BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  •  ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿ
  • ಮಹಿಳೆಯರಿಗಾಗಿ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮ
  • ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ
  • ತಂದೆ ಕಳೆದುಕೊಂಡ ೧೪ರ ಬಾಲಕನ ಹೆಗಲ ಮೇಲೆ ಕುಟುಂಬದ ಹೊರೆ
  • ಎಸ್‌ಐಆರ್ ಪ್ರಕ್ರಿಯೆಗಳನ್ನು ರದ್ದು ಮಾಡಬೇಕೆಂದು ಪ್ರತಿಭಟನೆ
  • ನಗು ಮನಸ್ಸಿಗೆ ನೆಮ್ಮದಿ ನೀಡುವ ಔಷಧಿ
  • ನಗರದ ಹಲವು ವಾರ್ಡ್ಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ: ಪರಿಹಾರಕ್ಕೆ ಒತ್ತಾಯ
  • ಎಸ್.ಐ.ಆರ್ ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿಯುವ ಕೆಲಸ: ಆರೋಪ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತಂದೆ ಕಳೆದುಕೊಂಡ ೧೪ರ ಬಾಲಕನ ಹೆಗಲ ಮೇಲೆ ಕುಟುಂಬದ ಹೊರೆ
news

ತಂದೆ ಕಳೆದುಕೊಂಡ ೧೪ರ ಬಾಲಕನ ಹೆಗಲ ಮೇಲೆ ಕುಟುಂಬದ ಹೊರೆ

ಆರು ಮಕ್ಕಳೊಂದಿಗೆ ತಾಯಿಯ ಕಣ್ಣೀರಿನ ಬದುಕು; ಸರ್ಕಾರದ ನೆರವಿಗಾಗಿ ಕಾಯುತ್ತಿರುವ ಗಂಗಸಾಗರದ ಕುಟುಂಬ
By News Desk BenkiyabaleUpdated:September 28, 2026 5:08 pm

