ಹುಳಿಯಾರು: ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳು ಹಾಗೂ ಮಕ್ಕಳಿಗೆ ನೀಡಲಾಗುವ ಅತ್ಯಗತ್ಯ ಲಸಿಕೆಗಳು ಮತ್ತು ವಿಟಮಿನ್ ಹನಿಗಳ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ÷್ಯದಿಂದಾಗಿ ಕಳೆದ ೩-೪ ತಿಂಗಳುಗಳಿAದ ಈ ಅಭಾವ ತಲೆದೋರಿದ್ದು, ಬಡ ಹಾಗೂ ಮಧ್ಯಮ ವರ್ಗದ ಪೋಷಕರು ಪರದಾಡುವಂತಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದಿನನಿತ್ಯ ನೂರಾರು ತಾಯಂದಿರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಬರುತ್ತಿದ್ದಾರೆ. ಆದರೆ, ಅಗತ್ಯ ಲಸಿಕೆಗಳ ದಾಸ್ತಾನು ಇಲ್ಲದೆ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಜನರಿಗೆ ಸಮಾಧಾನ ಹೇಳಿ ವಾಪಸ್ ಕಳುಹಿಸುವ ಸ್ಥಿತಿ ನಿರ್ಮಾಣವಾಗಿದೆ. “ಕಳೆದ ಮೂರ್ನಾಲ್ಕು ತಿಂಗಳುಗಳಿAದ ಮೇಲಧಿಕಾರಿಗಳಿಗೆ ಮನವಿ ಮಾಡಿದರೂ ಲಸಿಕೆ ಹಾಗೂ ವಿಟಮಿನ್ ಡ್ರಾಪ್ಸ್ಗಳ ಪೂರೈಕೆಯಾಗಿಲ್ಲ. ಸಾರ್ವಜನಿಕರ ಆಕ್ರೋಶಕ್ಕೆ ನಾವು ಉತ್ತರಿಸಬೇಕಾಗಿದೆ,” ಎಂದು ಆಶಾ ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.
ಮಕ್ಕಳಿಗೆ ಕಾಲಕಾಲಕ್ಕೆ ನೀಡಬೇಕಾದ ಬೂಸ್ಟರ್ ಡೋಸ್ಗಳು ಮತ್ತು ವಿಟಮಿನ್ ಎ/ಡಿ ಹನಿಗಳು ತಡವಾಗುತ್ತಿರುವುದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಕುಂದಿ, ಅಪೌಷ್ಟಿಕತೆ ಹಾಗೂ ವಿವಿಧ ರೋಗಗಳ ಭೀತಿ ಎದುರಾಗುವ ಆತಂಕ ಪೋಷಕರದಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗದೇ ಇರುವುದರಿಂದ ಬಡ ಪೋಷಕರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾಗಿದೆ. ಅಲ್ಲಿ ಸಾವಿರಾರು ರೂಪಾಯಿ ವೆಚ್ಚ ಭರಿಸಲು ಸಾಧ್ಯವಾಗದೆ ಹಲವರು ಲಸಿಕೆ ಅಭಿಯಾನದಿಂದ ವಂಚಿತರಾಗುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಮಕ್ಕಳಲ್ಲಿ ಋತುಮಾನ ಆಧಾರಿತ ಜ್ವರ, ಪೋಲಿಯೋ ಭೀತಿ, ದಡಾರ, ರೋಟಾವೈರಸ್ ಹಾಗೂ ಇತರ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇಂತಹ ಸೂಕ್ಷ÷್ಮ ಸಂದರ್ಭದಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಲಸಿಕೆ ಹಾಗೂ ವಿಟಮಿನ್ ಹನಿಗಳ ಸರಬರಾಜು ಇಲ್ಲದಿರುವುದು ಸಾರ್ವಜನಿಕರ ಆತಂಕವನ್ನು ದುಪ್ಪಟ್ಟುಗೊಳಿಸಿದೆ.
ಇನ್ನಾದರೂ ಸಂಬAಧಪಟ್ಟ ಆರೋಗ್ಯ ಇಲಾಖೆ ಹಾಗೂ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಲಸಿಕೆ ಮತ್ತು ವಿಟಮಿನ್ ಡ್ರಾಪ್ಸ್ಗಳನ್ನು ಸರಬರಾಜು ಮಾಡಲು ತುರ್ತು ಕ್ರಮ ಕೈಗೊಳ್ಳಬೇಕಿದೆ.
(Visited 1 times, 1 visits today)





