BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ
  • ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ
  • ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ
  • ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!
  • ಅಂ. ವಿಮಾನ ನಿಲ್ದಾಣ ಬೆಂಗಳೂರು-೨ ನಿರ್ಮಾಣ ಪ್ರಸ್ತಾವನೆ ಸ್ವಾಗಾತಾರ್ಹ
  • ೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ
  • ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ
  • ಆರು ತಿಂಗಳ ಇಂಧನ ಬವಣೆಗೆ ಮುಕ್ತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಮಾಜಿ ಶಾಸಕ ಬಿ.ಸುರೇಶ್ ಗೌಡ ಆಗ್ರಹ
Trending

ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಮಾಜಿ ಶಾಸಕ ಬಿ.ಸುರೇಶ್ ಗೌಡ ಆಗ್ರಹ

By News Desk BenkiyabaleUpdated:March 01, 2019 4:44 pm

ತುಮಕೂರು:

     ನಗರದ ಖಾಸಗೀ ಹೋಟೆಲ್ ನಲ್ಲಿ ಸುದ್ಧಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶ್ ಗೌಡರವರು ಹಾಲಿ ಶಾಸಕರಾದ ಡಿ.ಸಿ.ಗೌರಿಶಂಕರ್ ವಿರುದ್ಧ ಹರಿಹಾಯ್ದರು.

      ಗೌರಿಶಂಕರ್ ವಿರುದ್ಧ ಎಕ್ಸ್ಟ್ರಾಕ್ಷನ್ ಕೇಸು ದಾಖಲಿಸಲಬೇಕು ಮತ್ತು ಪ್ರಾಮಾಣಿಕ ಅಧಿಕಾರಿಯಿಂದ ತನಿಖೆ ನಡೆಸಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿಯನ್ನು ಮುಖ್ಯ ಸಾಕ್ಷಿಯಾಗಿ ಪರಿಗಣಿಸಬೇಕು. ಭೂ ವಿಜ್ಞಾನಿಯವರು ಗಣಿ ಇಲಾಖೆಯ ಉಪ ನಿರ್ದೇಶಕರಿಗೆ ನೀಡಿರುವ ಹೇಳಿಕೆಯನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕು. ಶಾಸಕರು ಕಾನೂನನ್ನು ಕೈಗೆತ್ತಿಕೊಂಡಿರುವುದರಿಂದ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಂಧಿಸಬೇಕು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಪಾರದರ್ಶಕ ತನಿಖೆಗೆ ಅನುವುಮಾಡಿಕೊಡಬೇಕು. ತಮ್ಮ ಪಕ್ಷದ ಶಾಸಕನನ್ನು ರಕ್ಷಣೆ ಮಾಡಬಾರದು ಎಂದು ಒತ್ತಾಯಿಸಿದರು.

      ದಿನಾಂಕ 21-.01-2019 ರಂದು ಭ್ರಷ್ಠಾಚಾರ ನಿಗ್ರಹದಳದ ಪೋಲೀಸ್ ಉಪಾದೀಕ್ಷಕರಿಗೆ ದೂರು ನೀಡಲಾಗಿದ್ದು ಸದರೀ ದೂರಿನ ಸಂಭಂದ 25.01.2019 ರಂದು ಪತ್ರಿಕಾಗೋಷ್ಠಿ ನಡೆಸಲಾಗಿತ್ತು ಆದರೆ ಭ್ರಷ್ಠಾಚಾರ ನಿಗ್ರಹ ದಳದ ಪೋಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ನಾವು ನೀಡಿದ್ದ ಅರ್ಜಿಯನ್ನು ಪೋಲೀಸ್ ಅಧೀಕ್ಷಕರು ಕೇಂದ್ರ ವಲಯ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ರವರಿಗೆ ತುಮಕೂರಿನ ಎ.ಸಿ.ಬಿ.ಯ ಡಿವೈಎಸ್‍ಪಿ ರವರು ಸದರೀ ಅರ್ಜಿಯ ಬಗ್ಗೆ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಮನವಿ ಮಾಡಿದ್ದರು.

