BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ
  • ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ
  • ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ
  • ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ
  • ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್
  • ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ
  • ನಾಡಕಚೇರಿಗಳಲ್ಲಿ ಕಂದಾಯ ವಿಷಯ ಕುರಿತ ಅರ್ಜಿಗಳ ಪರಿಹಾರಕ್ಕೆ ವಿಶೇಷ ಕ್ರಮ: ಡಿಸಿ
  • ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ
news

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

ಗ್ರಾಮ ಪಂಚಾಯತ್ ಪಂಚ ನೌಕರರ ಸಮಿತಿಯು ಅ.೧೨ ರಿಂದ ಬೆಂಗಳೂರು ಚಲೋ ಪಾದಯಾತ್ರೆ
By News Desk BenkiyabaleUpdated:October 01, 2026 5:25 pm

ತುಮಕೂರು: ಗ್ರಾಮ ಪಂಚಾಯ್ತಿ ಸಿಬ್ಬಂದಿಗಳಿಗೆ ಕಾರ್ಮಿಕ ಇಲಾಖೆ ಹೊರಡಿಸಿರುವ ಕನಿಷ್ಠ ವೇತನ ಹೆಚ್ಚಳ ಮುಂದುವರೆಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಪಂಚ ನೌಕರರ ಸಮಿತಿಯು ಅ. ೧೨ ರಿಂದ ಬೆಂಗಳೂರು ಚಲೋ ಪಾದಯಾತ್ರೆಯನ್ನು ನಗರದ ಸಿದ್ದಗಂಗಾ ಮಠದಿಂದ ಹಮ್ಮಿಕೊಂಡಿದೆ.
ಹಗಲಿರುಳು ಶ್ರಮ ವಹಿಸಿ ಕೆಲಸ ಮಾಡುವ ಗ್ರಾ.ಪಂ. ನೌಕರರ ಬಗ್ಗೆ ಸರ್ಕಾರ ತಾಳಿರುವ ನಿರ್ಲಕ್ಷ÷್ಯ ಧೋರಣೆಯನ್ನು ಖಂಡಿಸಿ ಹಾಗೂ ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಯಕ ಯೋಗಿ, ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಮೆಟ್ಟಿದ ಸಿದ್ದಗಂಗಾ ಮಠದ ನೆಲದಿಂದ ಪಾದಯಾತ್ರೆ ಮೂಲಕ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ನೌಕರರ ರಾಜ್ಯಾಧ್ಯಕ್ಷ ಹಾಗೂ ಪಂಚ ನೌಕರರ ಸಮಿತಿಯ ರಾಜ್ಯಾಧ್ಯಕ್ಷ ಭೀಮರೆಡ್ಡಿ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮ ಪಂಚಾಯ್ತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚ ನೌಕರರಾದ ಕರ ವಸೂಲಿಗಾರ, ಕ್ಲಕ್ ಕಂ ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ ಮತ್ತು ಸ್ವಚ್ಛಚಗಾರರು ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಜನರ ದೈನಂದಿನ ಮೂಲಸೌಕರ್ಯ, ಕುಡಿಯುವ ನೀರು, ಸ್ವಚ್ಛತೆ ಹಾಗೂ ಪಂಚಾಯ್ತಿ ಆಡಳಿತವನ್ನು ಹಗಲಿರುಳು ಶ್ರಮಿಸುತ್ತಾ ಮುನ್ನಡೆಸುತ್ತಿರುವ ಗ್ರಾ.ಪಂ. ನೌಕರರ ಬದುಕು ಸಂಕಷ್ಟದಲ್ಲಿದೆ ಎಂದು ಅವರು ಹೇಳಿದರು.
ಕಾರ್ಮಿಕ ಇಲಾಖೆಯ ಹೊರಡಿಸಿರುವ ಆದೇಶ ಮುಂದುವರೆಸಬೇಕು, ವೇತನ ಜಾರಿ ಮಾಡಬೇಕು. ಮಾತೃ ಇಲಾಖೆಯಿಂದಲೇ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಲು ಹಾಗೂ ವೇತನ ಶ್ರೇಣಿ ನಿಗದಿಪಡಿಸಲು ಸಮಿತಿ ರಚಿಸಬೇಕು. ಸೇವಾ ಹಿರಿತನ ವೇತನ ಮತ್ತು ವೇತನ ಹೆಚ್ಚಳದ ಆದೇಶ ಜಾರಿಗೊಳಿಸಬೇಕು. ಎಲ್ಲಾ ಗ್ರಾ.ಪಂ.ಗಳಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಗ್ರೇಡ್-೧ ಗ್ರಾಮ ಪಂಚಾಯ್ತಿಗೂ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆ ಸೃಜನೆ ಮಾಡಬೇಕು. ಗ್ರಾ.ಪಂ.ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚ ವೃಂದ ನೌಕರರಿಗೆ ಸರ್ಕಾರದಿಂದ ನೇರ ವೇತನ ಇಲಾಖೆಯಿಂದಲೇ ಜಾರಿ ಮಾಡಬೇಕು ಹಾಗೂ ಇಎಸ್‌ಐ ಮತ್ತು ಪಿಎಫ್ ಸರ್ಕಾರದಿಂದ ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕರ ವಸೂಲಿಗಾರರ ನೌಕರರ ರಾಜ್ಯಾಧ್ಯಕ್ಷ ಹಾಗೂ ಪಂಚ ನೌಕರರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣ್ ಮಾತನಾಡಿ, ಮಾತನಾಡಿ, ಸರ್ಕಾರ ವಿಧಾನಸೌಧದದಂತೆಯೇ ಸ್ಥಳೀಯ ಮಟ್ಟದಲ್ಲಿ ಜಿ.ಪಂ., ತಾ.ಪಂ. ಹಾಗೂ ಗ್ರಾಮ ಪಂಚಾಯ್ತಿ. ಇವು ರಾಜ್ಯಮಟ್ಟಕ್ಕೆ ಅವಿಭಾಜ್ಯ ಅಂಗ. ಗ್ರಾಮೀಣ ಜನರಿಗೆ,. ಬಡವರಿಗೆ ಸವಲತ್ತು ತಲುಪಿಸುವ ಕೆಲಸ ಮಾಡುವವರು ಗ್ರಾಮ ಪಂಚಾಯ್ತಿ ನೌಕರರು.
