BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜಾಬ್ ಕಾರ್ಡ್ ಪಡೆಯಲು ಗ್ರಾಮಸ್ಥರಿಗೆ ಕರೆ
  • ಸೆ.೫ ರಿಂದ ಜಿಲ್ಲಾದ್ಯಂತ “ಪ್ರಜಾಸೇವೆ ಆಂದೋಲನ”- ಜಿಲ್ಲಾಧಿಕಾರಿ
  • ನಿರಂತರವಾಗಿ ಕ್ರೀಡೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಜಿ.ಬಿ. ಮಲ್ಲಪ್ಪ ಕರೆ
  • ಸ್ಲ0ಗಳಲ್ಲಿ ಅರ್ಹ ೧೧೧೦ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಕ್ರಮ: ಡಿಸಿ
  • ಉಪ ಮುಖ್ಯಮಂತ್ರಿಗಳಿ0ದ ಪ್ರಜಾ ಸೇವಾ ಆಂದೋಲನಕ್ಕೆ ಚಾಲನೆ : ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ
  • ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ
  • ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ
  • ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಿವಿಗಳಲ್ಲಿ ಶೈಕ್ಷಣಿಕ, ಭೌತಿಕ ಪ್ರಗತಿ ಅಗತ್ಯ: ಡಾ. ಎಸ್. ಎ. ಕೋರಿ
Trending

ವಿವಿಗಳಲ್ಲಿ ಶೈಕ್ಷಣಿಕ, ಭೌತಿಕ ಪ್ರಗತಿ ಅಗತ್ಯ: ಡಾ. ಎಸ್. ಎ. ಕೋರಿ

By News Desk BenkiyabaleUpdated:May 29, 2019 6:07 pm

 ತುಮಕೂರು:

      ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಕರ್ನಾಟಕದ ವಿವಿಗಳು ಕಾಣಿಸಿಕೊಳ್ಳಬೇಕಾದರೆ ಶೈಕ್ಷಣಿಕ ಪ್ರಗತಿಯೊಂದಿಗೆ ಮೂಲಭೂತ ಸೌಕರ್ಯಗಳನ್ನೂ ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ಎ. ಕೋರಿ ಅಭಿಪ್ರಾಯಪಟ್ಟರು.

      ತುಮಕೂರು ವಿಶ್ವವಿದ್ಯಾನಿಲಯದಲ್ಲಿ ರೂಸಾ ನೆರವಿನೊಂದಿದೆ ನವೀಕರಿಸಲಾದ ಸಭಾಂಗಣವನ್ನು ಹಾಗೂ ನ್ಯಾಕ್ ಮಾನ್ಯತೆ ಮಾನದಂಡಗಳ ಕುರಿತ ಕಾರ್ಯಾಗಾರವನ್ನು ಬುಧವಾದ ಉದ್ಘಾಟಿಸಿದ ಅವರು, ವಿಶ್ವವಿದ್ಯಾನಿಲಯಗಳು ಸರ್ಕಾರದಿಂದ ದೊರೆಯುವ ಹಣಕಾಸು ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.

      ರಾಷ್ಟ್ರಮಟ್ಟದ 100 ಟಾಪ್ ವಿವಿಗಳ ಸಾಲಿನಲ್ಲಿ ಅಥವಾ ಪ್ರಪಂಚದ 500 ಟಾಪ್ ವಿವಿಗಳ ಸಾಲಿನಲ್ಲಿ ರಾಜ್ಯದ ವಿವಿಗಳು ಬರುತ್ತಿಲ್ಲ. ಅಂತರ ರಾಷ್ಟ್ರೀಯ ಮಾನದಂಡಗಳ ಪ್ರಕಾರ ನಮ್ಮಲ್ಲಿ ಯೋಜನೆಗಳು ಜಾರಿಗೆ ಬರದಿರುವುದೇ ಇದಕ್ಕೆ ಕಾರಣ ಎಂದರು.

      ಕೇಂದ್ರ ಅನುದಾನಗಳನ್ನು ಪಡೆಯುವಲ್ಲಿ ಮತ್ತು ಬಳಸಿಕೊಳ್ಳುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ರಾಷ್ಟ್ರೀಯ ಉಚ್ಚತರ ಶಿಕ್ಷಣ ಅಭಿಯಾನ (ರೂಸಾ) ಯೋಜನೆಯ ಅನುದಾನಗಳನ್ನು ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನ್ಯಾಯಯುತವಾಗಿಯೂ ಪರಿಣಾಮಕಾರಿಯಾಗಿಯೂ ಬಳಸಿಕೊಳ್ಳಲಾಗಿದೆ ಎಂದರು.