      ಅಭಿಯೋಗ ಉಪನಿರ್ದೇಶಕರಿಂದ ಬಂದ ಅಭಿಪ್ರಾಯದ ಮೇರೆಗೆ ಮಾನ್ಯ ಪೋಲೀಸ್ ಅಧೀಕ್ಷಕರು ಭ್ರಷ್ಠಾಚಾರ ನಿಗ್ರಹದಳದ ಕೇಂದ್ರ ವಲಯದವರು ಸದರೀ ದೂರಿನಲ್ಲಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಬಗ್ಗೆ (ಎಕ್ಸಟ್ರಾಕ್ಷನ್) ಆರೋಪ ಕಂಡು ಬಂದಿರುವುದರಿಂದ ನಮ್ಮ ಅರ್ಜಿಯನ್ನು ಮುಂದಿನ ಕ್ರಮಕ್ಕಾಗಿ ತುಮಕೂರು ಜಿಲ್ಲಾ ಪೋಲೀಸ್ ಅಧೀಕ್ಷಕರ ಕಛೇರಿಗೆ ದಿನಾಂಕ 23.02-2019 ರಂದು ನಮ್ಮ ದೂರನ್ನು ವರ್ಗಾಯಿಸಿರುತ್ತಾರೆ.

      ಇದರ ಬಗ್ಗೆ ದಿನಾಂಕ 23-02-2019 ರಂದು ಎ ಸಿ ಬಿ ಡಿವೈಎಸ್ಪಿ ರವರು ನಮಗೆ ಹಿಂಬರಹ ನೀಡಿರುತ್ತಾರೆ. ಈ ವಿಚಾರವಾಗಿ ಶಾಸಕ ಗೌರಿಶಂಕರ ವಿರುದ್ದ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವ ಬಗ್ಗೆ ಪ್ರಕರಣ ದಾಖಲು ಮಾಡಿ ಕೂಲಂಕುಶ ತನಿಖೆ ನಡೆಸುವ ಅಗತ್ಯತೆ ಇದೆ. ಕ್ಯಾಂತ್ಸಂದ್ರ ಪಿ,ಎಸ್,ಐ ರಾಜು ಮತ್ತು ವೃತ್ತ ನಿರೀಕ್ಷಕರಾದ ರಾಮಕೃಷ್ಣಯ್ಯ ಇವರುಗಳು ಶಾಸಕ ಗೌರಿಶಂಕರ ಅವರ ಶಿಫಾರಸಿನ ಮೇರೆಗೆ ಕ್ಯಾತ್ಸಂದ್ರ ವೃತ್ತದಲ್ಲಿ ಇರುವುದರಿಂದ ಸದರೀ ಪ್ರಕರಣವನ್ನು ಬೇರೋಬ್ಬ ದಕ್ಷ ಪ್ರಾಮಾಣಿಕ ಅಧಿಕಾರಿಯಿಂದ ತನಿಖೆ ನಡೆಸಬೇಕೆಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಆಗ್ರಹಿಸುತ್ತಿದ್ದೇನೆ,
ಸದರೀ ವಿಚಾರಕ್ಕೆ ಸಂಬಂದಪಟ್ಟಂತೆ ಶಾಸಕ ಗೌರಿಶಂಕರ ಮತ್ತು ಬೆಂಬಲಿಗರು ಲಾರಿಗಳನ್ನು ತಡೆದು ವಸೂಲಿ ಮಾಡಿದ್ದರು ಎಂಬುದಕ್ಕೆ ಪುಷ್ಟೀಕರಿಸುವಂತೆ ಗಣಿ ಮತ್ತು ಭೂ ವಿಜ್ಘಾನ ಇಲಾಖೆಯ ಉಪನಿರ್ದೇಶಕರಿಗೆ ಭೂ ವಿಜ್ಘಾನಿ ಆದ ಪಿ,ಎಸ್ ನವೀನ್ ರವರು ದಿನಾಂಕ 4-02-2019 ರಂದು ಹೇಳಿಕೆ ನೀಡಿರುತ್ತಾರೆ.