ರಾಜ್ಯ ಸರ್ಕಾರ ೩೧ ಸಚಿವರ ಆದೇಶವನ್ನು ಯಾರು ಪಾಲನೆ ಮಾಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಆದರೆ ತಳಮಟ್ಟದ ಗ್ರಾಮ ಪಂಚಾಯ್ತಿ ನೌಕರರು ಪಾಲಿಸುತ್ತಾ ಕಾರ್ಯನಿರ್ವಹಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ. ಕುಡಿಯುವ ನೀರು ಪೂರೈಸುವ ಕೆಲಸವನ್ನು ನೀರಗಂಟಿಗಳು ಪ್ರತಿನಿತ್ಯ ಮಾಡುತ್ತಾರೆ. ಕಚೇರಿಯಲ್ಲಿ ಅಧಿಕಾರಿಗಳು ಆದೇಶಿಸದ ಕೆಲಸವನ್ನು ಅಟೆಂಡರ್ ಮಾಡುತ್ತಾರೆ. ಹಾಗೆಯೇ ಇ-ಸ್ವತ್ತು ಕೆಲಸ ಕಾರ್ಯಗಳನ್ನು ಡಾಟಾ ಎಂಟ್ರಿ ಆಪರೇಟರ್‌ಗಳು ನಿರ್ವಹಿಸುತ್ತಾರೆ. ಹಾಗಾಗಿ ಈ ನೌಕರರ ಬಗ್ಗೆ ಸರ್ಕಾರದ ನಿರ್ಲಕ್ಷ÷್ಯ ಸಲ್ಲದು. ಸರ್ಕಾರಗಳ ನಿರ್ಲಕ್ಷ÷್ಯವನ್ನು ಖಂಡಿಸಿ ಈ ಹೋರಾಟ ಅನಿವಾರ್ಯವಾಗಿದೆ ಎಂದರು.
ಹೋರಾಟದಲ್ಲಿ ಸುಮಾರು ೩೫ ಸಾವಿರಕ್ಕೂ ಅಧಿಕ ಮಂದಿ ಗ್ರಾಮ ಪಂಚಾಯ್ತಿ ನೌಕರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸರ್ಕಾರ ಗ್ರಾ.ಪಂ. ನೌಕರರಿಗೆ ಮಾಡಿದ್ದ ವೇತನ ಪರಿಷ್ಕರಣೆಯನ್ನು ಹಿಂಪಡೆದಿದೆ. ಹಾಗಾಗಿ ಈ ದಿಟ್ಟ ಹೋರಾಟವನ್ನು ಶ್ರೀಗಳ ಆಶೀರ್ವಾದದೊಂದಿಗೆ ಆರಂಭಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ನಮ್ಮ ಈ ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡದಿದ್ದರೆ ಅ. ೧೪, ೧೫ ಹಾಗೂ ೧೬ ರಂದು ಗ್ರಾ.ಪಂ. ನೌಕರರ ಕುಟುಂಬವರ್ಗದವರ ಜತೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನೀರಘಂಟಿ ಸಂಘದ ರಾಜ್ಯಾಧ್ಯಕ್ಷ ಹಾಗೂ ಪಂಚ ಸಮಿತಿಯ ಸದಸ್ಯ ರಾಮಕೃಷ್ಣಪ್ಪ, ಜವಾನರ ಸಂಘದ ರಾಜಶೇಖರ್, ಸ್ವಚ್ಛತಾಗಾರ ಸಂಘದ ನಿತಿನ್, ಗೋವಿಂದಪ್ಪ, ರವಿಕುಮಾರ್, ರಂಗನಾಥ್, ಜಗದೀಶ್, ಬಸವರಾಜೇಗೌಡ, ನಟರಾಜ್, ರಂಗಪ್ಪ, ಮಂಜುನಾಥ್, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)
Congress kannada news karnataka local news tumakur tumkur Tumkur mahanagara palike tumkur news ಜಿಲ್ಲಾಡಳಿತ ತುಮಕೂರು:
Previous Articleಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್
Next Article ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ
News Desk Benkiyabale

Related Posts

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm news

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm news
ತಾಜಾ ಸುದ್ಧಿಗಳು
news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm
news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm
news

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
news

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
news

ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್

September 30, 2026 6:04 pm
news

ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ

September 30, 2026 6:02 pm
Our Youtube Channel
Our Picks

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm

ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್

September 30, 2026 6:04 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

By News Desk BenkiyabaleOctober 01, 2026 5:32 pm

ತುಮಕೂರು: ಕನ್ನಡ ಸಾಹಿತ್ಯ ಪರಿಷತ್‌ನ್ನು ಸ್ಥಾಪಿಸಿದವರು ಕೂಡ ಓರ್ವ ಅಧಿಕಾರಿ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ.ಹಾಗಾಗಿ ಕಸಾಪಕ್ಕೆ ಅಧಿಕಾರಿಗಳು ಸ್ಪರ್ಧಿಸುವುದು ಬೇಡ…

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.