ಪಾವಗಡ: ತಂದೆಯ ನೆರಳನ್ನು ಕಳೆದುಕೊಂಡ ೧೪ ವರ್ಷದ ಬಾಲಕನೊಬ್ಬ ತನ್ನ ಕುಟುಂಬದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು, ಕುರಿ ಮೇಯಿಸುತ್ತಾ ಬದುಕು ಸಾಗಿಸುತ್ತಿರುವ ಮನಕಲಕುವ ಘಟನೆ ಪಾವಗಡ ತಾಲೂಕಿನ ಗಂಗಸಾಗರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗAಗಸಾಗರ ಗ್ರಾಮದ ದಿಲೀಪ್ ಎಂಬ ೧೪ ವರ್ಷದ ಬಾಲಕ ಇತ್ತೀಚೆಗಷ್ಟೇ ತಂದೆಯನ್ನು ಕಳೆದುಕೊಂಡಿದ್ದಾನೆ. ತಂದೆಯ ನಿಧನದ ಬಳಿಕ ಕುಟುಂಬಕ್ಕೆ ಯಾವುದೇ ಸ್ಥಿರ ಆದಾಯದ ಮೂಲವಿಲ್ಲದಂತಾಗಿದ್ದು, ತಾಯಿ ಲಕ್ಷಿ÷್ಮÃದೇವಮ್ಮ ಅವರು ಆರು ಮಕ್ಕಳನ್ನು ಸಾಕಿ ಸಲಹಲು ಪರದಾಡುತ್ತಿದ್ದಾರೆ.
ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಕುಟುಂಬಕ್ಕೆ ಎದುರಾಗಿದ್ದು, ಹೊಲಗಳಲ್ಲಿ ಸಿಗುವ ಸಣ್ಣಪುಟ್ಟ ಕೂಲಿ ಕೆಲಸಗಳಿಗೆ ತಾಯಿ ತೆರಳುತ್ತಿದ್ದಾರೆ. ಇನ್ನೊಂದೆಡೆ ಬಾಲಕ ದಿಲೀಪ್ ತನ್ನ ನೆರೆಯವರೊಂದಿಗೆ ಕುರಿಗಳನ್ನು ಮೇಯಿಸಲು ತೆರಳುವ ಮೂಲಕ ಕುಟುಂಬದ ಬದುಕಿಗೆ ತನ್ನದೇ ಆದ ರೀತಿಯಲ್ಲಿ ನೆರವಾಗುತ್ತಿದ್ದಾನೆ.
ಪಡಿತರ ಚೀಟಿಯಲ್ಲೂ ಕುಟುಂಬಕ್ಕೆ ಜಾಗವಿಲ್ಲ!: ಇನ್ನೊಂದು ಆತಂಕಕಾರಿ ಸಂಗತಿಯೆAದರೆ, ಕುಟುಂಬದ ಪಡಿತರ ಚೀಟಿಯಲ್ಲಿ ತಾಯಿ ಲಕ್ಷಿ÷್ಮÃದೇವಮ್ಮ ಹಾಗೂ ಐದು ಮಕ್ಕಳು ಇದುವರೆಗೂ ಸೇರ್ಪಡೆಯಾಗಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಸರ್ಕಾರದ ಆಹಾರ ಭದ್ರತೆ ಸೇರಿದಂತೆ ವಿವಿಧ ಸೌಲಭ್ಯಗಳಿಂದ ಕುಟುಂಬ ವಂಚಿತವಾಗಿರುವ ಸಾಧ್ಯತೆ ಎದುರಾಗಿದೆ.
ಸರ್ಕಾರ ಸಮಾಜದ ಕಟ್ಟಕಡೆಯ ನಾಗರಿಕರಿಗೂ ವಿವಿಧ ಯೋಜನೆಗಳ ಸೌಲಭ್ಯ ತಲುಪಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಆದರೆ, ಇಂತಹ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳೇ ತಲುಪದಿರುವುದು ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಧಿಕಾರಿಗಳ ಗಮನಕ್ಕೆ ಬಾರದ ಕುಟುಂಬದ ಕಷ್ಟ: ಗಂಗಸಾಗರ ಗ್ರಾಮಕ್ಕೆ ಸಂಬAಧಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಹೊನ್ನಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು ಈ ಕುಟುಂಬದ ಸಮಸ್ಯೆಯನ್ನು ಗಮನಿಸಿ ಅಗತ್ಯ ನೆರವು ಒದಗಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಪಾವಗಡ ತಾಲೂಕಿನ ಕೆಲವು ಗ್ರಾಮಗಳಲ್ಲಿ ಅರ್ಹ ವ್ಯಕ್ತಿಗಳಿಗೆ ಮೂಲಭೂತ ದಾಖಲೆಗಳೇ ಇಲ್ಲದಿರುವ ಕುರಿತು ಇತ್ತೀಚೆಗೆ ಪ್ರಶ್ನೆಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಇಂತಹ ಪ್ರಕರಣಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.
ದಿಲೀಪನ ಬಾಲ್ಯಕ್ಕೆ ಬದಲಾಗಿ ಬದುಕಿನ ಹೊರೆ: ಆಟವಾಡಿ, ಶಿಕ್ಷಣ ಪಡೆದು ಭವಿಷ್ಯದ ಕನಸು ಕಾಣಬೇಕಾದ ೧೪ರ ಹರೆಯದಲ್ಲಿ ದಿಲೀಪ್ ಕುಟುಂಬದ ಹೊರೆ ಹೊರುವಂತಾಗಿದೆ. ತಂದೆಯ ಸಾವಿನ ನೋವಿನ ನಡುವೆಯೇ ತಾಯಿಗೆ ಹಾಗೂ ಸಹೋದರ ಸಹೋದರಿಯರಿಗೆ ಆಸರೆಯಾಗಬೇಕಾದ ಅನಿವಾರ್ಯತೆ ಈ ಬಾಲಕನ ಬದುಕನ್ನು ಕಾಡುತ್ತಿದೆ.
ಒಂದೆಡೆ ತಾಯಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರೆ, ಮತ್ತೊಂದೆಡೆ ಬಾಲಕ ಕುರಿ ಮೇಯಿಸುತ್ತಿರುವ ದೃಶ್ಯ ಗ್ರಾಮಸ್ಥರ ಮನಕಲಕುವಂತಾಗಿದೆ.
ಕೂಡಲೇ ನೆರವು ನೀಡಲು ಒತ್ತಾಯ: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕೂಡಲೇ ಗಂಗಸಾಗರ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದ ಸ್ಥಿತಿಗತಿಯನ್ನು ಪರಿಶೀಲಿಸಬೇಕು.
ಕುಟುಂಬಕ್ಕೆ ಅರ್ಹತೆಯ ಆಧಾರದ ಮೇಲೆ ಪಡಿತರ ಚೀಟಿ, ದಾಖಲೆಗಳು, ಆಹಾರ ಭದ್ರತೆ, ವಸತಿ, ಶಿಕ್ಷಣ, ಸಾಮಾಜಿಕ ಭದ್ರತೆ ಹಾಗೂ ಜೀವನೋಪಾಯಕ್ಕೆ ಸಂಬAಧಿಸಿದ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳ ಮನೆಬಾಗಿಲಿಗೆ ತಲುಪಬೇ ಕಾದರೆ, ದಿಲೀಪ್‌ನಂತಹ ಕುಟುಂಬಗಳತ್ತ ಆಡಳಿತ ವ್ಯವಸ್ಥೆ ನೇರವಾಗಿ ತಲುಪಬೇಕಿದೆ.
೧೪ರ ಹರೆಯದಲ್ಲೇ ಕುಟುಂಬದ ಹೊರೆ ಹೊತ್ತಿರುವ ದಿಲೀಪ್‌ನ ಬದುಕು ಬದಲಾಗಬೇಕಾದರೆ, ಸರ್ಕಾರದ ನೆರವಿನ ಜೊತೆಗೆ ಸಮಾಜದ ಮಾನವೀಯ ಸ್ಪಂದನೆಯೂ ಅಗತ್ಯವಾಗಿದೆ.