      ರೂಸಾ ಎರಡನೇ ಹಂತ ಪೂರ್ಣಗೊಳ್ಳುತ್ತಿದ್ದು, ಮೂರನೇ ಹಂತದ ಯೋಜನೆಯು ಸದ್ಯದಲ್ಲೇ ಆರಂಭವಾಗಲಿದೆ. ಈ ಬಾರಿ ನ್ಯಾಕ್ ಮಾನ್ಯತೆ ಪಡೆಯದ ಕಾಲೇಜುಗಳೂ ಹಣಕಾಸು ನೆರವನ್ನು ಪಡೆಯಲಿವೆ. ಆ ಮೂಲಕ ಅಂತಹ ಕಾಲೇಜುಗಳ ಮೂಲಸೌಕರ್ಯಗಳ ವೃದ್ಧಿಗೆ ಪ್ರಯತ್ನಿಸಲಾಗುತ್ತದೆ ಎಂದರು.

      ಅಧ್ಯಕ್ಷತೆ ವಹಿಸಿದ ತುಮಕೂರು ವಿವಿ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ, ಅಮೇರಿಕ ಹಾಗೂ ಚೀನಾದ ಬಳಿಕ ಭಾರತವೇ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅತಿದೊಡ್ಡ ದೇಶವಾಗಿದೆ. ಆದರೆ ಅಂತಾರಾಷ್ಟ್ರೀಯ ಗುಣಮಟ್ಟದ ವಿವಿಗಳನ್ನು ರೂಪಿಸುವಲ್ಲಿ ನಾವು ಹಿಂದುಳಿದಿದ್ದೇವೆ ಎಂದರು.

      ವಿಶ್ವವಿದ್ಯಾನಿಲಯದಿಂದ ಹೊರಬರುವ ವಿದ್ಯಾರ್ಥಿಗಳ ಪೈಕಿ ಶೇ. 5 ಮಂದಿ ಮಾತ್ರ ಉದ್ಯೋಗಕ್ಕೆ ಅಗತ್ಯವಿರುವ ಕೌಶಲಗಳನ್ನು ಹೊಂದಿದ್ದಾರೆ ಎಂಬ ವರದಿಗಳಿವೆ. ಈ ಕೊರತೆಯನ್ನು ನಿವಾರಿಸಿ ಯುವ ಪದವೀಧರರು ವ್ಯಾಸಂಗ ಮಾಡುವ, ಬದುಕುವ ಹಾಗೂ ವಿವಿಧ ವೃತ್ತಿಗಳನ್ನು ಕೈಗೊಳ್ಳುವ ಕೌಶಲಗಳನ್ನು ಬೆಳೆಸಬೇಕಿದೆ ಎಂದರು.

     ನ್ಯಾಕ್ ಉಪ ಸಲಹೆಗಾರ ಡಾ. ದೇವೇಂದರ್ ಕೌಡೆ, ತುಮಕೂರು ವಿವಿ ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕ ಪ್ರೊ. ಕೆ. ಜಿ. ಪರಶುರಾಮ, ರೂಸಾ ನೋಡಲ್ ಅಧಿಕಾರಿ ಡಾ. ಎಚ್. ರಾಜೇಂದ್ರ ಬಾಬುಉಪಸ್ಥಿತರಿದ್ದರು.

(Visited 14 times, 1 visits today)
Previous Articleವಿವಿಧ ಬೇಡಿಕೆಗಳ ಈಡೇರಿಕೆಗೆ ಕೆಎಸ್‍ಆರ್‍ಟಿಸಿ ಕಾರ್ಮಿಕರ ಒತ್ತಾಯ
Next Article ಜೂನ್ 1 ರಿಂದ ಮಾವು ಮತ್ತು ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ
News Desk Benkiyabale

