BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್
  • ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು
  • ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ
  • ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ
  • ಕೆರೆ ಅಂಗಳದ ಗೂಡಂಗಡಿಗಳ ತೆರವು ಕಾರ್ಯಾಚರಣೆ
  • ಎನ್‌ಡಿಎ ಪಕ್ಷದ ಹೋರಾಟದ ಪಲವಾಗಿ ಜಿಲ್ಲೆಗೆ ಹೇಮಾವತಿ ನೀರು
  • ಸಣ್ಣ ಸಮುದಾಯಗಳು ಮುಂದೆ ಬರಬೇಕೆಂದರೆ  ಅವಕಾಶಗಳನ್ನು ಬಳಸಿಕೊಂಡಾಗ ಮಾತ್ರ ಸಾಧ್ಯ
  • ಚನ್ನಬಸವ ರಾಜೇಂದ್ರ ಸ್ವಾಮಿಗಳ ಮಾಸಿಕ ಪುಣ್ಯಸ್ಮರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಿವಿಧ ಬೇಡಿಕೆಗಳ ಈಡೇರಿಕೆಗೆ ಕೆಎಸ್‍ಆರ್‍ಟಿಸಿ ಕಾರ್ಮಿಕರ ಒತ್ತಾಯ
Trending

ವಿವಿಧ ಬೇಡಿಕೆಗಳ ಈಡೇರಿಕೆಗೆ ಕೆಎಸ್‍ಆರ್‍ಟಿಸಿ ಕಾರ್ಮಿಕರ ಒತ್ತಾಯ

By News Desk BenkiyabaleUpdated:May 28, 2019 6:37 pm

 ತುಮಕೂರು:

      ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಸಂಘಟನೆ, ಎಐಟಿಯುಸಿ ನೇತೃತ್ವದಲ್ಲಿ ನಗರದ ಕೇಂದ್ರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಲಾಯಿತು.

      ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ 6ನೇ ಸಮ್ಮೇಳನದ ತೀರ್ಮಾನದಂತೆ ರಾಜ್ಯ ಸರ್ಕಾರ ಕೆಎಸ್‍ಆರ್‍ಟಿಸಿ ಬೇಡಿಕೆಗಳನ್ನು ಈಡೇರಿಸಬೇಕು, ಕಾರ್ಮಿಕರ ಸಮಸ್ಯೆಗಳ ಬಗ್ಗೆ, ವೈದ್ಯಕೀಯ ಸೌಲಭ್ಯ, ಸಂಘದ ಮಾನ್ಯತಾ ಚುನಾವಣೆ ಹಾಗೂ ಕೆಎಸ್‍ಆರ್‍ಟಿಸಿ ನಿಗಮಗಳನ್ನು ಒಂದು ಮಾಡುವ ಮೂಲಕ ಕೆಎಸ್‍ಆರ್‍ಟಿಸಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತಪಡಿಸಲಾಯಿತು.

      ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಜಿಲ್ಲಾ ಗೌರವಾಧ್ಯಕ್ಷ ಗಿರೀಶ್ ಮಾತನಾಡಿ, ಕೆಎಸ್‍ಆರ್‍ಟಿಸಿಯನ್ನು ನಾಲ್ಕು ವಿಭಾಗಗಳಾಗಿ ವಿಭಜಿಸಿದ ನಂತರ ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದ್ದು, ಸಂಸ್ಥೆಯಲ್ಲಿ ದುಡಿಯುವ ಕಾರ್ಮಿಕರಿಗಾಗಲಿ, ಪ್ರಯಾಣಿಕರಿಗಾಗಲಿ ಇದರಿಂದ ಯಾವುದೇ ಉಪಯೋಗವಾಗಿಲ್ಲ, ಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ಕಾರ್ಮಿಕರು ಹೆಚ್ಚುವರಿ ಕೆಲಸ ಮಾಡಬೇಕಿದೆ. ಇದು ಸರ್ಕಾರದ ಅವೈಜ್ಞಾನಿಕ ನೀತಿಯೇ ಕಾರಣ ಎಂದು ಆರೋಪಿಸಿದರು.