      ಅವರ ಹೇಳಿಕೆಯಲ್ಲಿ ಇರುವಂತೆ ರಾಷ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಲ್ಲು ದಿಮ್ಮಿ ತುಂಬಿದ್ದ 4 ಲಾರಿಗಳು ನಿಂತಿದ್ದು ಇದರ ಬಗ್ಗೆ ಗ್ರಾಮಾಂತರ ಕ್ಷೇತ್ರದ ಶಾಸಕರು ಕರೆ ಮಾಡಿ ವಿವರಣೆ ಕೇಳಿದ್ದು ನಂತರ ಸ್ಥಳಕ್ಕೆ ಹೋಗಿ ಅಲ್ಲಿ ನಿಂತಿದ್ದ ಲಾರಿಗಳನ್ನು ಕಂಡು ಶಾಸಕರು ಕೇಳಿದ ಮಾಹಿತಿಯನ್ನು ತಿಳಿಸಿ ಇಲಾಖೆಯಿಂದ ಗುತ್ತಿಗೆ ಮುಂಜೂರು ಮಾಡಿರುವ ಬಗ್ಗೆ ಹಾಗು ಗುತ್ತಿಗೆದಾರರು ಪರವಾನಗಿ ಪಡೆದು ಸಾಗಾಣೆ ಮಾಡಿರುವ ಬಗ್ಗೆ ವಿವರಣೆ ನೀಡಿರುತ್ತೇನೆ.

      ಲಾರಿಗಳಲ್ಲಿ ಪರವಾನಗಿ ಇಲ್ಲದೇ ಇದ್ದರೆ ನಿಯಮಾನುಸಾರ ಕ್ರಮ ಜರುಗಿಸುವುದಾಗಿ ತಿಳಿಸಿ ಲಾರಿಗಳನ್ನು ವಿಚಾರಣೆಗಾಗಿ ಪೋಲೀಸ್ ಠಾಣೆಗೆ ಇಲ್ಲ ನಮ್ಮ ಕಛೇರಿಗೆ ಲಾರಿಗಳನ್ನು ತೆಗದುಕೊಂಡು ಬರುವಂತೆ ಲಾರಿಯವರಿಗೆ ತಿಳಿಸಿದಾಗ ಶಾಸಕರ ಬೆಂಬಲಿಗರು ಲಾರಿಗಳನ್ನು ನಾನು ತೆಗೆದುಕೊಂಡು ಹೋಗಲು ಅಡ್ಡಿಪಡಿಸಿರುತ್ತಾರೆ. ಸದರೀ ವಿಚಾರವನ್ನು ಉಪನಿರ್ದೇಶಕರಿಗೆ ದೂರವಾಣಿ ಮೂಲಕ ತಿಳಿಸಿರುವುದಾಗಿ ಅವರ ಹೇಳಿಕೆಯಲ್ಲೇ ನವೀನ್ ಪಿ.ಎಸ್. ರವರು ತಿಳಿಸಿರುತ್ತಾರೆ.

      ಅದೇ ಹೇಳಿಕೆಯಲ್ಲಿ ಶಾಸಕರ ಬೆಂಬಲಿಗರ ಗುಂಪು ಇದ್ದದ್ದರಿಂದ ನಾನು ಪ್ರಾಣ ಭಯದಿಂದ ಲಾರಿಗಳನ್ನು ತಡೆದು ನಿಲ್ಲಿಸಲಾಗದೆ ವಾಪಸು ಬಂದಿರುತ್ತೇನೆ ಎಂದು ಅವರ ಹಿರಿಯ ಅಧಿಕಾರಿಗಳಿಗೆ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

