ ಸ್ಥಾನಕ್ಕೆ ಹೋದಾಗ, ನಿಮ್ಮನ್ನು ಗುರುತಿಸಿ, ಗೌರವಿಸಿದ ಸಂಘ ಸಂಸ್ಥೆಗಳಿಗೆ ನಿಮ್ಮ ಕೈಲಾದ ಸಹಾಯ ಮಾಡುವಂತೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎಂ.ಬಿ.ಷಡಕ್ಷರಿ ವಹಿಸಿದ್ದರು.ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್,ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತುಮಕೂರು ಜಿಲ್ಲಾ ಉಪಾಧ್ಯಕ್ಷ ಶಶಿ ಹುಲಿಕುಂಟೆ ಮಠ್,ಬೆಸ್ಕಾಂ ಇಇ ಅಮೀನ್,ವಿಜ್ಞಾನಿ ಈರಣ್ಣ ಅವರುಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಅಖಿಲ ಭಾರತ ವೀರಶೈವಲಿಂಗಾಯಿತ ಮಹಾಸಭಾ ತುಮಕೂರು ಜಿಲ್ಲಾ ಮಹಿಳಾಧ್ಯಕ್ಷೆ ಮಮತ ದಿವಾಕರ್, ಸಾಗರಹಳ್ಳಿ ನಟರಾಜು, ಡಾ.ಪ್ರಭಾ, ಬೆಸ್ಕಾಂ ಇಇ ಚೇತನ್,ಉದ್ಯಮಿಗಳಾದ ಡಾ.ದರ್ಶನ್ ಕೆ.ಎಲ್, ಹೆಚ್.ಕೆ.ರುದ್ರೇಶ್, ಕೊಪ್ಪಲ್‌ನಾಗರಾಜು,ವಿವಿಧ ಸಂಘಗಳಿಗೆ ಆಯ್ಕೆಯಾಗಿರುವ ಉಮೇಶ್, ಸಿದ್ದಲಿಂಗಸ್ವಾಮಿ.ಎಸ್.ಪಿ,ಪಿ.ಜಿ.ತಿಮ್ಮೇಗೌಡ, ಹೆಚ್.ಎಂ.ರುದ್ರೇಶ್, ಜಿ.ವಿ.ಮೋಹನ್‌ಕುಮಾರ್, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಹೆಚ್.ಜಯಶಂಕರ್, ಉಮೇಶ್, ಮಂಜುನಾಥ್ ಬಿ.ಎಸ್,ರೇಣುಕಾರಾಧ್ಯ, ಶುಭಮಣಿ ಸೇರಿದಂತೆ,ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
(Visited 1 times, 1 visits today)