      ನಾಲ್ಕು ನಿಗಮಗಳ ಹಣಕಾಸಿನ ಪರಿಸ್ಥಿತಿ ಶೋಚನೀಯವಾಗಿದ್ದು, ಕೆಎಸ್‍ಆರ್‍ಟಿಸಿಗೆ ಪುನಶ್ಚೇತನ ಕಲ್ಪಿಸಲು ಮೋಟಾರ್ ವೆಹಿಕಲ್ ತೆರಿಗೆ ರಿಯಾಯಿತಿ ನೀಡುವುದರ ಜೊತೆಗೆ ಡಿಸೇಲ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು, ಹೆದ್ದಾರಿಯ ಟೋಲ್ ಶುಲ್ಕವನ್ನು ರದ್ದುಗೊಳಿಸಬೇಕು, ಸರ್ಕಾರ ಪ್ರತಿ ವರ್ಷ ಒಂದು ಸಾವಿರ ಕೋಟಿ ಅನುದಾನ ನೀಡಬೇಕು, ಸಾಮಾಜಿಕ ಹೊಣೆಗಾರಿಕೆ ಬಾಬ್ತು ನೀಡುವುದರ ಜೊತೆಗೆ ನೌಕರರ ವೇತನವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.

      ಕಳೆದ ಹತ್ತಾರು ವರ್ಷಗಳಿಂದ ಸಾರಿಗೆ ನಿಗಮಗಳಲ್ಲಿ ಕಾರ್ಯಸ್ಥಳದಲ್ಲಿ ಹಿಂಸೆ, ಕಿರುಕುಳಗಳನ್ನು ತಾಳಲಾರದೇ ಹತಾಶರಾಗಿ ಆತ್ಮಹತ್ಯೆಗೆ ಅನೇಕ ನೌಕರರು ಶರಣಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರ ಮೇಲೆ ಶಿಸ್ತುಕ್ರಮದ ಹೆಸರಿನಲ್ಲಿ ಮತ್ತಷ್ಟು ಹಿಂಸೆ ನೀಡಲಾಗುತ್ತಿದೆ. ಆಡಳಿತ ವರ್ಗಗಳು ಇಂತಹ ಕೃತ್ಯಗಳನ್ನು ಇಲ್ಲಿಸಬೇಕು, ಕಿರುಕುಳ ಪ್ರಕರಣ ದಾಖಲಾದ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು, ಆತ್ಮಹತ್ಯೆಗೆ ಶರಣಾದ ನೌಕರರಿಗೆ 25 ಲಕ್ಷ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.

      ನಾಲ್ಕು ಸಾರಿಗೆ ನಿಗಮಗಳಲ್ಲಿ ಒಂದು ಲಕ್ಷ ಹದಿನೈದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಾರಿಗೆ ನಿಗಮಗಳಲ್ಲಿ ಕಾರ್ಮಿಕರಿಗೆ ಒದಗಿಸಿರುವ ವೈದ್ಯಕೀಯ ವ್ಯವಸ್ಥೆಯು ಅಸಮರ್ಪಕವಾಗಿದ್ದು, ಒತ್ತಡದಲ್ಲಿ ಕೆಲಸ ಮಾಡುವ ನೌಕರರಿಗೆ ಸಹಜವಾಗಿ ಕಾಯಿಲೆಗೆ ಒಳಗಾಗುತ್ತಿದ್ದು,ಕೈಗಾರಿಕಾ ನ್ಯಾಯಾಧಿಕರಣದ ಅನ್ವಯ ವೈದ್ಯಕೀಯ ಖರ್ಚುಗಳನ್ನು ಆಡಳಿತ ಮಂಡಳಿಗಳೇ ನೀಡಬೇಕು, ನೌಕರರು ಹಾಗೂ ಅವರ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಮಗ್ರ ಯೋಜನೆಯನ್ನು ರೂಪಿಸುವಂತೆ ಒತ್ತಾಯಿಸಿದರು.