Related Posts

ಜಾಬ್ ಕಾರ್ಡ್ ಪಡೆಯಲು ಗ್ರಾಮಸ್ಥರಿಗೆ ಕರೆ

September 03, 2026 5:43 pm news

ಸೆ.೫ ರಿಂದ ಜಿಲ್ಲಾದ್ಯಂತ “ಪ್ರಜಾಸೇವೆ ಆಂದೋಲನ”- ಜಿಲ್ಲಾಧಿಕಾರಿ

September 03, 2026 5:42 pm news

ನಿರಂತರವಾಗಿ ಕ್ರೀಡೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಜಿ.ಬಿ. ಮಲ್ಲಪ್ಪ ಕರೆ

September 03, 2026 5:41 pm news
ತಾಜಾ ಸುದ್ಧಿಗಳು
news

ಜಾಬ್ ಕಾರ್ಡ್ ಪಡೆಯಲು ಗ್ರಾಮಸ್ಥರಿಗೆ ಕರೆ

September 03, 2026 5:43 pm
news

ಸೆ.೫ ರಿಂದ ಜಿಲ್ಲಾದ್ಯಂತ “ಪ್ರಜಾಸೇವೆ ಆಂದೋಲನ”- ಜಿಲ್ಲಾಧಿಕಾರಿ

September 03, 2026 5:42 pm
news

ನಿರಂತರವಾಗಿ ಕ್ರೀಡೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಜಿ.ಬಿ. ಮಲ್ಲಪ್ಪ ಕರೆ

September 03, 2026 5:41 pm
news

ಸ್ಲ0ಗಳಲ್ಲಿ ಅರ್ಹ ೧೧೧೦ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಕ್ರಮ: ಡಿಸಿ

September 03, 2026 5:39 pm
news

ಉಪ ಮುಖ್ಯಮಂತ್ರಿಗಳಿ0ದ ಪ್ರಜಾ ಸೇವಾ ಆಂದೋಲನಕ್ಕೆ ಚಾಲನೆ : ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ

September 03, 2026 5:37 pm
news

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

September 02, 2026 5:37 pm
Our Youtube Channel
Our Picks

ಜಾಬ್ ಕಾರ್ಡ್ ಪಡೆಯಲು ಗ್ರಾಮಸ್ಥರಿಗೆ ಕರೆ

September 03, 2026 5:43 pm

ಸೆ.೫ ರಿಂದ ಜಿಲ್ಲಾದ್ಯಂತ “ಪ್ರಜಾಸೇವೆ ಆಂದೋಲನ”- ಜಿಲ್ಲಾಧಿಕಾರಿ

September 03, 2026 5:42 pm

ನಿರಂತರವಾಗಿ ಕ್ರೀಡೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಜಿ.ಬಿ. ಮಲ್ಲಪ್ಪ ಕರೆ

September 03, 2026 5:41 pm

ಸ್ಲ0ಗಳಲ್ಲಿ ಅರ್ಹ ೧೧೧೦ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಕ್ರಮ: ಡಿಸಿ

September 03, 2026 5:39 pm

ಉಪ ಮುಖ್ಯಮಂತ್ರಿಗಳಿ0ದ ಪ್ರಜಾ ಸೇವಾ ಆಂದೋಲನಕ್ಕೆ ಚಾಲನೆ : ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ

September 03, 2026 5:37 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಜಾಬ್ ಕಾರ್ಡ್ ಪಡೆಯಲು ಗ್ರಾಮಸ್ಥರಿಗೆ ಕರೆ

By News Desk BenkiyabaleSeptember 03, 2026 5:43 pm

ತುಮಕೂರು: ತಾಲ್ಲೂಕಿನ ನೆಲಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಹಳ್ಳಿ ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ವಿಬಿ ಜಿ ರಾಮ್ ಜಿ…

ಸೆ.೫ ರಿಂದ ಜಿಲ್ಲಾದ್ಯಂತ “ಪ್ರಜಾಸೇವೆ ಆಂದೋಲನ”- ಜಿಲ್ಲಾಧಿಕಾರಿ

September 03, 2026 5:42 pm

ನಿರಂತರವಾಗಿ ಕ್ರೀಡೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಜಿ.ಬಿ. ಮಲ್ಲಪ್ಪ ಕರೆ

September 03, 2026 5:41 pm

ಸ್ಲ0ಗಳಲ್ಲಿ ಅರ್ಹ ೧೧೧೦ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಕ್ರಮ: ಡಿಸಿ

September 03, 2026 5:39 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.