      ಅಂದರೆ ಶಾಸಕರು ಮತ್ತು ಅವರ ಬೆಂಬಲಿಗರು ಹಣ ವಸೂಲಿಗಾಗಿ ಲಾರಿಗಳನ್ನು ತಡೆದು ಅಕ್ರಮವಾಗಿ ಕರೆದೊಯ್ದಿರುವುದು ಇದರಿಂದ ಸಾಬೀತಾಗಿರುತ್ತದೆ. ನವೀನ್ ಪಿ,ಎಸ್ ರವರು ಸರ್ಕಾರಿ ಭೂ ವಿಜ್ಘಾನಿ ಆಗಿದ್ದು ಇವರ ಹೇಳಿಕೆ ಬಹುಮುಖ್ಯ ಹೇಳಿಕೆಯಾಗಿ ಪರಿಗಣಿಸುವಂತೆ ಈ ಮೂಲಕ ಒತ್ತಾಯಿಸುತ್ತಿದ್ದೇನೆ. ಲಾರಿಗಳಲ್ಲಿ ಅಕ್ರಮವಾಗಿ ಸಾಗಾಟ ಆಗುತ್ತಿರುವ ಮಾಹಿತಿ ಇರುವ ಶಾಸಕರು ಸಂಬಂದಪಟ್ಟ ಇಲಾಖೆಗೆ ಮಾಹಿತಿ ನೀಡಿ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಶಿಫಾರಸ್ಸು ಮಡಬೇಕಿತ್ತು ಆದರೆ ಇದ್ಯಾವುದನ್ನು ಮಾಡದೆ ತಾವೇ ನೇರವಾಗಿ ಫೀಲ್ಡಗೆ ಇಳಿದಿರುವುದು ಮತ್ತು ಬೆಂಬಲಿಗರೊಡನೆ ಲಾರಿಗಳನ್ನು ಅಡ್ಡಗಟ್ಟಿರುವುದರ ಅರ್ಥ ಏನು ಇದರ ಬಗ್ಗೆ ನಿಸ್ಪಕ್ಷಪಾತವಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಎಸ್ಪಿ ಅವರಲ್ಲಿ ಒತ್ತಾಯ ಮಾಡುತ್ತಿದ್ದೇನೆ ಎಂದರು.

(Visited 97 times, 1 visits today)
Previous Articleಗುಣಮಟ್ಟ ಕಾಯ್ದುಕೊಳ್ಳುವ ಸೇತುವೆ ನೀಡುವಂತೆ ಗುತ್ತಿಗೆದಾರರಿಗೆ ಶಾಸಕರ ಸೂಚನೆ
Next Article ಬಿ.ಸತ್ಯನಾರಾಯಣ್ ರಿಂದ ಕ.ರಾ.ರ.ಸಾ.ನಿಗಮದ ಕಛೇರಿ ಪರಿಶೀಲನೆ
News Desk Benkiyabale

Related Posts

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2026 5:46 pm news

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm news

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm news
ತಾಜಾ ಸುದ್ಧಿಗಳು
news

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2026 5:46 pm
news

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm
news

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm
news

ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!

July 21, 2026 5:38 pm
news

ಅಂ. ವಿಮಾನ ನಿಲ್ದಾಣ ಬೆಂಗಳೂರು-೨ ನಿರ್ಮಾಣ ಪ್ರಸ್ತಾವನೆ ಸ್ವಾಗಾತಾರ್ಹ

July 21, 2026 5:36 pm
news

೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ

July 20, 2026 5:26 pm
Our Youtube Channel
Our Picks

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2026 5:46 pm

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm

ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!

July 21, 2026 5:38 pm

ಅಂ. ವಿಮಾನ ನಿಲ್ದಾಣ ಬೆಂಗಳೂರು-೨ ನಿರ್ಮಾಣ ಪ್ರಸ್ತಾವನೆ ಸ್ವಾಗಾತಾರ್ಹ

July 21, 2026 5:36 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

By News Desk BenkiyabaleJuly 21, 2026 5:46 pm

ತುಮಕುರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟಿಯ ಹೆದ್ದಾರಿ (ಎನ್‌ಹೆಚ್)-೨೦೬ ನಾಲ್ಕು ಪಥಗಳ ರಸ್ತೆ ಕಾಮಗಾರಿ, ಕೆಪಿಟಿಸಿಎಲ್ ವಿದ್ಯುತ್…

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm

ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!

July 21, 2026 5:38 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.