      ಮಧುಗಿರಿ ಡಿಪೋ ಎಐಟಿಯುಸಿ ಕಾರ್ಯದರ್ಶಿ ಬಿ.ಟಿ.ನಾಗರಾಜು ಮಾತನಾಡಿ ಮಧುಗಿರಿ ಡಿಪೋನಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ನಿಗದಿತ ರಜೆಗಳನ್ನು ನೀಡುತ್ತಿಲ್ಲ, ಡಿಪೋ ಮ್ಯಾನೇಜರ್ ನೌಕರರಿಗೆ ಡಬಲ್ ಡ್ಯೂಟಿ ಮಾಡಿಸುವ ಮೂಲಕ ಅಧಿಕ ಕಾರ್ಯ ಒತ್ತಡವನ್ನು ಹಾಕುತ್ತಿದ್ದು, ಕೆಲಸಕ್ಕೆ ತಕ್ಕಂತೆ ಸಂಬಳವನ್ನು ನೀಡದೇ ತಾರತಮ್ಯವನ್ನು ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೂ ಸ್ಪಂದಿಸುತ್ತಿಲ್ಲ, ಕಾರ್ಮಿಕರ ಮುಖಂಡರನ್ನು ಗುರಿಯಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

      ಪ್ರತಿಭಟನೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ರಾಜಗೋಪಾಲ್, ತುರುವೇಕೆರೆ ಅನಂತ್, ತಿಪಟೂರು ನಿರ್ವಾಹಕ ಮಹದೇವ್, ಕುಣಿಗಲ್ ಬೈರಪ್ಪ, ಕೆ.ಎಚ್.ದೇವರಾಜು, ಘಟಕ ಅಧ್ಯಕ್ಷ ಅಪ್ಸರ್‍ಪಾಷ, ಅಬ್ದುಲ್ ವಾಜೀದ್, ಈಶ್ವರಚಾರಿ, ಕೆ.ಎಂ.ನಾಗರಾಜು, ಮಧುಗಿರಿ ಘಟಕದ ಉಪಾಧ್ಯಕ್ಷ ಭೀಮಣ್ಣ ಸೇರಿದಂತೆ ಇತರರಿದ್ದರು.

(Visited 15 times, 1 visits today)
Previous Articleಕಾಂಗ್ರೆಸ್ ಸೋಲಿಗೆ ಮುಖ್ಯಮಂತ್ರಿ ಆಡಳಿತ ಕಾರಣ: ಆರ್ ರಾಜೇಂದ್ರ
Next Article ವಿವಿಗಳಲ್ಲಿ ಶೈಕ್ಷಣಿಕ, ಭೌತಿಕ ಪ್ರಗತಿ ಅಗತ್ಯ: ಡಾ. ಎಸ್. ಎ. ಕೋರಿ
News Desk Benkiyabale

Related Posts

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

August 18, 2026 5:00 pm news

ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

August 18, 2026 4:58 pm news

ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

August 18, 2026 4:56 pm news
ತಾಜಾ ಸುದ್ಧಿಗಳು
news

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

August 18, 2026 5:00 pm
news

ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

August 18, 2026 4:58 pm
news

ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

August 18, 2026 4:56 pm
news

ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ

August 18, 2026 4:54 pm
news

ಕೆರೆ ಅಂಗಳದ ಗೂಡಂಗಡಿಗಳ ತೆರವು ಕಾರ್ಯಾಚರಣೆ

August 18, 2026 3:33 pm
news

ಎನ್‌ಡಿಎ ಪಕ್ಷದ ಹೋರಾಟದ ಪಲವಾಗಿ ಜಿಲ್ಲೆಗೆ ಹೇಮಾವತಿ ನೀರು

August 17, 2026 5:14 pm
Our Youtube Channel
Our Picks

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

August 18, 2026 5:00 pm

ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

August 18, 2026 4:58 pm

ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

August 18, 2026 4:56 pm

ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ

August 18, 2026 4:54 pm

ಕೆರೆ ಅಂಗಳದ ಗೂಡಂಗಡಿಗಳ ತೆರವು ಕಾರ್ಯಾಚರಣೆ

August 18, 2026 3:33 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

By News Desk BenkiyabaleAugust 18, 2026 5:00 pm

ಕೊರಟಗೆರೆ: ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಬಿಟ್ಟು ಹೊರಗೆ ಹೋಗುವುದಿಲ್ಲ ಎಂದು ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳು…

ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

August 18, 2026 4:58 pm

ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

August 18, 2026 4:56 pm

ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ

August 18, 2026 4:54 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.