(Visited 1 times, 1 visits today)
kannada news karnataka Koratagere local news madhugiri pavagada tumakur tumkur tumkur news ಜಿಲ್ಲಾಡಳಿತ ತುಮಕೂರು:
Previous Articleಎಸ್‌ಐಆರ್ ಪ್ರಕ್ರಿಯೆಗಳನ್ನು ರದ್ದು ಮಾಡಬೇಕೆಂದು ಪ್ರತಿಭಟನೆ
Next Article ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ
News Desk Benkiyabale

Related Posts

 ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿ

September 28, 2026 5:12 pm news

ಮಹಿಳೆಯರಿಗಾಗಿ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮ

September 28, 2026 5:10 pm ಇತರೆ ಸುದ್ಧಿಗಳು

ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ

September 28, 2026 5:09 pm news
ತಾಜಾ ಸುದ್ಧಿಗಳು
news

 ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿ

September 28, 2026 5:12 pm
ಇತರೆ ಸುದ್ಧಿಗಳು

ಮಹಿಳೆಯರಿಗಾಗಿ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮ

September 28, 2026 5:10 pm
news

ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ

September 28, 2026 5:09 pm
news

ತಂದೆ ಕಳೆದುಕೊಂಡ ೧೪ರ ಬಾಲಕನ ಹೆಗಲ ಮೇಲೆ ಕುಟುಂಬದ ಹೊರೆ

September 28, 2026 5:08 pm
news

ಎಸ್‌ಐಆರ್ ಪ್ರಕ್ರಿಯೆಗಳನ್ನು ರದ್ದು ಮಾಡಬೇಕೆಂದು ಪ್ರತಿಭಟನೆ

September 28, 2026 5:06 pm
news

ನಗು ಮನಸ್ಸಿಗೆ ನೆಮ್ಮದಿ ನೀಡುವ ಔಷಧಿ

September 26, 2026 5:58 pm
Our Youtube Channel
Our Picks

 ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿ

September 28, 2026 5:12 pm

ಮಹಿಳೆಯರಿಗಾಗಿ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮ

September 28, 2026 5:10 pm

ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ

September 28, 2026 5:09 pm

ತಂದೆ ಕಳೆದುಕೊಂಡ ೧೪ರ ಬಾಲಕನ ಹೆಗಲ ಮೇಲೆ ಕುಟುಂಬದ ಹೊರೆ

September 28, 2026 5:08 pm

ಎಸ್‌ಐಆರ್ ಪ್ರಕ್ರಿಯೆಗಳನ್ನು ರದ್ದು ಮಾಡಬೇಕೆಂದು ಪ್ರತಿಭಟನೆ

September 28, 2026 5:06 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

 ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿ

By News Desk BenkiyabaleSeptember 28, 2026 5:12 pm

ತುಮಕೂರು: ಮನುಷ್ಯನ ಪ್ರೀತಿಯ ಪ್ರಾಣಿಯಾಗಿರುವ ನಾಯಿ ಮತ್ತು ಬೆಕ್ಕುಗಳಿಂದ ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವರೇಬಿಸ್ ದಿನಾಚರಣೆಯ ಗುರಿಯಾಗಿದ್ದು, ಪ್ರತಿಯೊಬ್ಬರೂ…

ಮಹಿಳೆಯರಿಗಾಗಿ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮ

September 28, 2026 5:10 pm

ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ

September 28, 2026 5:09 pm

ತಂದೆ ಕಳೆದುಕೊಂಡ ೧೪ರ ಬಾಲಕನ ಹೆಗಲ ಮೇಲೆ ಕುಟುಂಬದ ಹೊರೆ

September 28, 2026 5:08 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.